قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

بەت نومۇرى:close

external-link copy
84 : 3

قُلْ اٰمَنَّا بِاللّٰهِ وَمَاۤ اُنْزِلَ عَلَیْنَا وَمَاۤ اُنْزِلَ عَلٰۤی اِبْرٰهِیْمَ وَاِسْمٰعِیْلَ وَاِسْحٰقَ وَیَعْقُوْبَ وَالْاَسْبَاطِ وَمَاۤ اُوْتِیَ مُوْسٰی وَعِیْسٰی وَالنَّبِیُّوْنَ مِنْ رَّبِّهِمْ ۪— لَا نُفَرِّقُ بَیْنَ اَحَدٍ مِّنْهُمْ ؗ— وَنَحْنُ لَهٗ مُسْلِمُوْنَ ۟

ಹೇಳಿರಿ: ಅಲ್ಲಾಹನಲ್ಲೂ, ನಮ್ಮ ಮೇಲೆ ಅವತೀರ್ಣಗೊಳಿಸಲಾಗಿರುವುದರಲ್ಲೂ ಮತ್ತು ಇಬ್ರಾಹೀಮ್ ಇಸ್ಮಾಯೀಲ್, ಇಸ್‌ಹಾಕ್, ಯಾಕೂಬ್ ಮತ್ತು ಅವರ ಸಂತತಿಗಳಿಗೆ ಅವತೀರ್ಣಗೊಳಿಸಲಾಗಿರುವುದರಲ್ಲೂ, ಮೂಸಾ, ಈಸಾರಿಗೆ ಹಾಗೂ ಸಕಲ ಪೈಗಂಬರರಿಗೆ ತಮ್ಮ ಪ್ರಭುವಿನ ವತಿಯಿಂದ ನೀಡಲಾಗಿರುವುದರಲ್ಲೂ ನಾವು ವಿಶ್ವಾಸವಿಟ್ಟಿರುವೆವು. ಅವರ ಪೈಕಿ ಯಾರ ನಡುವೆಯೂ ನಾವು ತಾರತಮ್ಯ ಮಾಡುವುದಿಲ್ಲ. ನಾವು ಅಲ್ಲಾಹನಿಗೆ ವಿಧೇಯರಾಗಿದ್ದೇವೆ. info
التفاسير:

external-link copy
85 : 3

وَمَنْ یَّبْتَغِ غَیْرَ الْاِسْلَامِ دِیْنًا فَلَنْ یُّقْبَلَ مِنْهُ ۚ— وَهُوَ فِی الْاٰخِرَةِ مِنَ الْخٰسِرِیْنَ ۟

ಯಾರಾದರೂ ಇಸ್ಲಾಮ್ (ಅಲ್ಲಾಹನಿಗೆ ಶರಣಾಗತಿ)ನ ಹೊರತು ಬೇರೆ ಧರ್ಮವನ್ನು ಬಯಸಿದರೆ ಅದನ್ನು ಅವನಿಂದ ಎಂದಿಗೂ ಸ್ವೀಕರಿಸಲಾಗದು ಮತ್ತು ಅವನು ಪರಲೋಕದಲ್ಲಿ ನಷ್ಟ ಹೊಂದಿದವರಲ್ಲಿ ಸೇರುವನು. info
التفاسير:

external-link copy
86 : 3

كَیْفَ یَهْدِی اللّٰهُ قَوْمًا كَفَرُوْا بَعْدَ اِیْمَانِهِمْ وَشَهِدُوْۤا اَنَّ الرَّسُوْلَ حَقٌّ وَّجَآءَهُمُ الْبَیِّنٰتُ ؕ— وَاللّٰهُ لَا یَهْدِی الْقَوْمَ الظّٰلِمِیْنَ ۟

ವಿಶ್ವಾಸವಿಟ್ಟು ಸಂದೇಶವಾಹಕನ ಸತ್ಯಸಂಧ್ಯತೆಗೆ ಸಾಕ್ಷö್ಯವಹಿಸಿದ ಬಳಿಕ ಮತ್ತು ತಮ್ಮ ಬಳಿ ಸ್ಪಷ್ಟ ಪುರಾವೆಗಳು ಬಂದ ಬಳಿಕ ಅವಿಶ್ವಾಸಿಗಳಾದ ಜನರಿಗೆ ಅಲ್ಲಾಹನು ಸನ್ಮಾರ್ಗ ತೋರಿಸುವುದಾದರೂ ಹೇಗೆ? ಅಲ್ಲಾಹನು ಇಂತಹ ಅಕ್ರಮಿ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವುದಿಲ್ಲ. info
التفاسير:

external-link copy
87 : 3

اُولٰٓىِٕكَ جَزَآؤُهُمْ اَنَّ عَلَیْهِمْ لَعْنَةَ اللّٰهِ وَالْمَلٰٓىِٕكَةِ وَالنَّاسِ اَجْمَعِیْنَ ۟ۙ

ಇಂಥವರಿಗೆ ಅಲ್ಲಾಹನ ಮತ್ತು ಮಲಕ್‌ಗಳ ಮತ್ತು ಎಲ್ಲಾ ಜನರ ಶಾಪವಿದೆ ಎಂಬುದೇ ಅವರಿಗಿರುವ ಪ್ರತಿಫಲವಾಗಿದೆ. info
التفاسير:

external-link copy
88 : 3

خٰلِدِیْنَ فِیْهَا ۚ— لَا یُخَفَّفُ عَنْهُمُ الْعَذَابُ وَلَا هُمْ یُنْظَرُوْنَ ۟ۙ

ಅವರು ಅದರಲ್ಲಿ ಶಾಶ್ವತವಾಗಿರುವರು ಅವರಿಂದ ಶಿಕ್ಷೆಯನ್ನು ಹಗುರಗೊಳಿಸಲಾಗದು ಮತ್ತು ಅವರಿಗೆ ಕಾಲಾವಕಾಶವನ್ನೂ ನೀಡಲಾಗದು. info
التفاسير:

external-link copy
89 : 3

اِلَّا الَّذِیْنَ تَابُوْا مِنْ بَعْدِ ذٰلِكَ وَاَصْلَحُوْا ۫— فَاِنَّ اللّٰهَ غَفُوْرٌ رَّحِیْمٌ ۟

ಆದರೆ ಅದರ (ಅವಿಶ್ವಾಸದ) ಬಳಿಕ ಪಶ್ಚಾತ್ತಾಪ ಪಟ್ಟು, ಸುಧಾರಣೆ ಮಾಡಿಕೊಂಡವರ ಹೊರತು ನಿಸ್ಸಂಶಯವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆ ತೋರುವವನೂ ಆಗಿದ್ದಾನೆ. info
التفاسير:

external-link copy
90 : 3

اِنَّ الَّذِیْنَ كَفَرُوْا بَعْدَ اِیْمَانِهِمْ ثُمَّ ازْدَادُوْا كُفْرًا لَّنْ تُقْبَلَ تَوْبَتُهُمْ ۚ— وَاُولٰٓىِٕكَ هُمُ الضَّآلُّوْنَ ۟

ನಿಸ್ಸಂಶಯವಾಗಿಯು ಯಾರು ವಿಶ್ವಾಸವಿಟ್ಟ ಬಳಿಕ ಸತ್ಯನಿಷೇಧಿಸುತ್ತಾರೋ ಅನಂತರ ನಿಷೇಧದಲ್ಲಿ ಇನ್ನಷ್ಟು ಮುಂದುವರಿಯುತ್ತಾರೋ ಅವರ ಪಶ್ಚಾತ್ತಾಪವನ್ನು ಎಂದಿಗೂ ಸ್ವೀಕರಿಸಲಾಗದು. ಅವರೇ ಮಾರ್ಗ ಭ್ರಷ್ಟರಾಗಿದ್ದಾರೆ. info
التفاسير:

external-link copy
91 : 3

اِنَّ الَّذِیْنَ كَفَرُوْا وَمَاتُوْا وَهُمْ كُفَّارٌ فَلَنْ یُّقْبَلَ مِنْ اَحَدِهِمْ مِّلْءُ الْاَرْضِ ذَهَبًا وَّلَوِ افْتَدٰی بِهٖ ؕ— اُولٰٓىِٕكَ لَهُمْ عَذَابٌ اَلِیْمٌۙ— وَّمَا لَهُمْ مِّنْ نّٰصِرِیْنَ ۟۠

ಆದರೆ ಸತ್ಯನಿಷೇಧ ಕೈಗೊಂಡು ಸತ್ಯನಿಷೇಧದಲ್ಲೇ ಮರಣ ಹೊಂದುವವರ ಪೈಕಿ ಯಾರು ಭೂಮಿಯಷ್ಟು ಚಿನ್ನವನ್ನು ಪ್ರಾಯಶ್ಚಿತವಾಗಿ, ತಮ್ಮ ಮೋಕ್ಷಕ್ಕಾಗಿ ನೀಡಿದರೂ, ಅದು ಎಂದಿಗೂ ಸ್ವೀಕರಿಸಲ್ಪಡಲಾರದು. ಅವರಿಗೆ ಯಾತನಾಮಯ ಶಿಕ್ಷೆಯಿರುವುದು ಮತ್ತು ಅವರಿಗೆ ಅಲ್ಲಾಹನೆದುರು ಯಾವ ಸಹಾಯಕರೂ ಇರಲಾರರು. info
التفاسير: