‘ಓ ನಮ್ಮ ಪ್ರಭು, ನಾವು ನೀನು ಅವತೀರ್ಣಗೊಳಿಸಿರುವುದÀರಲ್ಲಿ ವಿಶ್ವಾಸ ವಿರಿಸಿದ್ದೇವೆ ಮತ್ತು ನಿನ್ನ ಸಂದೇಶವಾಹಕರನ್ನು ಅನುಸರಿಸಿದ್ದೇವೆ. ಇನ್ನು ನೀನು ನಮ್ಮನ್ನು ಸಾಕ್ಷö್ಯವಹಿಸಿದವರೊಂದಿಗೆ ದಾಖಲಿಸು'.
ಈಸಾ(ಅ)ರ ವೈರಿಗಳು (ಯಹೂದಿಗಳು ಈಸಾ(ಅ)ರವರ ಕೊಲೆಗೆ) ತಂತ್ರ ಪ್ರಯೋಗಿಸಿದರು. ಅಲ್ಲಾಹನು ಸಹ (ಅವರ ರಕ್ಷಣೆಗೆ) ಪ್ರತಿತಂತ್ರ ಪ್ರಯೋಗಿಸಿದನು. ಮತ್ತು ಅಲ್ಲಾಹನು ತಂತ್ರ ಪ್ರಯೋಗಿಸುವವರಲ್ಲಿ ಉತ್ತಮನಾಗಿದ್ದಾನೆ.
ಅಲ್ಲಾಹನು ಹೇಳಿದ ಸಂದರ್ಭ: 'ಓ ಈಸಾ, ಖಂಡಿತವಾಗಿಯು ನಾನು ನಿಮ್ಮನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಿರುವೆನು ಮತ್ತು ನಿಮ್ಮನ್ನು ನನ್ನ ಬಳಿಗೆ (ಆಕಾಶದತ್ತ) ಎತ್ತಿಕೊಳ್ಳಲಿರುವೆನು. ಸತ್ಯನಿಷೇಧಿಗಳ ಆರೋಪಗಳಿಂದ ನಿಮ್ಮನ್ನು ಪರಿಶುದ್ಧಗೊಳಿಸಲಿರುವೆನು ಮತ್ತು ನಿಮ್ಮ ಅನುಯಾಯಿಗಳನ್ನು ಪುನರುತ್ಥಾನ ದಿನದವರೆಗೂ ಸತ್ಯನಿಷೇಧಿಗಳ ಮೇಲೆ ಪ್ರಾಬಲ್ಯ ನೀಡುವೆನು'. ತರುವಾಯ ನಿಮ್ಮೆಲ್ಲರ ಮರಳುವಿಕೆಯು ನನ್ನೆಡೆಗೇ ಆಗಿದೆ. ನಿಮ್ಮ ನಡುವಿನ ಸಕಲ ಭಿನ್ನತೆಯ ವಿಷಯಗಳಲ್ಲಿ ನಾನು ನಿಮ್ಮ ನಡುವೆ ತೀರ್ಪು ನೀಡಲಿರುವೆನು.
ಈ ದಿವ್ಯಜ್ಞಾನ ಬಂದ ಬಳಿಕ ಯಾರಾದರು ಈಸಾ(ಅ)ರವರ ಬಗ್ಗೆ ತರ್ಕಿಸುತ್ತಾರೋ ಅವರಿಗೆ ಹೇಳಿರಿ: 'ಬನ್ನಿರಿ, ನಾವು ನಮ್ಮ ಮತ್ತು ನಿಮ್ಮ ಮಕ್ಕಳನ್ನು ಹಾಗೂ ನಮ್ಮ ಮತ್ತು ನಿಮ್ಮ ಸ್ತಿçÃಯರನ್ನು ಕರೆದುಕೊಳ್ಳೋಣ. ಸ್ವತಃ ನಾವೂ ಮತ್ತು ನೀವೂ ಹಾಜರಾಗೋಣ ತರುವಾಯ ನಾವು ದೈನ್ಯತೆಯಿಂದ ಬೇಡಿಕೊಳ್ಳೋಣ ಮತ್ತು ಸುಳ್ಳುಗಾರರನ್ನು ಶÀಪಿಸೋಣ.