Vertaling van de betekenissen Edele Qur'an - De Kannada vertaling - Hamza Batoer

Pagina nummer:close

external-link copy
27 : 9

ثُمَّ یَتُوْبُ اللّٰهُ مِنْ بَعْدِ ذٰلِكَ عَلٰی مَنْ یَّشَآءُ ؕ— وَاللّٰهُ غَفُوْرٌ رَّحِیْمٌ ۟

ನಂತರ ಅದರ ಬಳಿಕವೂ ಅಲ್ಲಾಹು ಅವನು ಇಚ್ಛಿಸಿದವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
28 : 9

یٰۤاَیُّهَا الَّذِیْنَ اٰمَنُوْۤا اِنَّمَا الْمُشْرِكُوْنَ نَجَسٌ فَلَا یَقْرَبُوا الْمَسْجِدَ الْحَرَامَ بَعْدَ عَامِهِمْ هٰذَا ۚ— وَاِنْ خِفْتُمْ عَیْلَةً فَسَوْفَ یُغْنِیْكُمُ اللّٰهُ مِنْ فَضْلِهٖۤ اِنْ شَآءَ ؕ— اِنَّ اللّٰهَ عَلِیْمٌ حَكِیْمٌ ۟

ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ಬಹುದೇವವಿಶ್ವಾಸಿಗಳು ಅಶುದ್ಧರಾಗಿದ್ದಾರೆ.[1] ಆದ್ದರಿಂದ ಈ ವರ್ಷದ ಬಳಿಕ ಅವರು ಪವಿತ್ರ ಮಸೀದಿಯ ಸಮೀಪಕ್ಕೂ ಬರದಿರಲಿ. ನಿಮಗೆ ಬಡತನದ ಬಗ್ಗೆ ಆತಂಕವಿದ್ದರೆ, ಅಲ್ಲಾಹು ಇಚ್ಛಿಸಿದರೆ ಸದ್ಯವೇ ಅವನು ತನ್ನ ಔದಾರ್ಯದಿಂದ ನಿಮ್ಮನ್ನು ಧನಿಕರನ್ನಾಗಿ ಮಾಡುವನು.[2] ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ. info

[1] ಅಶುದ್ಧರು ಎಂದರೆ ದೈಹಿಕವಾಗಿ ಅಶುದ್ಧರು ಎಂದಲ್ಲ. ಬದಲಿಗೆ, ಅವರ ನಂಬಿಕೆಗಳು ಮತ್ತು ಕರ್ಮಗಳು ಅಶುದ್ಧವಾಗಿವೆ ಎಂದರ್ಥ.
[2] ಬಹುದೇವವಿಶ್ವಾಸಿಗಳು ಹಜ್ಜ್ ನಿರ್ವಹಿಸಲು ಮಕ್ಕಾಗೆ ಬರದಿದ್ದರೆ ತಮ್ಮ ವ್ಯಾಪಾರಕ್ಕೆ ಕುಂದುಂಟಾಗಬಹುದೆಂದು ಕೆಲವು ಮುಸ್ಲಿಮರು ಆತಂಕಗೊಂಡಿದ್ದರು.

التفاسير:

external-link copy
29 : 9

قَاتِلُوا الَّذِیْنَ لَا یُؤْمِنُوْنَ بِاللّٰهِ وَلَا بِالْیَوْمِ الْاٰخِرِ وَلَا یُحَرِّمُوْنَ مَا حَرَّمَ اللّٰهُ وَرَسُوْلُهٗ وَلَا یَدِیْنُوْنَ دِیْنَ الْحَقِّ مِنَ الَّذِیْنَ اُوْتُوا الْكِتٰبَ حَتّٰی یُعْطُوا الْجِزْیَةَ عَنْ یَّدٍ وَّهُمْ صٰغِرُوْنَ ۟۠

ಗ್ರಂಥ ನೀಡಲಾದವರಲ್ಲಿ ಯಾರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವುದಿಲ್ಲವೋ, ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಷೇಧಿಸಿದ್ದನ್ನು ನಿಷಿದ್ಧವೆಂದು ಪರಿಗಣಿಸುವುದಿಲ್ಲವೋ ಮತ್ತು ಸತ್ಯಧರ್ಮವನ್ನು ತಮ್ಮ ಧರ್ಮವಾಗಿ ಸ್ವೀಕರಿಸುವುದಿಲ್ಲವೋ ಅವರ ವಿರುದ್ಧ ಯುದ್ಧ ಮಾಡಿರಿ—ಅವರು ದೈನ್ಯತೆಯಿಂದ ಜಿಝ್ಯ ನೀಡುವ ತನಕ. info
التفاسير:

external-link copy
30 : 9

وَقَالَتِ الْیَهُوْدُ عُزَیْرُ ١بْنُ اللّٰهِ وَقَالَتِ النَّصٰرَی الْمَسِیْحُ ابْنُ اللّٰهِ ؕ— ذٰلِكَ قَوْلُهُمْ بِاَفْوَاهِهِمْ ۚ— یُضَاهِـُٔوْنَ قَوْلَ الَّذِیْنَ كَفَرُوْا مِنْ قَبْلُ ؕ— قَاتَلَهُمُ اللّٰهُ ۚ— اَنّٰی یُؤْفَكُوْنَ ۟

ಉಝೈರ್ (ಎಜ್ರಾ) ಅಲ್ಲಾಹನ ಮಗನೆಂದು ಯಹೂದಿಗಳು ಹೇಳಿದರು. ಮಸೀಹ್ (ಯೇಸು) ಅಲ್ಲಾಹನ ಮಗನೆಂದು ಕ್ರೈಸ್ತರು ಹೇಳಿದರು. ಇವು ಅವರು ಅವರ ಬಾಯಿಂದ ಹೇಳುವ ಮಾತುಗಳಾಗಿವೆ. ಅವರಿಗಿಂತ ಮೊದಲು ಸತ್ಯವನ್ನು ನಿಷೇಧಿಸಿದವರ ಮಾತುಗಳನ್ನು ಅವರು ಅನುಕರಿಸುತ್ತಿದ್ದಾರೆ. ಅಲ್ಲಾಹು ಅವರನ್ನು ನಾಶ ಮಾಡಲಿ. ಅವರನ್ನು ಹೇಗೆ ದಾರಿತಪ್ಪಿಸಲಾಗುತ್ತಿದೆಯೆಂದು ನೋಡಿ. info
التفاسير:

external-link copy
31 : 9

اِتَّخَذُوْۤا اَحْبَارَهُمْ وَرُهْبَانَهُمْ اَرْبَابًا مِّنْ دُوْنِ اللّٰهِ وَالْمَسِیْحَ ابْنَ مَرْیَمَ ۚ— وَمَاۤ اُمِرُوْۤا اِلَّا لِیَعْبُدُوْۤا اِلٰهًا وَّاحِدًا ۚ— لَاۤ اِلٰهَ اِلَّا هُوَ ؕ— سُبْحٰنَهٗ عَمَّا یُشْرِكُوْنَ ۟

ಅವರು ಅಲ್ಲಾಹನನ್ನು ಬಿಟ್ಟು ತಮ್ಮ ವಿದ್ವಾಂಸರನ್ನೂ ಮತ್ತು ಸಂತರನ್ನು, ಹಾಗೂ ಮರ್ಯಮರ ಮಗ ಮಸೀಹ ಈಸಾರನ್ನು ಪರಿಪಾಲಕರನ್ನಾಗಿ (ದೇವರುಗಳನ್ನಾಗಿ) ಸ್ವೀಕರಿಸಿದರು. ಏಕೈಕ ದೇವನನ್ನು ಮಾತ್ರ ಆರಾಧಿಸಬೇಕೆಂದು ಅವರಿಗೆ ಆದೇಶಿಸಲಾಗಿತ್ತು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅವನು ಎಷ್ಟೋ ಪರಿಶುದ್ಧನಾಗಿದ್ದಾನೆ. info
التفاسير: