Kilniojo Korano reikšmių vertimas - Vertimas į kanadiečių k. - Bašyr Meisuri

Puslapio numeris:close

external-link copy
133 : 3

وَسَارِعُوْۤا اِلٰی مَغْفِرَةٍ مِّنْ رَّبِّكُمْ وَجَنَّةٍ عَرْضُهَا السَّمٰوٰتُ وَالْاَرْضُ ۙ— اُعِدَّتْ لِلْمُتَّقِیْنَ ۟ۙ

ನಿಮ್ಮ ಪ್ರಭುವಿನ ಕ್ಷಮಾದಾನ ಹಾಗೂ ಭೂಮಿ, ಆಕಾಶಗಳಷ್ಟು ವಿಶಾಲವಾದ ಸ್ವರ್ಗದೆಡೆಗೆ ನೀವು ಧಾವಿಸಿರಿ. ಅದನ್ನು ಭಯಭಕ್ತಿ ಪಾಲಿಸುವವರಿಗಾಗಿ ಸಿದ್ಧಗೊಳಿಸಲಾಗಿದೆ. info
التفاسير:

external-link copy
134 : 3

الَّذِیْنَ یُنْفِقُوْنَ فِی السَّرَّآءِ وَالضَّرَّآءِ وَالْكٰظِمِیْنَ الْغَیْظَ وَالْعَافِیْنَ عَنِ النَّاسِ ؕ— وَاللّٰهُ یُحِبُّ الْمُحْسِنِیْنَ ۟ۚ

ಅವರು ಅನುಕೂಲ ಸ್ಥಿತಿಯಲ್ಲೂ, ದುಸ್ಥಿತಿಯಲ್ಲೂ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರು ಕೋಪವನ್ನು ನುಂಗಿಕೊಳ್ಳುವವರು ಮತ್ತು ಜನರನ್ನು ಮನ್ನಿಸುವವರಾಗಿದ್ದಾರೆ. ಅಲ್ಲಾಹನು ಆ ಸತ್ಕರ್ಮಿಗಳನ್ನು ಪ್ರೀತಿಸುತ್ತಾನೆ. info
التفاسير:

external-link copy
135 : 3

وَالَّذِیْنَ اِذَا فَعَلُوْا فَاحِشَةً اَوْ ظَلَمُوْۤا اَنْفُسَهُمْ ذَكَرُوا اللّٰهَ فَاسْتَغْفَرُوْا لِذُنُوْبِهِمْ۫— وَمَنْ یَّغْفِرُ الذُّنُوْبَ اِلَّا اللّٰهُ ۪۫— وَلَمْ یُصِرُّوْا عَلٰی مَا فَعَلُوْا وَهُمْ یَعْلَمُوْنَ ۟

ಅವರು ಏನಾದರೂ ನೀಚಕೃತ್ಯವೆಸಗಿದರೆ ಅಥವಾ ಅವರು ಯಾವುದಾದರೂ ಪಾಪ ಮಾಡಿದರೆ ಕೂಡಲೇ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆ ಬೇಡುತ್ತಾರೆ. ವಾಸ್ತವದಲ್ಲಿ ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಇನ್ನಾರಿದ್ದಾರೆ? ಮತ್ತು ಅವರು ತಿಳಿದೂ ಯಾವುದೇ ಕೆಡುಕಿನಲ್ಲಿ ಪಟ್ಟುಹಿಡಿಯಲಾರರು. info
التفاسير:

external-link copy
136 : 3

اُولٰٓىِٕكَ جَزَآؤُهُمْ مَّغْفِرَةٌ مِّنْ رَّبِّهِمْ وَجَنّٰتٌ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— وَنِعْمَ اَجْرُ الْعٰمِلِیْنَ ۟ؕ

ಅಂಥಹವರಿಗೆ ಇರುವ ಪ್ರತಿಫಲವು ತಮ್ಮ ಪ್ರಭುವಿನ ಕಡೆಯಿಂದಿರುವ ಪಾಪವಿಮೋಚನೆ ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಾಗಿವೆ. ಅಲ್ಲಿ ಅವರು ಶಾಶ್ವತವಾಗಿರುವರು. ಆ ಸತ್ಕರ್ಮ ಮಾಡುವವರ ಪ್ರತಿಫಲವು ಅದೆಷ್ಟು ಉತ್ತಮವಾಗಿದೆ! info
التفاسير:

external-link copy
137 : 3

قَدْ خَلَتْ مِنْ قَبْلِكُمْ سُنَنٌ ۙ— فَسِیْرُوْا فِی الْاَرْضِ فَانْظُرُوْا كَیْفَ كَانَ عَاقِبَةُ الْمُكَذِّبِیْنَ ۟

ನಿಮಗಿಂತ ಮುಂಚೆಯ ಅನೇಕ ಸಮುದಾಯಗಳ ಘಟನೆಗಳು ಗತಿಸಿವೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ (ದಿವ್ಯ ಸಂದೇಶಗಳನ್ನು) ನಿಷೇಧಿಸಿದವರ ಅಂತ್ಯ ಹೇಗಾಯಿತೆಂಬುದನ್ನು ನೋಡಿರಿ. info
التفاسير:

external-link copy
138 : 3

هٰذَا بَیَانٌ لِّلنَّاسِ وَهُدًی وَّمَوْعِظَةٌ لِّلْمُتَّقِیْنَ ۟

ಇದು (ಕುರ್‌ಆನ್) ಸಾರ್ವಜನಿಕರಿಗೆ ಸ್ಪಷ್ಟ ವಿವರಣೆಯಾಗಿದೆ ಮತ್ತು ಭಯಭಕ್ತಿಯುಳ್ಳವರಿಗೆ ಸನ್ಮಾರ್ಗದರ್ಶನ ಹಾಗೂ ಉಪದೇಶವಾಗಿದೆ. info
التفاسير:

external-link copy
139 : 3

وَلَا تَهِنُوْا وَلَا تَحْزَنُوْا وَاَنْتُمُ الْاَعْلَوْنَ اِنْ كُنْتُمْ مُّؤْمِنِیْنَ ۟

ನೀವು ಧೈರ್ಯಗುಂದಬೇಡಿರಿ ಮತ್ತು ವ್ಯಥೆ ಪಡಬೇಡಿರಿ. ನೀವು ವಿಶ್ವಾಸಿಗಳಾಗಿದ್ದರೆ ನೀವೇ ಜಯಶಾಲಿಗಳಾಗುವಿರಿ. info
التفاسير:

external-link copy
140 : 3

اِنْ یَّمْسَسْكُمْ قَرْحٌ فَقَدْ مَسَّ الْقَوْمَ قَرْحٌ مِّثْلُهٗ ؕ— وَتِلْكَ الْاَیَّامُ نُدَاوِلُهَا بَیْنَ النَّاسِ ۚ— وَلِیَعْلَمَ اللّٰهُ الَّذِیْنَ اٰمَنُوْا وَیَتَّخِذَ مِنْكُمْ شُهَدَآءَ ؕ— وَاللّٰهُ لَا یُحِبُّ الظّٰلِمِیْنَ ۟ۙ

ನಿಮಗೆ ಗಾಯಗಳಾಗಿದ್ದರೆ ನಿಮ್ಮ ಎದುರಾಳಿಗಳೂ ಸಹ ಇದೇ ರೀತಿಯ ಗಾಯಗಳಾಗಿದ್ದವು. ನಾವು ಈ ದಿನಗಳನ್ನು ಜನರ ನಡುವೆ ಬದಲಾಯಿಸುತ್ತಿರುತ್ತೇವೆ. ಇದು (ಉಹುದ್‌ನ ಪರಾಜಯವು) ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಅರಿಯಲಿಕ್ಕೂ, ನಿಮ್ಮಲ್ಲಿ ಕೆಲವರನ್ನು ಹುತಾತ್ಮರನ್ನಾಗಿ ಮಾಡಲಿಕ್ಕು ಆಗಿತ್ತು. ಅಲ್ಲಾಹನು ಅಕ್ರಮಿಗಳನ್ನು ಪ್ರೀತಿಸುವುದಿಲ್ಲ. info
التفاسير: