قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

بەت نومۇرى:close

external-link copy
181 : 3

لَقَدْ سَمِعَ اللّٰهُ قَوْلَ الَّذِیْنَ قَالُوْۤا اِنَّ اللّٰهَ فَقِیْرٌ وَّنَحْنُ اَغْنِیَآءُ ۘ— سَنَكْتُبُ مَا قَالُوْا وَقَتْلَهُمُ الْاَنْۢبِیَآءَ بِغَیْرِ حَقٍّ ۙۚ— وَّنَقُوْلُ ذُوْقُوْا عَذَابَ الْحَرِیْقِ ۟

ಅಲ್ಲಾಹನು ನಿರ್ಗತಿಕನಾಗಿದ್ದಾನೆ. ಮತ್ತು ನಾವು ಧನಿಕರಾಗಿದ್ದೇವೆಂದು ಹೇಳಿದವÀರ ಮಾತನ್ನು ಖಂಡಿತವಾಗಿಯು ಅಲ್ಲಾಹನು ಆಲಿಸಿದ್ದಾನೆ. ಅವರು ಹೇಳಿರುವ ಮಾತನ್ನು ಮತ್ತು ಅವರು ಅನ್ಯಾಯವಾಗಿ ಪೈಗಂಬರರನ್ನು ಕೊಂದಿರುವುದನ್ನು ನಾವು ದಾಖಲಿಸುತ್ತೇವೆ. ಮತ್ತು ಪುನರುತ್ಥಾನದ ದಿನ ಧಗಧಗಿಸುತ್ತಿರುವ ಶಿಕ್ಷೆಯನ್ನು ಸವಿಯಿರಿ ಎಂದು ಅವರೊಂದಿಗೆ ಹೇಳುವೆವು. info
التفاسير:

external-link copy
182 : 3

ذٰلِكَ بِمَا قَدَّمَتْ اَیْدِیْكُمْ وَاَنَّ اللّٰهَ لَیْسَ بِظَلَّامٍ لِّلْعَبِیْدِ ۟ۚ

ಇದು ನಿಮ್ಮ ಕೈಗಳು ಮಾಡಿದ ಕರ್ಮಗಳ ಫಲವಾಗಿದೆ ಮತ್ತು ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸಗುವವನಲ್ಲ. info
التفاسير:

external-link copy
183 : 3

اَلَّذِیْنَ قَالُوْۤا اِنَّ اللّٰهَ عَهِدَ اِلَیْنَاۤ اَلَّا نُؤْمِنَ لِرَسُوْلٍ حَتّٰی یَاْتِیَنَا بِقُرْبَانٍ تَاْكُلُهُ النَّارُ ؕ— قُلْ قَدْ جَآءَكُمْ رُسُلٌ مِّنْ قَبْلِیْ بِالْبَیِّنٰتِ وَبِالَّذِیْ قُلْتُمْ فَلِمَ قَتَلْتُمُوْهُمْ اِنْ كُنْتُمْ صٰدِقِیْنَ ۟

ಸಂದೇಶವಾಹಕರು ನಮ್ಮ ಮುಂದೆ ಬಲಿಯನ್ನರ್ಪಿಸಿ ಅದನ್ನು ಅಗ್ನಿಯು ಭಕ್ಷಿಸುವುದನ್ನು ನಾವು (ಕಣ್ಣಾರೆ ಕಾಣುವ ತನಕ) ಅವರನ್ನು ಅಂಗೀಕರಿಸಬಾರದೆAದು ಅಲ್ಲಾಹನು ನಮ್ಮೊಂದಿಗೆ ಕರಾರು ಪಡೆದಿದ್ದಾನೆಂದು ಅವರು ಹೇಳಿದವರಾಗಿದ್ದಾರೆ. ನೀವು ಹೇಳಿರಿ: ನೀವು ಸತ್ಯ ಸಂಧರಾಗಿದ್ದರೆ ನನಗಿಂತ ಮುಂಚೆ ಬಂದ ಸಂದೇಶವಾಹಕರು ನಿಮ್ಮೆಡೆಗೆ ಸ್ಪಷ್ಟ ದೃಷ್ಟಾಂತಗಳನ್ನು ಮತ್ತು ನೀವು ಹೇಳಿದ್ದನ್ನು (ಅಗ್ನಿಪರೀಕ್ಷೆಯನ್ನು) ಸಹ ತಂದಿದ್ದರು. ಹಾಗಿರುವಾಗ ನೀವು ಅವರನ್ನೇಕೆ ವಧಿಸಿದಿರಿ. info
التفاسير:

external-link copy
184 : 3

فَاِنْ كَذَّبُوْكَ فَقَدْ كُذِّبَ رُسُلٌ مِّنْ قَبْلِكَ جَآءُوْ بِالْبَیِّنٰتِ وَالزُّبُرِ وَالْكِتٰبِ الْمُنِیْرِ ۟

ಇನ್ನೂ ಅವರು ನಿಮ್ಮನ್ನು ನಿಷೇಧಿಸುವುದಾದರೆ, ನಿಮಗಿಂತ ಮುಂಚೆ ಸ್ಪಷ್ಟಪುರಾವೆಗಳೊಂದಿಗೆ, ಪ್ರಕಾಶ ಬೀರುವ ಗ್ರಂಥದೊAದಿಗೆ ಬಂದ ಸಂದೇಶವಾಹಕರು ಸಹ ನಿಷೇಧಕ್ಕೊಳಗಾಗಿದ್ದಾರೆ. info
التفاسير:

external-link copy
185 : 3

كُلُّ نَفْسٍ ذَآىِٕقَةُ الْمَوْتِ ؕ— وَاِنَّمَا تُوَفَّوْنَ اُجُوْرَكُمْ یَوْمَ الْقِیٰمَةِ ؕ— فَمَنْ زُحْزِحَ عَنِ النَّارِ وَاُدْخِلَ الْجَنَّةَ فَقَدْ فَازَ ؕ— وَمَا الْحَیٰوةُ الدُّنْیَاۤ اِلَّا مَتَاعُ الْغُرُوْرِ ۟

ಪ್ರತಿಯೊಂದು ಜೀವವೂ ಮರಣದ ರುಚಿ ಸವಿಯಲಿದೆ ಮತ್ತು ನಿಮಗೆ ಪುನರುತ್ಥಾನ ದಿನದಂದು ನಿಮ್ಮ ಪ್ರತಿಫಲಗಳನ್ನು ಸಂಪೂರ್ಣವಾಗಿ ನೀಡÀಲಾಗುವುದು. ಇನ್ನು ಯಾರು ನರಕದಿಂದ ದೂರ ಸರಿಸಲಾದನೋ ಮತ್ತು ಸ್ವರ್ಗದಲ್ಲಿ ಪ್ರವೇಶಿಸಲಾದನೋ ಖಂಡಿತವಾಗಿಯು ಅವನು ಯಶಸ್ಸು ಪಡೆದನು ಮತ್ತು ಐಹಿಕ ಜೀವನವು ಕೇವಲ ಮೋಸದ ವಸ್ತುವಾಗಿದೆ. info
التفاسير:

external-link copy
186 : 3

لَتُبْلَوُنَّ فِیْۤ اَمْوَالِكُمْ وَاَنْفُسِكُمْ ۫— وَلَتَسْمَعُنَّ مِنَ الَّذِیْنَ اُوْتُوا الْكِتٰبَ مِنْ قَبْلِكُمْ وَمِنَ الَّذِیْنَ اَشْرَكُوْۤا اَذًی كَثِیْرًا ؕ— وَاِنْ تَصْبِرُوْا وَتَتَّقُوْا فَاِنَّ ذٰلِكَ مِنْ عَزْمِ الْاُمُوْرِ ۟

ಖಂಡಿತವಾಗಿಯು ನಿಮ್ಮ ಸಂಪತ್ತುಗಳಲ್ಲೂ ಮತ್ತು ಶರೀರಗಳಲ್ಲೂ ನಿಮ್ಮನ್ನು ಪರೀಕ್ಷಿಸಲಾಗುವುದು ಮತ್ತು ನಿಮಗಿಂತ ಮುಂಚೆ ಗ್ರಂಥ ನೀಡಲಾದವರಿಂದ ಮತ್ತು ಬಹುದೇವಾರಾಧಕರಿಂದ ನೀವು ಸಾಕಷ್ಟು ಚುಚ್ಚು ಮಾತುಗಳನ್ನು ಕೇಳಲಿರುವಿರಿ ಎಂಬುದು ಖಚಿತವಾಗಿದೆ. ನೀವು ಸಹನೆ ವಹಿಸುವುದಾದರೆ ಮತ್ತು ಭಯಭಕ್ತಿ ಪಾಲಿಸುವುದಾದರೆ, ಖಂಡಿತವಾಗಿಯು ಇದು ಎದೆಗಾರಿಕೆಯ ಸಂಗತಿಯಾಗಿದೆ. info
التفاسير: