Kilniojo Korano reikšmių vertimas - Vertimas į kanadiečių k. - Bašyr Meisuri

Puslapio numeris:close

external-link copy
38 : 3

هُنَالِكَ دَعَا زَكَرِیَّا رَبَّهٗ ۚ— قَالَ رَبِّ هَبْ لِیْ مِنْ لَّدُنْكَ ذُرِّیَّةً طَیِّبَةً ۚ— اِنَّكَ سَمِیْعُ الدُّعَآءِ ۟

ಅದೇ ಸಮಯದಲ್ಲಿ ಝಕರಿಯ್ಯಾ(ಅ) ತನ್ನ ಪ್ರಭುವಿನೊಡನೆ ಪ್ರಾರ್ಥಿಸಿದರು: 'ಓ ನನ್ನ ಪ್ರಭುವೇ, ನಿನ್ನವತಿಯಿಂದ ನನಗೆ ಸುನೀತವಾದ ಸಂತತಿಯನ್ನು ದಯಪಾಲಿಸು. ನಿಸ್ಸಂದೇಹವಾಗಿಯು ನೀನು ಪ್ರಾರ್ಥನೆಯನ್ನು ಆಲಿಸುವವನಾಗಿರುವೆ'. info
التفاسير:

external-link copy
39 : 3

فَنَادَتْهُ الْمَلٰٓىِٕكَةُ وَهُوَ قَآىِٕمٌ یُّصَلِّیْ فِی الْمِحْرَابِ ۙ— اَنَّ اللّٰهَ یُبَشِّرُكَ بِیَحْیٰی مُصَدِّقًا بِكَلِمَةٍ مِّنَ اللّٰهِ وَسَیِّدًا وَّحَصُوْرًا وَّنَبِیًّا مِّنَ الصّٰلِحِیْنَ ۟

ತರುವಾಯ ಅವರು ಕೋಣೆಯಲ್ಲಿ ನಮಾಝ್ ಮಾಡುತ್ತಾ ನಿಂತಿದ್ದಾಗ ಮಲಕ್ (ದೂತರು) ಅವರಿಗೆ ಕರೆದು ಹೇಳಿದರು: ನಿಸ್ಸಂಶಯವಾಗಿಯು ಅಲ್ಲಾಹನು ನಿಮಗೆ 'ಯಾಹ್ಯಾರ (ಪುತ್ರನ) ಕುರಿತು ಶುಭವಾರ್ತೆಯನ್ನು ನೀಡುತ್ತಾನೆ. ಅವರು (ಯಾಹ್ಯಾ) ಅಲ್ಲಾಹನ ವಚನವನ್ನು (ಈಸಾರವರನ್ನು) ಸತ್ಯವೆಂದು ಸಮರ್ಥಿಸುವವರೂ, ನಾಯಕರೂ, ಆತ್ಮಸಂಯಮಿಯೂ, ಸಜ್ಜನರಲ್ಲಿ ಸೇರಿದ ಪೈಗಂಬರರಾಗಿರುವರು'. info
التفاسير:

external-link copy
40 : 3

قَالَ رَبِّ اَنّٰی یَكُوْنُ لِیْ غُلٰمٌ وَّقَدْ بَلَغَنِیَ الْكِبَرُ وَامْرَاَتِیْ عَاقِرٌ ؕ— قَالَ كَذٰلِكَ اللّٰهُ یَفْعَلُ مَا یَشَآءُ ۟

ಝಕರಿಯ್ಯಾ ಹೇಳಿದರು: 'ಓ ನನ್ನ ಪ್ರಭು, ನನಗೆ ಮಗು ಆಗುವುದಾದರೂ ಹೇಗೆ” ನಾನು ವೃದ್ಧನಾಗಿರುವೆನು ಮತ್ತು ನನ್ನ ಪತ್ನಿಯು ಬಂಜೆಯಾಗಿದ್ದಾಳೆ'. ಅಲ್ಲಾಹನು ಹೇಳಿದನು: 'ಇದೇ ಪ್ರಕಾರ ಅಲ್ಲಾಹನು ತಾನಿಚ್ಛಿಸುವುದನ್ನು ಮಾಡುತ್ತಾನೆ. info
التفاسير:

external-link copy
41 : 3

قَالَ رَبِّ اجْعَلْ لِّیْۤ اٰیَةً ؕ— قَالَ اٰیَتُكَ اَلَّا تُكَلِّمَ النَّاسَ ثَلٰثَةَ اَیَّامٍ اِلَّا رَمْزًا ؕ— وَاذْكُرْ رَّبَّكَ كَثِیْرًا وَّسَبِّحْ بِالْعَشِیِّ وَالْاِبْكَارِ ۟۠

ಅವರು ಹೇಳಿದರು: 'ಓ ನನ್ನ ಪ್ರಭೂ, ನನಗೋಸ್ಕರ ಇದರ ಯಾವುದಾದರೂ ಒಂದು ಕುರುಹನ್ನು ನಿಶ್ಚಯಿಸಿಕೊಡು'. ಅವನು ಹೇಳಿದನು: ನೀವು ಜನರೊಂದಿಗೆ ಮೂರು ದಿನಗಳ ಕಾಲ ಸನ್ನೆಯ ಮೂಲಕವಲ್ಲದೆ ಮಾತನಾಡದಿರುವುದು ನಿಮಗಿರುವ ಸಂಕೇತವಾಗಿದೆ. ನೀವು ನಿಮ್ಮ ಪ್ರಭುವನ್ನು ಅತ್ಯಧಿಕವಾಗಿ ಸ್ಮರಿಸಿರಿ. ಮತ್ತು ಸಂಜೆ ಮುಂಜಾನೆಗಳಲ್ಲಿ ಅವನ ಪಾವನತೆಯನ್ನು ಕೊಂಡಾಡಿರಿ. info
التفاسير:

external-link copy
42 : 3

وَاِذْ قَالَتِ الْمَلٰٓىِٕكَةُ یٰمَرْیَمُ اِنَّ اللّٰهَ اصْطَفٰىكِ وَطَهَّرَكِ وَاصْطَفٰىكِ عَلٰی نِسَآءِ الْعٰلَمِیْنَ ۟

ಮಲಕ್‌ಗಳು ಮರ್ಯಮರ ಬಳಿ ಬಂದು ಹೇಳಿದ ಸಂದರ್ಭ: 'ಓ ಮರ್ಯಮ್, ಖಂಡಿತವಾಗಿಯು ಅಲ್ಲಾಹನು ನಿಮ್ಮನ್ನು ಆಯ್ಕೆ ಮಾಡಿರುವನು ಮತ್ತು ನಿಮ್ಮನ್ನು, ಪವಿತ್ರಗೊಳಿಸಿರುವನು ಮತ್ತು ಜಗತ್ತಿನ ಸ್ತಿçÃಯರ ಪೈಕಿ ನಿಮ್ಮನ್ನು ಆರಿಸಿಕೊಂಡಿರುವನು'. info
التفاسير:

external-link copy
43 : 3

یٰمَرْیَمُ اقْنُتِیْ لِرَبِّكِ وَاسْجُدِیْ وَارْكَعِیْ مَعَ الرّٰكِعِیْنَ ۟

'ಓ ಮರ್ಯಮ್, ನಿಮ್ಮ ಪ್ರಭುವಿಗೆ ಶರಣಾಗಿರಿ ಮತ್ತು ಸಾಷ್ಟಾಂಗವೆರಗಿರಿ. ಮತ್ತು ಬಾಗುವವರೊಂದಿಗೆ ಬಾಗಿರಿ'. info
التفاسير:

external-link copy
44 : 3

ذٰلِكَ مِنْ اَنْۢبَآءِ الْغَیْبِ نُوْحِیْهِ اِلَیْكَ ؕ— وَمَا كُنْتَ لَدَیْهِمْ اِذْ یُلْقُوْنَ اَقْلَامَهُمْ اَیُّهُمْ یَكْفُلُ مَرْیَمَ ۪— وَمَا كُنْتَ لَدَیْهِمْ اِذْ یَخْتَصِمُوْنَ ۟

ಓ ಪೈಗಂಬರರೇ ಇವು ನಾವು ನಿಮಗೆ ದಿವ್ಯ ಸಂದೇಶವಾಗಿ ತಲುಪಿಸುವ ಅಗೋಚರ ವಿಷಯಗಳಲ್ಲಾಗಿವೆ. ಅವರಲ್ಲಿ ಯಾರು ಮರ್ಯಮರನ್ನು ಪೋಷಿಸುತ್ತಾರೆಂದು ನಿರ್ಧರಿಸಲು ಅವರು ತಮ್ಮ ಲೇಖನಿಗಳನ್ನು (ನದಿಯಲ್ಲಿ) ಹಾಕಿದಾಗ ನೀವು ಅವರ ಬಳಿಯಿರಲಿಲ್ಲ. ಅವರ ತರ್ಕದ ಸಂದರ್ಭದಲ್ಲಾಗಲೀ ನೀವು ಅವರ ಬಳಿಯಿರಲಿಲ್ಲ. info
التفاسير:

external-link copy
45 : 3

اِذْ قَالَتِ الْمَلٰٓىِٕكَةُ یٰمَرْیَمُ اِنَّ اللّٰهَ یُبَشِّرُكِ بِكَلِمَةٍ مِّنْهُ ۙۗ— اسْمُهُ الْمَسِیْحُ عِیْسَی ابْنُ مَرْیَمَ وَجِیْهًا فِی الدُّنْیَا وَالْاٰخِرَةِ وَمِنَ الْمُقَرَّبِیْنَ ۟ۙ

ಮಲಕ್‌ಗಳು ಹೇಳಿದ ಸಂದರ್ಭ: 'ಓ ಮರ್ಯಮ್, ಖಂಡಿತವಾಗಿಯು ಅಲ್ಲಾಹನು ತನ್ನ ಒಂದು 'ವಚನ'ದ ಕುರಿತು ನಿಮಗೆ ಶುಭವಾರ್ತೆ ನೀಡುತ್ತಾನೆ. ಅವರ ಹೆಸರು ಮರ್ಯಮರ ಪುತ್ರ ಈಸಾ ಮಸೀಹ್ ಎಂದಾಗಿದೆ ಅವರು ಇಹದಲ್ಲೂ, ಪರದಲ್ಲೂ ಆದರಣಿಯರೂ ಮತ್ತು ನನ್ನ ಸಮೀಪಸ್ಥರಲ್ಲಿ ಸೇರಿದವರೂ ಆಗಿರುವರು. info
التفاسير: