Prijevod značenja časnog Kur'ana - Prijevod na kannada jezik (južno indijski jezik) - Bešir Misuri

Broj stranice:close

external-link copy
98 : 11

یَقْدُمُ قَوْمَهٗ یَوْمَ الْقِیٰمَةِ فَاَوْرَدَهُمُ النَّارَ ؕ— وَبِئْسَ الْوِرْدُ الْمَوْرُوْدُ ۟

ಪುನರುತ್ಥಾನÀ ದಿನದಂದು ಅವನು ತನ್ನ ಜನಾಂಗದ ಮುಂದೆ ಮುಂದೆ ನಡೆದು ಅವರನ್ನು ನರಕದ ಕಡೆಗೆ ಕೊಂಡೊಯ್ಯುವನು. ಅವರನ್ನು ತಲುಪಿಸಲಾಗುವ ತಾಣವು ಅತಿ ನಿಕೃಷ್ಟವಾಗಿದೆ. info
التفاسير:

external-link copy
99 : 11

وَاُتْبِعُوْا فِیْ هٰذِهٖ لَعْنَةً وَّیَوْمَ الْقِیٰمَةِ ؕ— بِئْسَ الرِّفْدُ الْمَرْفُوْدُ ۟

ಇಹಲೋಕದಲ್ಲಿ ಮತ್ತು ಪುನರುತ್ಥಾನÀ ದಿನದಂದು ಅವರನ್ನು ಶಾಪವು ಬೆನ್ನಟ್ಟುವಂತಾಯಿತು ಅವರಿಗೆ ನೀಡಲಾಗುವ ಪ್ರತಿಫಲವು ಅತ್ಯಂತ ಕೆಟ್ಟದ್ದಾಗಿದೆ. info
التفاسير:

external-link copy
100 : 11

ذٰلِكَ مِنْ اَنْۢبَآءِ الْقُرٰی نَقُصُّهٗ عَلَیْكَ مِنْهَا قَآىِٕمٌ وَّحَصِیْدٌ ۟

ನಾವು ನಿಮಗೆ ವಿವರಿಸಿ ಕೊಡುತ್ತಿರುವ ಇವು ಕೆಲವು ನಾಡುಗಳ ಸುದ್ದಿಗಳಾಗಿವೆ ಇವುಗಳಲ್ಲಿ ಕೆಲವೊಂದು ನೆಲೆನಿಂತಿವೆ ಮತ್ತು ಕೆಲವು ನಾಶಗೊಂಡಿವೆ. info
التفاسير:

external-link copy
101 : 11

وَمَا ظَلَمْنٰهُمْ وَلٰكِنْ ظَلَمُوْۤا اَنْفُسَهُمْ فَمَاۤ اَغْنَتْ عَنْهُمْ اٰلِهَتُهُمُ الَّتِیْ یَدْعُوْنَ مِنْ دُوْنِ اللّٰهِ مِنْ شَیْءٍ لَّمَّا جَآءَ اَمْرُ رَبِّكَ ؕ— وَمَا زَادُوْهُمْ غَیْرَ تَتْبِیْبٍ ۟

ನಾವು ಅವರ ಮೇಲೆ ಅಕ್ರಮವೆಸಗಲಿಲ್ಲ. ಆದರೆ ಸ್ವತಃ ಅವರು ತಾವೇ ತಮ್ಮ ಮೇಲೆ ಅಕ್ರಮವೆಸಗಿಕೊಂಡರು. ಮತ್ತು ನಿಮ್ಮ ಪ್ರಭುವಿನ ಆಜ್ಞೆಯು ಬಂದಾಗ ಅವರು ಅಲ್ಲಾಹನ ಹೊರತು ಕರೆದು ಬೇಡುತ್ತಿದ್ದಂತಹ ಅವರ ಆರಾಧ್ಯರು ಅವರಿಗೆ ಯಾವ ಪ್ರಯೋಜನವನ್ನು ನೀಡಲಿಲ್ಲ ಮತ್ತು ಅವರಿಗೆ ನಷ್ಟದ ಹೊರತು ಇನ್ನೇನನ್ನು ಹೆಚ್ಚಿಸಲಿಲ್ಲ. info
التفاسير:

external-link copy
102 : 11

وَكَذٰلِكَ اَخْذُ رَبِّكَ اِذَاۤ اَخَذَ الْقُرٰی وَهِیَ ظَالِمَةٌ ؕ— اِنَّ اَخْذَهٗۤ اَلِیْمٌ شَدِیْدٌ ۟

ನಿಮ್ಮ ಪ್ರಭು ಅಕ್ರಮಿ ನಾಡುಗಳನ್ನು ಹಿಡಿದಾಗ ಅವನ ಹಿಡಿತವೂ ಹೀಗೆಯೇ ಇರುತ್ತದೆ ನಿಸ್ಸಂಶಯವಾಗಿಯೂ ಅವನ ಹಿಡಿತವೂ ವೇದನಾಜನಕವೂ ಅತ್ಯುಗ್ರವೂ ಆಗಿರುತ್ತದೆ. info
التفاسير:

external-link copy
103 : 11

اِنَّ فِیْ ذٰلِكَ لَاٰیَةً لِّمَنْ خَافَ عَذَابَ الْاٰخِرَةِ ؕ— ذٰلِكَ یَوْمٌ مَّجْمُوْعٌ ۙ— لَّهُ النَّاسُ وَذٰلِكَ یَوْمٌ مَّشْهُوْدٌ ۟

ನಿಜವಾಗಿಯೂ ಪರಲೋಕದ ಶಿಕ್ಷೆಯ ಕುರಿತು ಭಯಪಡುವವರಿಗೆ ಇದರಲ್ಲಿ ದೃಷ್ಟಾಂತವಿದೆ. ಅದು ಸಕಲ ಜನರು ಒಟ್ಟುಗೂಡಿಸಲ್ಪಡುವ ಒಂದು ದಿನವಾಗಿದೆ. ಮತ್ತು ಅದು ಸರ್ವರು ಹಾಜರುಗೊಳಿಸಲ್ಪಡುವ ದಿನವಾಗಿದೆ. info
التفاسير:

external-link copy
104 : 11

وَمَا نُؤَخِّرُهٗۤ اِلَّا لِاَجَلٍ مَّعْدُوْدٍ ۟ؕ

ಒಂದು ನಿರ್ದಿಷ್ಟ ಕಾಲಾವಧಿಯ ಹೊರತು ನಾವದನ್ನು ಮುಂದೂಡುತ್ತಿಲ್ಲ. info
التفاسير:

external-link copy
105 : 11

یَوْمَ یَاْتِ لَا تَكَلَّمُ نَفْسٌ اِلَّا بِاِذْنِهٖ ۚ— فَمِنْهُمْ شَقِیٌّ وَّسَعِیْدٌ ۟

ಅದು ಬರುವ ದಿನದಂದು ಯಾವ ವ್ಯಕ್ತಿಯು ಅಲ್ಲಾಹನ ಅನುಮತಿ ಇಲ್ಲದೆ ಮಾತನಾಡಲಾರ ಅಂದು ಅವರ ಪೈಕಿ ಕೆಲವರು ದುರ್ದೈವಿಗಳು ಮತ್ತು ಕೆಲವರು ಭಾಗ್ಯವಂತರು ಇರುವರು. info
التفاسير:

external-link copy
106 : 11

فَاَمَّا الَّذِیْنَ شَقُوْا فَفِی النَّارِ لَهُمْ فِیْهَا زَفِیْرٌ وَّشَهِیْقٌ ۟ۙ

ದುರ್ದೈವಿಗಳು ನರಕಕ್ಕೆ ಹೋಗುವರು. ಅಲ್ಲವರು ಕಿರುಚುವರು ಮತ್ತು ಚೀರುವರು. info
التفاسير:

external-link copy
107 : 11

خٰلِدِیْنَ فِیْهَا مَا دَامَتِ السَّمٰوٰتُ وَالْاَرْضُ اِلَّا مَا شَآءَ رَبُّكَ ؕ— اِنَّ رَبَّكَ فَعَّالٌ لِّمَا یُرِیْدُ ۟

ಆಕಾಶಗಳು ಮತ್ತು ಭೂಮಿಯು ನೆಲೆನಿಂತಿರುವವರೆಗೂ ಅವರದರಲ್ಲಿ ಶಾಶ್ವತವಾಗಿರುವರು. ನಿಮ್ಮ ಪ್ರಭುವು ಇಚ್ಛಿಸುವುದರ ಹೊರತು. ನಿಶ್ಚಯವಾಗಿಯೂ ನಿಮ್ಮ ಪ್ರಭುವು ತಾನಿಚ್ಛಿಸಿದ್ದನ್ನು ಮಾಡುವವನಾಗಿರುತ್ತಾನೆ. info
التفاسير:

external-link copy
108 : 11

وَاَمَّا الَّذِیْنَ سُعِدُوْا فَفِی الْجَنَّةِ خٰلِدِیْنَ فِیْهَا مَا دَامَتِ السَّمٰوٰتُ وَالْاَرْضُ اِلَّا مَا شَآءَ رَبُّكَ ؕ— عَطَآءً غَیْرَ مَجْذُوْذٍ ۟

ಅದೃಷ್ಟವಂತರು ಸ್ವರ್ಗಕ್ಕೆ ಹೋಗುವರು. ಆಕಾಶಗಳು ಮತ್ತು ಭೂಮಿಯು ನೆಲೆನಿಂತಿರುವವರೆಗೂ ಅವರದರಲ್ಲಿ ಶಾಶ್ವತವಾಗಿರುವರು. ನಿಮ್ಮ ಪ್ರಭು ಇಚ್ಛಿರುವುದರ ಹೊರತು ಇದು ಕೊನೆಯಾಗದ ಅನಂತ ಪುರಸ್ಕಾರವಾಗಿದೆ. info
التفاسير: