Prijevod značenja časnog Kur'ana - Prijevod na kannada jezik (južno indijski jezik) - Bešir Misuri

Broj stranice:close

external-link copy
82 : 11

فَلَمَّا جَآءَ اَمْرُنَا جَعَلْنَا عَالِیَهَا سَافِلَهَا وَاَمْطَرْنَا عَلَیْهَا حِجَارَةً مِّنْ سِجِّیْلٍ ۙ۬— مَّنْضُوْدٍ ۟ۙ

ನಂತರ ನಮ್ಮ ಆಜ್ಞೆಯು ಬಂದಾಗ ನಾವು ಈ ನಾಡನ್ನು ಬುಡಮೇಲು ಮಾಡಿಬಿಟ್ಟೆವು. ಮತ್ತು ಅವರ ಮೇಲೆ ಸುಡುಗಲ್ಲುಗಳನ್ನು ಎಡೆಬಿಡದೆ ಮಳೆಗರೆದವು. info
التفاسير:

external-link copy
83 : 11

مُّسَوَّمَةً عِنْدَ رَبِّكَ ؕ— وَمَا هِیَ مِنَ الظّٰلِمِیْنَ بِبَعِیْدٍ ۟۠

ಅವು ನಿಮ್ಮ ಪ್ರಭುವಿನ ಕಡೆಯಿಂದ ಗುರುತು ಹಾಕಲಾಗದ ಕಲ್ಲುಗಳಾಗಿದ್ದವು ಮತ್ತು ಆ ನಾಡು ಈ ಅಕ್ರಮಿಗಳಿಂದ ದೂರವೇನೂ ಇಲ್ಲ. info
التفاسير:

external-link copy
84 : 11

وَاِلٰی مَدْیَنَ اَخَاهُمْ شُعَیْبًا ؕ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— وَلَا تَنْقُصُوا الْمِكْیَالَ وَالْمِیْزَانَ اِنِّیْۤ اَرٰىكُمْ بِخَیْرٍ وَّاِنِّیْۤ اَخَافُ عَلَیْكُمْ عَذَابَ یَوْمٍ مُّحِیْطٍ ۟

ನಾವು ಮದ್‌ಯನ್‌ರವರ ಕಡೆಗೆ ಅವರ ಸಹೋದರ ಶುಐಬ್‌ರನ್ನು ಕಳುಹಿಸಿದೆವು. ಅವರು ಹೇಳಿದರು ಓ ನನ್ನ ಜನಾಂಗದವರೇ ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ಆರಾಧ್ಯನಿಲ್ಲ. ನೀವು ಅಳತೆ ಮತ್ತು ತೂಕದಲ್ಲಿ ಕಡಿಮೆ ಮಾಡದಿರಿ. ನಾನು ನಿಮ್ಮನ್ನು ಉತ್ತಮ ಸ್ಥಿತಿಯಲ್ಲಿರುವವರಾಗಿ ಕಾಣುತ್ತಿದ್ದೇನೆ, ಹಾಗೂ ನಾನು ನಿಮ್ಮ ಮೇಲೆ ಆವರಿಸುವಂತಹ ಒಂದು ಯಾತನೆಯ ದಿನದ ಬಗ್ಗೆ ಭಯಪಡುತ್ತೇನೆ. info
التفاسير:

external-link copy
85 : 11

وَیٰقَوْمِ اَوْفُوا الْمِكْیَالَ وَالْمِیْزَانَ بِالْقِسْطِ وَلَا تَبْخَسُوا النَّاسَ اَشْیَآءَهُمْ وَلَا تَعْثَوْا فِی الْاَرْضِ مُفْسِدِیْنَ ۟

ಮತ್ತು ಓ ನನ್ನ ಜನಾಂಗದವರೇ ನೀವು ನ್ಯಾಯೋಚಿತವಾಗಿ ಅಳತೆ ಮತ್ತು ತೂಕವನ್ನು ಪೂರ್ತಿ ಮಾಡಿರಿ. ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸದಿರಿ ಮತ್ತು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡದಿರಿ. info
التفاسير:

external-link copy
86 : 11

بَقِیَّتُ اللّٰهِ خَیْرٌ لَّكُمْ اِنْ كُنْتُمْ مُّؤْمِنِیْنَ ۚ۬— وَمَاۤ اَنَا عَلَیْكُمْ بِحَفِیْظٍ ۟

ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನು ನಿಮಗೆ ನೀಡಿದ ಉಳಿತಾಯವೇ ನಿಮ್ಮ ಪಾಲಿಗೆ ಅತ್ಯುತ್ತಮವಾಗಿರುತ್ತದೆ, ಮತ್ತು ನಾನು ನಿಮ್ಮ ಮೇಲೆ ಸಂರಕ್ಷಕನಲ್ಲ. (ಕಾವಲುಗಾರನಲ್ಲ) info
التفاسير:

external-link copy
87 : 11

قَالُوْا یٰشُعَیْبُ اَصَلٰوتُكَ تَاْمُرُكَ اَنْ نَّتْرُكَ مَا یَعْبُدُ اٰبَآؤُنَاۤ اَوْ اَنْ نَّفْعَلَ فِیْۤ اَمْوَالِنَا مَا نَشٰٓؤُا ؕ— اِنَّكَ لَاَنْتَ الْحَلِیْمُ الرَّشِیْدُ ۟

ಅವರು ಉತ್ತರಿಸಿದರು; ಓ ಶುಐಬ್ ನಾವು ನಮ್ಮ ಪೂರ್ವಿಕರು ಆರಾಧಿಸುತ್ತಿದ್ದುದನ್ನು ಬಿಟ್ಟುಬಿಡಬೇಕೆಂದು ನಮ್ಮ ಸಂಪತ್ತುಗಳಲ್ಲಿ ನಮ್ಮ ಇಷ್ಟದ ಪ್ರಕಾರ ಬಳಸಬಾರದೆಂದು ನಿನ್ನ ನಮಾಜ್ ನಿನಗೆ ಆದೇಶಿಸುತ್ತದೆಯೇ ? ನೀನಂತೂ ಸಹನಶೀಲನೂ ಸನ್ಮಾರ್ಗಿಯೂ ಆಗಿಬಿಟ್ಟಿರುವೆ! info
التفاسير:

external-link copy
88 : 11

قَالَ یٰقَوْمِ اَرَءَیْتُمْ اِنْ كُنْتُ عَلٰی بَیِّنَةٍ مِّنْ رَّبِّیْ وَرَزَقَنِیْ مِنْهُ رِزْقًا حَسَنًا ؕ— وَمَاۤ اُرِیْدُ اَنْ اُخَالِفَكُمْ اِلٰی مَاۤ اَنْهٰىكُمْ عَنْهُ ؕ— اِنْ اُرِیْدُ اِلَّا الْاِصْلَاحَ مَا اسْتَطَعْتُ ؕ— وَمَا تَوْفِیْقِیْۤ اِلَّا بِاللّٰهِ ؕ— عَلَیْهِ تَوَكَّلْتُ وَاِلَیْهِ اُنِیْبُ ۟

ಅವರಿಗೆ ಹೇಳಿದರು; ಓ ನನ್ನ ಜನಾಂಗದವರೇ ಯೋಚಿಸಿ ನೋಡಿರಿ ! ನಾನು ನನ್ನ ಪ್ರಭುವಿನ ಕಡೆಯ ಸುಸ್ಪಷ್ಟ ಪ್ರಮಾಣವನ್ನು ಹೊಂದಿದ್ದು ಹಾಗೂ ಅವನು ತನ್ನ ವತಿಯಿಂದ ನನಗೆ ಉತ್ತಮವಾದ ಜೀವನಾಧಾರವನ್ನು ಕರುಣಿಸಿರುತ್ತಾನೆ ಎಂದಾದರೆ, ನಿಮ್ಮನ್ನು ಒಂದು ಸಂಗತಿಯಿAದ ತಡೆದು ಸ್ವತಃ ನಾನೇ ಅದರಡೆಗೆ ವಾಲಿಬಿಡುವುದನ್ನು ನಾನು ಇಚ್ಚಿಸುವುದಿಲ್ಲ. ನನಗೆ ಸಾಧ್ಯವಾದಷ್ಟು ಸುಧಾರಣೆ ಮಾಡುವುದು ನನ್ನ ಉದ್ದೇಶವಾಗಿದೆ. ಮತ್ತು ಅಲ್ಲಾಹನ ಸಹಾಯದ ಹೊರತು ನನಗೆ ಯಾವ ಕಾರ್ಯದ ಸಾಮರ್ಥ್ಯವು ಇಲ್ಲ. ಅವನ ಮೇಲೆಯೇ ನನ್ನ ಭರವಸೆ ಇರುವುದು ಮತ್ತು ಅವನೆಡೆಗೇ ಪಶ್ಚಾತ್ತಾಪದಿಂದ ಮರಳುವೆನು. info
التفاسير: