ನಾವು ಮದ್‌ಯನ್‌ರವರ ಕಡೆಗೆ ಅವರ ಸಹೋದರ ಶುಐಬ್‌ರನ್ನು ಕಳುಹಿಸಿದೆವು. ಅವರು ಹೇಳಿದರು ಓ ನನ್ನ ಜನಾಂಗದವರೇ ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ಆರಾಧ್ಯನಿಲ್ಲ. ನೀವು ಅಳತೆ ಮತ್ತು ತೂಕದಲ್ಲಿ ಕಡಿಮೆ ಮಾಡದಿರಿ. ನಾನು ನಿಮ್ಮನ್ನು ಉತ್ತಮ ಸ್ಥಿತಿಯಲ್ಲಿರುವವರಾಗಿ ಕಾಣುತ್ತಿದ್ದೇನೆ, ಹಾಗೂ ನಾನು ನಿಮ್ಮ ಮೇಲೆ ಆವರಿಸುವಂತಹ ಒಂದು ಯಾತನೆಯ ದಿನದ ಬಗ್ಗೆ ಭಯಪಡುತ್ತೇನೆ.
ಮತ್ತು ಓ ನನ್ನ ಜನಾಂಗದವರೇ ನೀವು ನ್ಯಾಯೋಚಿತವಾಗಿ ಅಳತೆ ಮತ್ತು ತೂಕವನ್ನು ಪೂರ್ತಿ ಮಾಡಿರಿ. ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸದಿರಿ ಮತ್ತು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡದಿರಿ.
ಅವರು ಉತ್ತರಿಸಿದರು; ಓ ಶುಐಬ್ ನಾವು ನಮ್ಮ ಪೂರ್ವಿಕರು ಆರಾಧಿಸುತ್ತಿದ್ದುದನ್ನು ಬಿಟ್ಟುಬಿಡಬೇಕೆಂದು ನಮ್ಮ ಸಂಪತ್ತುಗಳಲ್ಲಿ ನಮ್ಮ ಇಷ್ಟದ ಪ್ರಕಾರ ಬಳಸಬಾರದೆಂದು ನಿನ್ನ ನಮಾಜ್ ನಿನಗೆ ಆದೇಶಿಸುತ್ತದೆಯೇ ? ನೀನಂತೂ ಸಹನಶೀಲನೂ ಸನ್ಮಾರ್ಗಿಯೂ ಆಗಿಬಿಟ್ಟಿರುವೆ!
ಅವರಿಗೆ ಹೇಳಿದರು; ಓ ನನ್ನ ಜನಾಂಗದವರೇ ಯೋಚಿಸಿ ನೋಡಿರಿ ! ನಾನು ನನ್ನ ಪ್ರಭುವಿನ ಕಡೆಯ ಸುಸ್ಪಷ್ಟ ಪ್ರಮಾಣವನ್ನು ಹೊಂದಿದ್ದು ಹಾಗೂ ಅವನು ತನ್ನ ವತಿಯಿಂದ ನನಗೆ ಉತ್ತಮವಾದ ಜೀವನಾಧಾರವನ್ನು ಕರುಣಿಸಿರುತ್ತಾನೆ ಎಂದಾದರೆ, ನಿಮ್ಮನ್ನು ಒಂದು ಸಂಗತಿಯಿAದ ತಡೆದು ಸ್ವತಃ ನಾನೇ ಅದರಡೆಗೆ ವಾಲಿಬಿಡುವುದನ್ನು ನಾನು ಇಚ್ಚಿಸುವುದಿಲ್ಲ. ನನಗೆ ಸಾಧ್ಯವಾದಷ್ಟು ಸುಧಾರಣೆ ಮಾಡುವುದು ನನ್ನ ಉದ್ದೇಶವಾಗಿದೆ. ಮತ್ತು ಅಲ್ಲಾಹನ ಸಹಾಯದ ಹೊರತು ನನಗೆ ಯಾವ ಕಾರ್ಯದ ಸಾಮರ್ಥ್ಯವು ಇಲ್ಲ. ಅವನ ಮೇಲೆಯೇ ನನ್ನ ಭರವಸೆ ಇರುವುದು ಮತ್ತು ಅವನೆಡೆಗೇ ಪಶ್ಚಾತ್ತಾಪದಿಂದ ಮರಳುವೆನು.