ಅಲ್ಲಾಹನು ನಿರ್ಗತಿಕನಾಗಿದ್ದಾನೆ. ಮತ್ತು ನಾವು ಧನಿಕರಾಗಿದ್ದೇವೆಂದು ಹೇಳಿದವÀರ ಮಾತನ್ನು ಖಂಡಿತವಾಗಿಯು ಅಲ್ಲಾಹನು ಆಲಿಸಿದ್ದಾನೆ. ಅವರು ಹೇಳಿರುವ ಮಾತನ್ನು ಮತ್ತು ಅವರು ಅನ್ಯಾಯವಾಗಿ ಪೈಗಂಬರರನ್ನು ಕೊಂದಿರುವುದನ್ನು ನಾವು ದಾಖಲಿಸುತ್ತೇವೆ. ಮತ್ತು ಪುನರುತ್ಥಾನದ ದಿನ ಧಗಧಗಿಸುತ್ತಿರುವ ಶಿಕ್ಷೆಯನ್ನು ಸವಿಯಿರಿ ಎಂದು ಅವರೊಂದಿಗೆ ಹೇಳುವೆವು.
ಸಂದೇಶವಾಹಕರು ನಮ್ಮ ಮುಂದೆ ಬಲಿಯನ್ನರ್ಪಿಸಿ ಅದನ್ನು ಅಗ್ನಿಯು ಭಕ್ಷಿಸುವುದನ್ನು ನಾವು (ಕಣ್ಣಾರೆ ಕಾಣುವ ತನಕ) ಅವರನ್ನು ಅಂಗೀಕರಿಸಬಾರದೆAದು ಅಲ್ಲಾಹನು ನಮ್ಮೊಂದಿಗೆ ಕರಾರು ಪಡೆದಿದ್ದಾನೆಂದು ಅವರು ಹೇಳಿದವರಾಗಿದ್ದಾರೆ. ನೀವು ಹೇಳಿರಿ: ನೀವು ಸತ್ಯ ಸಂಧರಾಗಿದ್ದರೆ ನನಗಿಂತ ಮುಂಚೆ ಬಂದ ಸಂದೇಶವಾಹಕರು ನಿಮ್ಮೆಡೆಗೆ ಸ್ಪಷ್ಟ ದೃಷ್ಟಾಂತಗಳನ್ನು ಮತ್ತು ನೀವು ಹೇಳಿದ್ದನ್ನು (ಅಗ್ನಿಪರೀಕ್ಷೆಯನ್ನು) ಸಹ ತಂದಿದ್ದರು. ಹಾಗಿರುವಾಗ ನೀವು ಅವರನ್ನೇಕೆ ವಧಿಸಿದಿರಿ.
ಪ್ರತಿಯೊಂದು ಜೀವವೂ ಮರಣದ ರುಚಿ ಸವಿಯಲಿದೆ ಮತ್ತು ನಿಮಗೆ ಪುನರುತ್ಥಾನ ದಿನದಂದು ನಿಮ್ಮ ಪ್ರತಿಫಲಗಳನ್ನು ಸಂಪೂರ್ಣವಾಗಿ ನೀಡÀಲಾಗುವುದು. ಇನ್ನು ಯಾರು ನರಕದಿಂದ ದೂರ ಸರಿಸಲಾದನೋ ಮತ್ತು ಸ್ವರ್ಗದಲ್ಲಿ ಪ್ರವೇಶಿಸಲಾದನೋ ಖಂಡಿತವಾಗಿಯು ಅವನು ಯಶಸ್ಸು ಪಡೆದನು ಮತ್ತು ಐಹಿಕ ಜೀವನವು ಕೇವಲ ಮೋಸದ ವಸ್ತುವಾಗಿದೆ.
ಖಂಡಿತವಾಗಿಯು ನಿಮ್ಮ ಸಂಪತ್ತುಗಳಲ್ಲೂ ಮತ್ತು ಶರೀರಗಳಲ್ಲೂ ನಿಮ್ಮನ್ನು ಪರೀಕ್ಷಿಸಲಾಗುವುದು ಮತ್ತು ನಿಮಗಿಂತ ಮುಂಚೆ ಗ್ರಂಥ ನೀಡಲಾದವರಿಂದ ಮತ್ತು ಬಹುದೇವಾರಾಧಕರಿಂದ ನೀವು ಸಾಕಷ್ಟು ಚುಚ್ಚು ಮಾತುಗಳನ್ನು ಕೇಳಲಿರುವಿರಿ ಎಂಬುದು ಖಚಿತವಾಗಿದೆ. ನೀವು ಸಹನೆ ವಹಿಸುವುದಾದರೆ ಮತ್ತು ಭಯಭಕ್ತಿ ಪಾಲಿಸುವುದಾದರೆ, ಖಂಡಿತವಾಗಿಯು ಇದು ಎದೆಗಾರಿಕೆಯ ಸಂಗತಿಯಾಗಿದೆ.