ನೀವು ಮನುಕುಲಕ್ಕಾಗಿ ಸೃಷ್ಟಿಸಲಾದ ಅತ್ಯುತ್ತಮ ಸಮುದಾಯದವರಾಗಿರುವಿರಿ. ನೀವು ಸದಾಚಾರವನ್ನು ಆದೇಶಿಸತ್ತೀರಿ ಮತ್ತು ದುರಾಚಾರಗಳಿಂದ ತಡೆಯುತ್ತೀರಿ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಡುತ್ತೀರಿ. ಗ್ರಂಥದವರು ಸಹ ವಿಶ್ವಾಸವಿಡುತ್ತಿದ್ದರೆ ಅದು ಅವರ ಪಾಲಿಗೆ ಉತ್ತಮವಾಗುತ್ತಿತ್ತು. ಅವರ ಪೈಕಿ ಸತ್ಯವಿಶ್ವಾಸಿಗಳೂ ಇದ್ದಾರೆ. ಆದರೆ ಹೆಚ್ಚಿನವರು ಧಿಕ್ಕಾರಿಗಳಾಗಿದ್ದಾರೆ.
ಖಂಡಿತ ಅವರು (ಯಹೂದಿಗಳು) ನಿಮಗೆ ಕೆಲವು ಕೀಟಲೆಗಳಿಗಿಂತ ಹೆಚ್ಚಾಗಿ ಇನ್ನಾವ ತೊಂದರೆಯನ್ನುAಟು ಮಾಡಲಾರರು. ಇನ್ನು ಅವರು ನಿಮ್ಮೊಂದಿಗೆ ಯುದ್ಧ ಮಾಡಿದರೆ ಅವರು ಬೆನ್ನು ತಿರುಗಿಸಿ ಓಡುವರು ನಂತರ ಅವರಿಗೆ ಸಹಾಯವೂ ನೀಡಲಾಗದು.
ಅವರ ಮೇಲೆ ಎಲ್ಲೆಡೆಯಿಂದ ನಿಂದ್ಯತೆಯ ಪ್ರಹಾರ ಬಿದ್ದಿದೆ. ಆದರೆ ಅಲ್ಲಾಹನ ಅಥವಾ ಜನರ ಆಶ್ರಯದ ಹೊರತು. ಅವರು ಅಲ್ಲಾಹನ ಕ್ರೋಧಕ್ಕೆ ಪಾತ್ರರಾದರು ಮತ್ತು ಅವರ ಮೇಲೆ ದಾರಿದ್ರö್ಯವನ್ನು ಹಾಕಲಾಯಿತು. ಇದೇಕೆಂದರೆ ಅವರು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಿದ್ದರು ಮತ್ತು ಅನ್ಯಾಯವಾಗಿ ಪೈಗಂಬರರÀನ್ನು ಕೊಲೆಗೈಯುತ್ತಿದ್ದರು. ಇದು ಅವರ ಧಿಕ್ಕಾರ ಹಾಗೂ ಅತಿಕ್ರಮಗಳಿಗಿರುವ ಫಲವಾಗಿದೆ.
ಗ್ರಂಥದವರೆಲ್ಲರೂ ಸಮಾನರಲ್ಲ ಅವರಲ್ಲಿ ಒಂದು ಗುಂಪು (ಸತ್ಯದಲ್ಲಿ) ನೆಲೆಗೊಂಡಿರುವರು ರಾತ್ರಿಯ ಅಂತಿಮ ವೇಳೆಗಳಲ್ಲಿ ಅಲ್ಲಾಹನ ವಚನಗಳನ್ನು ಪಾರಾಯಣ ಮಾಡುವರು ಮತ್ತು ಸಾಷ್ಟಾಂಗವನ್ನು ಮಾಡುವವರೂ ಇದ್ದಾರೆ.
ಅವರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವನ್ನಿಡುತ್ತಾರೆ. ಸದಾಚಾರವನ್ನು ಆದೇಶಿಸುತ್ತಾರೆ, ದುರಾಚಾರಗಳಿಂದ ತಡೆಯುತ್ತಾರೆ ಮತ್ತು ಒಳಿತಿನ ಕಾರ್ಯಗಳಲ್ಲಿ ಶೀಘ್ರತೆಯನ್ನು ತೋರಿಸುತ್ತಾರೆ. ಮತ್ತು ಅವರೇ ಸಜ್ಜನರಲ್ಲಿ ಸೇರಿದವರಾಗಿದ್ದಾರೆ.