Vertaling van de betekenissen Edele Qur'an - De Kannada vertaling - Hamza Batoer

Pagina nummer:close

external-link copy
14 : 9

قَاتِلُوْهُمْ یُعَذِّبْهُمُ اللّٰهُ بِاَیْدِیْكُمْ وَیُخْزِهِمْ وَیَنْصُرْكُمْ عَلَیْهِمْ وَیَشْفِ صُدُوْرَ قَوْمٍ مُّؤْمِنِیْنَ ۟ۙ

ಅವರ ವಿರುದ್ಧ ಯುದ್ಧ ಮಾಡಿರಿ. ನಿಮ್ಮ ಕೈಗಳ ಮೂಲಕ ಅಲ್ಲಾಹು ಅವರನ್ನು ಶಿಕ್ಷಿಸುವನು, ಅವರನ್ನು ಅಪಮಾನಿತರನ್ನಾಗಿ ಮಾಡುವನು, ಅವರಿಗೆ ವಿರುದ್ಧವಾಗಿ ನಿಮಗೆ ಸಹಾಯ ಮಾಡುವನು ಮತ್ತು ಸತ್ಯವಿಶ್ವಾಸಿಗಳ ಹೃದಯಗಳಿಗೆ ಸಂತೃಪ್ತಿಯನ್ನು ನೀಡುವನು. info
التفاسير:

external-link copy
15 : 9

وَیُذْهِبْ غَیْظَ قُلُوْبِهِمْ ؕ— وَیَتُوْبُ اللّٰهُ عَلٰی مَنْ یَّشَآءُ ؕ— وَاللّٰهُ عَلِیْمٌ حَكِیْمٌ ۟

ಅವರ ಹೃದಯಗಳಿಂದ ಆಕ್ರೋಶವನ್ನು ನಿವಾರಿಸುವನು. ಅಲ್ಲಾಹು ಅವನು ಇಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
16 : 9

اَمْ حَسِبْتُمْ اَنْ تُتْرَكُوْا وَلَمَّا یَعْلَمِ اللّٰهُ الَّذِیْنَ جٰهَدُوْا مِنْكُمْ وَلَمْ یَتَّخِذُوْا مِنْ دُوْنِ اللّٰهِ وَلَا رَسُوْلِهٖ وَلَا الْمُؤْمِنِیْنَ وَلِیْجَةً ؕ— وَاللّٰهُ خَبِیْرٌ بِمَا تَعْمَلُوْنَ ۟۠

ನಿಮ್ಮಲ್ಲಿ (ನಿಷ್ಠೆಯಿಂದ) ಯುದ್ಧ ಮಾಡಿದವರು ಯಾರು ಮತ್ತು ಅಲ್ಲಾಹು, ಅವನ ಸಂದೇಶವಾಹಕರು ಹಾಗೂ ಸತ್ಯವಿಶ್ವಾಸಿಗಳನ್ನು ಬಿಟ್ಟು ಇತತರೊಂದಿಗೆ ರಹಸ್ಯವಾಗಿ ಗೆಳೆತನ ಮಾಡಿಕೊಂಡವರು ಯಾರು ಎಂದು ಸ್ಪಷ್ಟವಾಗಿ ತಿಳಿಯದೆ ಅಲ್ಲಾಹು ನಿಮ್ಮನ್ನು ಈ ಸ್ಥಿತಿಯಲ್ಲಿ ಬಿಟ್ಟುಬಿಡುವನೆಂದು ನೀವು ಭಾವಿಸಿದ್ದೀರಾ? ನೀವು ಮಾಡುವ ಕೆಲಸಗಳನ್ನು ಅವನು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ. info
التفاسير:

external-link copy
17 : 9

مَا كَانَ لِلْمُشْرِكِیْنَ اَنْ یَّعْمُرُوْا مَسٰجِدَ اللّٰهِ شٰهِدِیْنَ عَلٰۤی اَنْفُسِهِمْ بِالْكُفْرِ ؕ— اُولٰٓىِٕكَ حَبِطَتْ اَعْمَالُهُمْ ۖۚ— وَفِی النَّارِ هُمْ خٰلِدُوْنَ ۟

ಸತ್ಯನಿಷೇಧಕ್ಕೆ ಸ್ವಯಂ ಸಾಕ್ಷಿಗಳಾಗಿರುತ್ತಾ ಅಲ್ಲಾಹನ ಮಸೀದಿಗಳ ನಿರ್ವಹಣೆ ಮಾಡುವುದು ಬಹುದೇವಾರಾಧಕರಿಗೆ ಸರಿಹೊಂದುವುದಿಲ್ಲ. ಅವರ ಕರ್ಮಗಳು ನಿಷ್ಫಲವಾಗಿವೆ. ಅವರು ನರಕದಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. info
التفاسير:

external-link copy
18 : 9

اِنَّمَا یَعْمُرُ مَسٰجِدَ اللّٰهِ مَنْ اٰمَنَ بِاللّٰهِ وَالْیَوْمِ الْاٰخِرِ وَاَقَامَ الصَّلٰوةَ وَاٰتَی الزَّكٰوةَ وَلَمْ یَخْشَ اِلَّا اللّٰهَ ۫— فَعَسٰۤی اُولٰٓىِٕكَ اَنْ یَّكُوْنُوْا مِنَ الْمُهْتَدِیْنَ ۟

ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರುವವರು, ನಮಾಝ್ ಸಂಸ್ಥಾಪಿಸುವವರು, ಝಕಾತ್ ನೀಡುವವರು ಮತ್ತು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಭಯಪಡದವರು—ಇವರೇ ಅಲ್ಲಾಹನ ಮಸೀದಿಗಳ ನಿರ್ವಹಣೆ ಮಾಡಬೇಕಾದವರು. ಇವರು ಸನ್ಮಾರ್ಗಿಗಳಲ್ಲಿ ಸೇರುವ ನಿರೀಕ್ಷೆಯಿದೆ. info
التفاسير:

external-link copy
19 : 9

اَجَعَلْتُمْ سِقَایَةَ الْحَآجِّ وَعِمَارَةَ الْمَسْجِدِ الْحَرَامِ كَمَنْ اٰمَنَ بِاللّٰهِ وَالْیَوْمِ الْاٰخِرِ وَجٰهَدَ فِیْ سَبِیْلِ اللّٰهِ ؕ— لَا یَسْتَوٗنَ عِنْدَ اللّٰهِ ؕ— وَاللّٰهُ لَا یَهْدِی الْقَوْمَ الظّٰلِمِیْنَ ۟ۘ

ಹಜ್ಜ್ ಯಾತ್ರಿಗಳಿಗೆ ಪಾನೀಯ ಸರಬರಾಜು ಮಾಡುವುದನ್ನು ಮತ್ತು ಪವಿತ್ರ ಮಸೀದಿಯ ನಿರ್ವಹಣೆ ಮಾಡುವುದನ್ನು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವುದಕ್ಕೆ ಹಾಗೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವುದಕ್ಕೆ ಸಮಾನವೆಂದು ಪರಿಗಣಿಸುತ್ತೀರಾ? ಅಲ್ಲಾಹನ ದೃಷ್ಟಿಯಲ್ಲಿ ಅವು ಸಮಾನವಲ್ಲ. ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. info
التفاسير:

external-link copy
20 : 9

اَلَّذِیْنَ اٰمَنُوْا وَهَاجَرُوْا وَجٰهَدُوْا فِیْ سَبِیْلِ اللّٰهِ بِاَمْوَالِهِمْ وَاَنْفُسِهِمْ ۙ— اَعْظَمُ دَرَجَةً عِنْدَ اللّٰهِ ؕ— وَاُولٰٓىِٕكَ هُمُ الْفَآىِٕزُوْنَ ۟

ಸತ್ಯವಿಶ್ವಾಸ ಸ್ವೀಕರಿಸಿದವರು, ವಲಸೆ (ಹಿಜ್ರ) ಮಾಡಿದವರು ಮತ್ತು ತಮ್ಮ ಧನ-ತನುಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಯಾರೋ—ಅವರಿಗೆ ಅಲ್ಲಾಹನ ಬಳಿ ಉನ್ನತ ಸ್ಥಾನಮಾನಗಳಿವೆ. ಅವರೇ ಯಶಸ್ವಿಯಾದವರು. info
التفاسير: