Kilniojo Korano reikšmių vertimas - Vertimas į kanadiečių k. - Bašyr Meisuri

Puslapio numeris:close

external-link copy
92 : 3

لَنْ تَنَالُوا الْبِرَّ حَتّٰی تُنْفِقُوْا مِمَّا تُحِبُّوْنَ ؕ۬— وَمَا تُنْفِقُوْا مِنْ شَیْءٍ فَاِنَّ اللّٰهَ بِهٖ عَلِیْمٌ ۟

ನೀವು ತಮಗೆ ಪ್ರಿಯವಾದ ವಸ್ತುಗಳಿಂದ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರೆಗೆ ನಿಮಗೆ ಪುಣ್ಯದ ಉನ್ನತ ದರ್ಜೆಗೆ ತಲುಪಲು ಸಾಧ್ಯವೇ ಇಲ್ಲಾ. ನೀವು ಏನನ್ನು ಖರ್ಚು ಮಾಡುವುದಾಗಿದ್ದರೂ ಖಂಡಿತವಾಗಿಯು ಅಲ್ಲಾಹನು ಅದರ ಕುರಿತು ಚೆನ್ನಾಗಿ ಅರಿಯುವವನಾಗಿದ್ದಾನೆ. info
التفاسير:

external-link copy
93 : 3

كُلُّ الطَّعَامِ كَانَ حِلًّا لِّبَنِیْۤ اِسْرَآءِیْلَ اِلَّا مَا حَرَّمَ اِسْرَآءِیْلُ عَلٰی نَفْسِهٖ مِنْ قَبْلِ اَنْ تُنَزَّلَ التَّوْرٰىةُ ؕ— قُلْ فَاْتُوْا بِالتَّوْرٰىةِ فَاتْلُوْهَاۤ اِنْ كُنْتُمْ صٰدِقِیْنَ ۟

ತೌರಾತ್ ಅವತೀರ್ಣವಾಗುವುದಕ್ಕೆ ಮೊದಲು (ಪೈಗಂಬರ್) (ಯಾಕೂಬ್) ತಮ್ಮ ಮೇಲೆ ಯಾವುದನ್ನು ನಿಷಿದ್ಧಗೊಳಿಸಿದ್ದ ವಸ್ತುಗಳ ಹೊರತು (ಮುಸ್ಲಿಮರಿಗೆ ಧರ್ಮ ಬದ್ಧವಾಗಿರುವ) ಎಲ್ಲಾ ಆಹಾರ ಪದಾರ್ಥಗಳೂ ಇಸ್ರಾಯೀಲ್ ಸಂತತಿಗಳಿಗೂ ಧರ್ಮಸಮ್ಮತವಾಗಿದ್ದವು. ಓ ಪೈಗಂಬರರೇ ಹೇಳಿರಿ: ನೀವು ಸತ್ಯಸಂಧರಾಗಿದ್ದರೆ ತೌರಾತನ್ನು ತಂದು ಅದರ ಪಾರಾಯಣ ಮಾಡಿರಿ. info
التفاسير:

external-link copy
94 : 3

فَمَنِ افْتَرٰی عَلَی اللّٰهِ الْكَذِبَ مِنْ بَعْدِ ذٰلِكَ فَاُولٰٓىِٕكَ هُمُ الظّٰلِمُوْنَ ۟ؔ

ಇದರ ಬಳಿಕವೂ ಯಾರು ಅಲ್ಲಾಹನ ಹೆಸರಿನಲ್ಲಿ ಸುಳ್ಳನ್ನು ಹೆಣೆದರೂ ಅವರೇ ಅಕ್ರಮಿಗಳು. info
التفاسير:

external-link copy
95 : 3

قُلْ صَدَقَ اللّٰهُ ۫— فَاتَّبِعُوْا مِلَّةَ اِبْرٰهِیْمَ حَنِیْفًا ؕ— وَمَا كَانَ مِنَ الْمُشْرِكِیْنَ ۟

(ಪೈಗಂಬರರೇ) ಹೇಳಿರಿ: ಅಲ್ಲಾಹನು ಸತ್ಯವನ್ನು ಹೇಳಿದ್ದಾನೆ. ಮಿಥ್ಯವನ್ನು ತ್ಯಜಿಸಿ ಸತ್ಯವನ್ನು ಅನುಸರಿಸಿದ ಇಬ್ರಾಹೀಮ್(ಅ)ರ ಮಾರ್ಗವನ್ನು ಅನುಸರಿಸಿರಿ. ಅವರು ಬಹುದೇವಾರಾಧಕರಲ್ಲಿ ಸೇರಿರಲಿಲ್ಲ. info
التفاسير:

external-link copy
96 : 3

اِنَّ اَوَّلَ بَیْتٍ وُّضِعَ لِلنَّاسِ لَلَّذِیْ بِبَكَّةَ مُبٰرَكًا وَّهُدًی لِّلْعٰلَمِیْنَ ۟ۚ

ಮನುಷ್ಯರಿಗಾಗಿ ಸ್ಥಾಪಿಸಲ್ಪಟ್ಟ ಮೊಟ್ಟ ಮೊದಲ ಭವನವು ಮಕ್ಕ್ಕಾದಲ್ಲಿರುವುದೇ ಆಗಿದೆ. info
التفاسير:

external-link copy
97 : 3

فِیْهِ اٰیٰتٌۢ بَیِّنٰتٌ مَّقَامُ اِبْرٰهِیْمَ ۚ۬— وَمَنْ دَخَلَهٗ كَانَ اٰمِنًا ؕ— وَلِلّٰهِ عَلَی النَّاسِ حِجُّ الْبَیْتِ مَنِ اسْتَطَاعَ اِلَیْهِ سَبِیْلًا ؕ— وَمَنْ كَفَرَ فَاِنَّ اللّٰهَ غَنِیٌّ عَنِ الْعٰلَمِیْنَ ۟

ಅದರಲ್ಲಿ ಸ್ಪಷ್ಟ ದೃಷ್ಟಾಂತಗಳಿವೆ. ಇಬ್ರಾಹೀಮ್(ಅ)ರವರು ನಿಂತಿದ್ದ ಸ್ಥಳವಿದೆ. ಯಾರು ಅಲ್ಲಿಗೆ ಪ್ರವೇಶಿಸುತ್ತಾನೋ ಅವನು ನಿರ್ಭಯನಾಗುವನು. ಅಲ್ಲಾಹನು ಅದರೆಡೆಗೆ ತಲುಪಲು ಸಾಧ್ಯವಿರುವ ಜನರ ಮೇಲೆ ಆ ಭವನದ ಹಜ್ಜ್ಯಾತ್ರೆ ನಡೆಸುವುದನ್ನು ಕಡ್ಡಾಯಗೊಳಿಸಿದ್ದಾನೆ. ಇನ್ನು ಯಾರಾದರೂ (ಈ ಆದೇಶವನ್ನು) ನಿರಾಕರಿಸಿದರೆ ಅಲ್ಲಾಹನು ಸರ್ವಲೋಕದವರಿಂದ ನಿರಪೇಕ್ಷನಾಗಿದ್ದಾನೆ. info
التفاسير:

external-link copy
98 : 3

قُلْ یٰۤاَهْلَ الْكِتٰبِ لِمَ تَكْفُرُوْنَ بِاٰیٰتِ اللّٰهِ ۖۗ— وَاللّٰهُ شَهِیْدٌ عَلٰی مَا تَعْمَلُوْنَ ۟

ಪೈಗಂಬರರೇ ಹೇಳಿರಿ: ಓ ಗ್ರಂಥದವರೇ, ನೀವು ಅಲ್ಲಾಹನ ಸೂಕ್ತಿಗಳನ್ನು ಏಕೆ ನಿಷೇಧಿಸುತ್ತಿರುವಿರಿ? ನೀವು ಮಾಡುತ್ತಿರುವುದಕ್ಕೆಲ್ಲಾ ಅಲ್ಲಾಹನು ಸಾಕ್ಷಿಯಾಗಿದ್ದಾನೆ. info
التفاسير:

external-link copy
99 : 3

قُلْ یٰۤاَهْلَ الْكِتٰبِ لِمَ تَصُدُّوْنَ عَنْ سَبِیْلِ اللّٰهِ مَنْ اٰمَنَ تَبْغُوْنَهَا عِوَجًا وَّاَنْتُمْ شُهَدَآءُ ؕ— وَمَا اللّٰهُ بِغَافِلٍ عَمَّا تَعْمَلُوْنَ ۟

ಹೇಳಿರಿ: ಓ ಗ್ರಂಥದವರೇ, ವಿಶ್ವಾಸಿಗಳನ್ನು (ಅಲ್ಲಾಹನ ಮೇಲೆ ವಿಶ್ವಾಸವಿರಿಸಿದವನು) ಅಲ್ಲಾಹನ ಮಾರ್ಗದಿಂದ ನೀವೇಕೆ ತಡೆಯುತ್ತಿರುವಿರಿ. ಮತ್ತು ಅಡ್ಡದಾರಿಯಲ್ಲಿ ನಡೆಯಬೇಕೆಂದು ಬಯಸುತ್ತೀರಿ. ವಸ್ತುತಃ (ಅವನು ನೇರ ಮಾರ್ಗದಲ್ಲಿರುವ ಬಗ್ಗೆ) ನೀವೇ ಸಾಕ್ಷಿಗಳಾಗಿರುವಿರಿ. ಅಲ್ಲಾಹನು ನಿಮ್ಮ ಕರ್ಮಗಳ ಬಗ್ಗೆ ಅಲಕ್ಷö್ಯನಲ್ಲ. info
التفاسير:

external-link copy
100 : 3

یٰۤاَیُّهَا الَّذِیْنَ اٰمَنُوْۤا اِنْ تُطِیْعُوْا فَرِیْقًا مِّنَ الَّذِیْنَ اُوْتُوا الْكِتٰبَ یَرُدُّوْكُمْ بَعْدَ اِیْمَانِكُمْ كٰفِرِیْنَ ۟

ಓ ಸತ್ಯವಿಶ್ವಾಸಿಗಳೇ, ಗ್ರಂಥ ನೀಡಲ್ಪಟ್ಟವರ ಯಾವುದೇ ಒಂದು ಗುಂಪನ್ನು ನೀವು ಅನುಸರಿಸುವುದಾದರೆ ಅವರು ನಿಮ್ಮನ್ನು ನೀವು ವಿಶ್ವಾಸ ಸ್ವೀಕರಿಸಿದ ನಂತರ ನಿಷೇಧಿಗಳನ್ನಾಗಿ ಮಾರ್ಪಡಿಸುವರು. info
التفاسير: