ಅದೇ ಸಮಯದಲ್ಲಿ ಝಕರಿಯ್ಯಾ(ಅ) ತನ್ನ ಪ್ರಭುವಿನೊಡನೆ ಪ್ರಾರ್ಥಿಸಿದರು: 'ಓ ನನ್ನ ಪ್ರಭುವೇ, ನಿನ್ನವತಿಯಿಂದ ನನಗೆ ಸುನೀತವಾದ ಸಂತತಿಯನ್ನು ದಯಪಾಲಿಸು. ನಿಸ್ಸಂದೇಹವಾಗಿಯು ನೀನು ಪ್ರಾರ್ಥನೆಯನ್ನು ಆಲಿಸುವವನಾಗಿರುವೆ'.
ತರುವಾಯ ಅವರು ಕೋಣೆಯಲ್ಲಿ ನಮಾಝ್ ಮಾಡುತ್ತಾ ನಿಂತಿದ್ದಾಗ ಮಲಕ್ (ದೂತರು) ಅವರಿಗೆ ಕರೆದು ಹೇಳಿದರು: ನಿಸ್ಸಂಶಯವಾಗಿಯು ಅಲ್ಲಾಹನು ನಿಮಗೆ 'ಯಾಹ್ಯಾರ (ಪುತ್ರನ) ಕುರಿತು ಶುಭವಾರ್ತೆಯನ್ನು ನೀಡುತ್ತಾನೆ. ಅವರು (ಯಾಹ್ಯಾ) ಅಲ್ಲಾಹನ ವಚನವನ್ನು (ಈಸಾರವರನ್ನು) ಸತ್ಯವೆಂದು ಸಮರ್ಥಿಸುವವರೂ, ನಾಯಕರೂ, ಆತ್ಮಸಂಯಮಿಯೂ, ಸಜ್ಜನರಲ್ಲಿ ಸೇರಿದ ಪೈಗಂಬರರಾಗಿರುವರು'.
ಝಕರಿಯ್ಯಾ ಹೇಳಿದರು: 'ಓ ನನ್ನ ಪ್ರಭು, ನನಗೆ ಮಗು ಆಗುವುದಾದರೂ ಹೇಗೆ” ನಾನು ವೃದ್ಧನಾಗಿರುವೆನು ಮತ್ತು ನನ್ನ ಪತ್ನಿಯು ಬಂಜೆಯಾಗಿದ್ದಾಳೆ'. ಅಲ್ಲಾಹನು ಹೇಳಿದನು: 'ಇದೇ ಪ್ರಕಾರ ಅಲ್ಲಾಹನು ತಾನಿಚ್ಛಿಸುವುದನ್ನು ಮಾಡುತ್ತಾನೆ.
ಅವರು ಹೇಳಿದರು: 'ಓ ನನ್ನ ಪ್ರಭೂ, ನನಗೋಸ್ಕರ ಇದರ ಯಾವುದಾದರೂ ಒಂದು ಕುರುಹನ್ನು ನಿಶ್ಚಯಿಸಿಕೊಡು'. ಅವನು ಹೇಳಿದನು: ನೀವು ಜನರೊಂದಿಗೆ ಮೂರು ದಿನಗಳ ಕಾಲ ಸನ್ನೆಯ ಮೂಲಕವಲ್ಲದೆ ಮಾತನಾಡದಿರುವುದು ನಿಮಗಿರುವ ಸಂಕೇತವಾಗಿದೆ. ನೀವು ನಿಮ್ಮ ಪ್ರಭುವನ್ನು ಅತ್ಯಧಿಕವಾಗಿ ಸ್ಮರಿಸಿರಿ. ಮತ್ತು ಸಂಜೆ ಮುಂಜಾನೆಗಳಲ್ಲಿ ಅವನ ಪಾವನತೆಯನ್ನು ಕೊಂಡಾಡಿರಿ.
ಮಲಕ್‌ಗಳು ಮರ್ಯಮರ ಬಳಿ ಬಂದು ಹೇಳಿದ ಸಂದರ್ಭ: 'ಓ ಮರ್ಯಮ್, ಖಂಡಿತವಾಗಿಯು ಅಲ್ಲಾಹನು ನಿಮ್ಮನ್ನು ಆಯ್ಕೆ ಮಾಡಿರುವನು ಮತ್ತು ನಿಮ್ಮನ್ನು, ಪವಿತ್ರಗೊಳಿಸಿರುವನು ಮತ್ತು ಜಗತ್ತಿನ ಸ್ತಿçÃಯರ ಪೈಕಿ ನಿಮ್ಮನ್ನು ಆರಿಸಿಕೊಂಡಿರುವನು'.
ಓ ಪೈಗಂಬರರೇ ಇವು ನಾವು ನಿಮಗೆ ದಿವ್ಯ ಸಂದೇಶವಾಗಿ ತಲುಪಿಸುವ ಅಗೋಚರ ವಿಷಯಗಳಲ್ಲಾಗಿವೆ. ಅವರಲ್ಲಿ ಯಾರು ಮರ್ಯಮರನ್ನು ಪೋಷಿಸುತ್ತಾರೆಂದು ನಿರ್ಧರಿಸಲು ಅವರು ತಮ್ಮ ಲೇಖನಿಗಳನ್ನು (ನದಿಯಲ್ಲಿ) ಹಾಕಿದಾಗ ನೀವು ಅವರ ಬಳಿಯಿರಲಿಲ್ಲ. ಅವರ ತರ್ಕದ ಸಂದರ್ಭದಲ್ಲಾಗಲೀ ನೀವು ಅವರ ಬಳಿಯಿರಲಿಲ್ಲ.
ಮಲಕ್‌ಗಳು ಹೇಳಿದ ಸಂದರ್ಭ: 'ಓ ಮರ್ಯಮ್, ಖಂಡಿತವಾಗಿಯು ಅಲ್ಲಾಹನು ತನ್ನ ಒಂದು 'ವಚನ'ದ ಕುರಿತು ನಿಮಗೆ ಶುಭವಾರ್ತೆ ನೀಡುತ್ತಾನೆ. ಅವರ ಹೆಸರು ಮರ್ಯಮರ ಪುತ್ರ ಈಸಾ ಮಸೀಹ್ ಎಂದಾಗಿದೆ ಅವರು ಇಹದಲ್ಲೂ, ಪರದಲ್ಲೂ ಆದರಣಿಯರೂ ಮತ್ತು ನನ್ನ ಸಮೀಪಸ್ಥರಲ್ಲಿ ಸೇರಿದವರೂ ಆಗಿರುವರು.