د قرآن کریم د معناګانو ژباړه - کنادي ژباړه - بشیر ميسوري

د مخ نمبر:close

external-link copy
53 : 3

رَبَّنَاۤ اٰمَنَّا بِمَاۤ اَنْزَلْتَ وَاتَّبَعْنَا الرَّسُوْلَ فَاكْتُبْنَا مَعَ الشّٰهِدِیْنَ ۟

‘ಓ ನಮ್ಮ ಪ್ರಭು, ನಾವು ನೀನು ಅವತೀರ್ಣಗೊಳಿಸಿರುವುದÀರಲ್ಲಿ ವಿಶ್ವಾಸ ವಿರಿಸಿದ್ದೇವೆ ಮತ್ತು ನಿನ್ನ ಸಂದೇಶವಾಹಕರನ್ನು ಅನುಸರಿಸಿದ್ದೇವೆ. ಇನ್ನು ನೀನು ನಮ್ಮನ್ನು ಸಾಕ್ಷö್ಯವಹಿಸಿದವರೊಂದಿಗೆ ದಾಖಲಿಸು'. info
التفاسير:

external-link copy
54 : 3

وَمَكَرُوْا وَمَكَرَ اللّٰهُ ؕ— وَاللّٰهُ خَیْرُ الْمٰكِرِیْنَ ۟۠

ಈಸಾ(ಅ)ರ ವೈರಿಗಳು (ಯಹೂದಿಗಳು ಈಸಾ(ಅ)ರವರ ಕೊಲೆಗೆ) ತಂತ್ರ ಪ್ರಯೋಗಿಸಿದರು. ಅಲ್ಲಾಹನು ಸಹ (ಅವರ ರಕ್ಷಣೆಗೆ) ಪ್ರತಿತಂತ್ರ ಪ್ರಯೋಗಿಸಿದನು. ಮತ್ತು ಅಲ್ಲಾಹನು ತಂತ್ರ ಪ್ರಯೋಗಿಸುವವರಲ್ಲಿ ಉತ್ತಮನಾಗಿದ್ದಾನೆ. info
التفاسير:

external-link copy
55 : 3

اِذْ قَالَ اللّٰهُ یٰعِیْسٰۤی اِنِّیْ مُتَوَفِّیْكَ وَرَافِعُكَ اِلَیَّ وَمُطَهِّرُكَ مِنَ الَّذِیْنَ كَفَرُوْا وَجَاعِلُ الَّذِیْنَ اتَّبَعُوْكَ فَوْقَ الَّذِیْنَ كَفَرُوْۤا اِلٰی یَوْمِ الْقِیٰمَةِ ۚ— ثُمَّ اِلَیَّ مَرْجِعُكُمْ فَاَحْكُمُ بَیْنَكُمْ فِیْمَا كُنْتُمْ فِیْهِ تَخْتَلِفُوْنَ ۟

ಅಲ್ಲಾಹನು ಹೇಳಿದ ಸಂದರ್ಭ: 'ಓ ಈಸಾ, ಖಂಡಿತವಾಗಿಯು ನಾನು ನಿಮ್ಮನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಿರುವೆನು ಮತ್ತು ನಿಮ್ಮನ್ನು ನನ್ನ ಬಳಿಗೆ (ಆಕಾಶದತ್ತ) ಎತ್ತಿಕೊಳ್ಳಲಿರುವೆನು. ಸತ್ಯನಿಷೇಧಿಗಳ ಆರೋಪಗಳಿಂದ ನಿಮ್ಮನ್ನು ಪರಿಶುದ್ಧಗೊಳಿಸಲಿರುವೆನು ಮತ್ತು ನಿಮ್ಮ ಅನುಯಾಯಿಗಳನ್ನು ಪುನರುತ್ಥಾನ ದಿನದವರೆಗೂ ಸತ್ಯನಿಷೇಧಿಗಳ ಮೇಲೆ ಪ್ರಾಬಲ್ಯ ನೀಡುವೆನು'. ತರುವಾಯ ನಿಮ್ಮೆಲ್ಲರ ಮರಳುವಿಕೆಯು ನನ್ನೆಡೆಗೇ ಆಗಿದೆ. ನಿಮ್ಮ ನಡುವಿನ ಸಕಲ ಭಿನ್ನತೆಯ ವಿಷಯಗಳಲ್ಲಿ ನಾನು ನಿಮ್ಮ ನಡುವೆ ತೀರ್ಪು ನೀಡಲಿರುವೆನು. info
التفاسير:

external-link copy
56 : 3

فَاَمَّا الَّذِیْنَ كَفَرُوْا فَاُعَذِّبُهُمْ عَذَابًا شَدِیْدًا فِی الدُّنْیَا وَالْاٰخِرَةِ ؗ— وَمَا لَهُمْ مِّنْ نّٰصِرِیْنَ ۟

ಅನಂತರ ಸತ್ಯನಿಷೇಧಿಗಳಿಗೆ ನಾನು ಇಹದಲ್ಲೂ, ಪರದಲ್ಲೂ ಕಠಿಣ ಶಿಕ್ಷೆ ನೀಡುವೆನು. ಅವರಿಗೆ ಅಲ್ಲಾಹನೆದುರು ಸಹಾಯಕರಾರೂ ಇರಲಾರರು. info
التفاسير:

external-link copy
57 : 3

وَاَمَّا الَّذِیْنَ اٰمَنُوْا وَعَمِلُوا الصّٰلِحٰتِ فَیُوَفِّیْهِمْ اُجُوْرَهُمْ ؕ— وَاللّٰهُ لَا یُحِبُّ الظّٰلِمِیْنَ ۟

ಆದರೆ ಸತ್ಯವಿಶ್ವಾಸವಿಟ್ಟು ಸತ್ಕರ್ಮಗಳನ್ನು ಕೈಗೊಳ್ಳುವವರಿಗೆ ಅಲ್ಲಾಹನು ಅವರ ಪ್ರತಿಫಲವನ್ನು ಪರಿಪೂರ್ಣವಾಗಿ ನೀಡುವನು ಮತ್ತು ಅಲ್ಲಾಹನು ಅಕ್ರಮಿಗಳನ್ನು ಮೆಚ್ಚುವುದಿಲ್ಲ. info
التفاسير:

external-link copy
58 : 3

ذٰلِكَ نَتْلُوْهُ عَلَیْكَ مِنَ الْاٰیٰتِ وَالذِّكْرِ الْحَكِیْمِ ۟

ಇವು ನಾವು ನಿಮಗೆ ಓದಿಕೊಡುತ್ತಿರುವ ದೃಷ್ಟಾಂತಗಳು ಹಾಗೂ ಯುಕ್ತಿಪೂರ್ಣ ಭೋದನೆಗಳಾಗಿವೆ. info
التفاسير:

external-link copy
59 : 3

اِنَّ مَثَلَ عِیْسٰی عِنْدَ اللّٰهِ كَمَثَلِ اٰدَمَ ؕ— خَلَقَهٗ مِنْ تُرَابٍ ثُمَّ قَالَ لَهٗ كُنْ فَیَكُوْنُ ۟

ನಿಶ್ಚಯವಾಗಿಯು ಅಲ್ಲಾಹನ ಬಳಿ ಈಸಾ(ಅ)ರ ಉಪಮೆಯು ಆದಮ(ಅ)ರ ಉಪಮೆಯಂತಿದೆ. ಅವರನ್ನು ಅವನು ಮಣ್ಣಿನಿಂದ ಸೃಷ್ಟಿಸಿ ಹೇಳಿದನು: ನೀನು ಉಂಟಾಗು ಆಗ ಅವರು ಉಂಟಾದರು. info
التفاسير:

external-link copy
60 : 3

اَلْحَقُّ مِنْ رَّبِّكَ فَلَا تَكُنْ مِّنَ الْمُمْتَرِیْنَ ۟

(ಓ ಪೈಗಂಬರರೇ) ನಿನ್ನ ಪ್ರಭುವಿನ ವತಿಯಿಂದ ಇದು ಸತ್ಯವಾಗಿದೆ. ಆದ್ದರಿಂದ ನೀವು ಸಂದೇಹಪಡುವರಲ್ಲಾಗದಿರಿ. info
التفاسير:

external-link copy
61 : 3

فَمَنْ حَآجَّكَ فِیْهِ مِنْ بَعْدِ مَا جَآءَكَ مِنَ الْعِلْمِ فَقُلْ تَعَالَوْا نَدْعُ اَبْنَآءَنَا وَاَبْنَآءَكُمْ وَنِسَآءَنَا وَنِسَآءَكُمْ وَاَنْفُسَنَا وَاَنْفُسَكُمْ ۫— ثُمَّ نَبْتَهِلْ فَنَجْعَلْ لَّعْنَتَ اللّٰهِ عَلَی الْكٰذِبِیْنَ ۟

ಈ ದಿವ್ಯಜ್ಞಾನ ಬಂದ ಬಳಿಕ ಯಾರಾದರು ಈಸಾ(ಅ)ರವರ ಬಗ್ಗೆ ತರ್ಕಿಸುತ್ತಾರೋ ಅವರಿಗೆ ಹೇಳಿರಿ: 'ಬನ್ನಿರಿ, ನಾವು ನಮ್ಮ ಮತ್ತು ನಿಮ್ಮ ಮಕ್ಕಳನ್ನು ಹಾಗೂ ನಮ್ಮ ಮತ್ತು ನಿಮ್ಮ ಸ್ತಿçÃಯರನ್ನು ಕರೆದುಕೊಳ್ಳೋಣ. ಸ್ವತಃ ನಾವೂ ಮತ್ತು ನೀವೂ ಹಾಜರಾಗೋಣ ತರುವಾಯ ನಾವು ದೈನ್ಯತೆಯಿಂದ ಬೇಡಿಕೊಳ್ಳೋಣ ಮತ್ತು ಸುಳ್ಳುಗಾರರನ್ನು ಶÀಪಿಸೋಣ. info
التفاسير: