Vertaling van de betekenissen Edele Qur'an - De Kannada vertaling - Hamza Batoer

Pagina nummer:close

external-link copy
94 : 9

یَعْتَذِرُوْنَ اِلَیْكُمْ اِذَا رَجَعْتُمْ اِلَیْهِمْ ؕ— قُلْ لَّا تَعْتَذِرُوْا لَنْ نُّؤْمِنَ لَكُمْ قَدْ نَبَّاَنَا اللّٰهُ مِنْ اَخْبَارِكُمْ ؕ— وَسَیَرَی اللّٰهُ عَمَلَكُمْ وَرَسُوْلُهٗ ثُمَّ تُرَدُّوْنَ اِلٰی عٰلِمِ الْغَیْبِ وَالشَّهَادَةِ فَیُنَبِّئُكُمْ بِمَا كُنْتُمْ تَعْمَلُوْنَ ۟

ನೀವು (ಯುದ್ಧದಿಂದ) ಮರಳಿ ಅವರ ಬಳಿಗೆ ಹೋದಾಗ, ಅವರು ನಿಮ್ಮ ಮುಂದೆ ನೆಪಗಳನ್ನು ಹೇಳುತ್ತಾರೆ. ಹೇಳಿರಿ: “ನೀವು ನೆಪಗಳನ್ನು ಹೇಳಬೇಡಿ. ನಾವು ನಿಮ್ಮನ್ನು ಎಂದಿಗೂ ನಂಬುವುದಿಲ್ಲ. ನಿಮ್ಮ ಕೆಲವು ಸಮಾಚಾರಗಳನ್ನು ಅಲ್ಲಾಹು ನಮಗೆ ತಿಳಿಸಿದ್ದಾನೆ. ಅಲ್ಲಾಹು ಮತ್ತು ಅವನ ಸಂದೇಶವಾಹಕರು ನೀವು ಮಾಡುವ ಕೆಲಸವನ್ನು ನೋಡುತ್ತಾರೆ. ನಂತರ ನಿಮ್ಮನ್ನು ದೃಶ್ಯ-ಅದೃಶ್ಯಗಳನ್ನು ತಿಳಿದವನ (ಅಲ್ಲಾಹನ) ಬಳಿಗೆ ಮರಳಿಸಲಾಗುವುದು. ಆಗ ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ಅವನು ನಿಮಗೆ ವಿವರಿಸಿಕೊಡುವನು.” info
التفاسير:

external-link copy
95 : 9

سَیَحْلِفُوْنَ بِاللّٰهِ لَكُمْ اِذَا انْقَلَبْتُمْ اِلَیْهِمْ لِتُعْرِضُوْا عَنْهُمْ ؕ— فَاَعْرِضُوْا عَنْهُمْ ؕ— اِنَّهُمْ رِجْسٌ ؗ— وَّمَاْوٰىهُمْ جَهَنَّمُ ۚ— جَزَآءً بِمَا كَانُوْا یَكْسِبُوْنَ ۟

ನೀವು ಅವರ ಬಳಿಗೆ ಮರಳಿದಾಗ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡುವುದಕ್ಕಾಗಿ ಅವರು ನಿಮ್ಮ ಮುಂದೆ ಅಲ್ಲಾಹನ ಹೆಸರಲ್ಲಿ ಆಣೆ ಮಾಡುತ್ತಾರೆ. ನೀವು ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ನಿಜವಾಗಿಯೂ ಅವರು ಹೊಲಸು ಜನರು. ಅವರ ವಾಸಸ್ಥಳ ನರಕವಾಗಿದೆ. ಅದು ಅವರು ಮಾಡಿದ ದುಷ್ಕರ್ಮಗಳ ಫಲವಾಗಿದೆ. info
التفاسير:

external-link copy
96 : 9

یَحْلِفُوْنَ لَكُمْ لِتَرْضَوْا عَنْهُمْ ۚ— فَاِنْ تَرْضَوْا عَنْهُمْ فَاِنَّ اللّٰهَ لَا یَرْضٰی عَنِ الْقَوْمِ الْفٰسِقِیْنَ ۟

ನಿಮ್ಮ ಸಂಪ್ರೀತಿಯನ್ನು ಪಡೆಯಲು ಅವರು ಅಲ್ಲಾಹನ ಮೇಲೆ ಆಣೆ ಮಾಡುತ್ತಾರೆ. ನೀವು ಅವರ ಬಗ್ಗೆ ಸಂಪ್ರೀತರಾದರೂ, ಅಲ್ಲಾಹು ಆ ದುಷ್ಕರ್ಮಿಗಳ ಬಗ್ಗೆ ಖಂಡಿತ ಸಂಪ್ರೀತನಾಗುವುದಿಲ್ಲ. info
التفاسير:

external-link copy
97 : 9

اَلْاَعْرَابُ اَشَدُّ كُفْرًا وَّنِفَاقًا وَّاَجْدَرُ اَلَّا یَعْلَمُوْا حُدُوْدَ مَاۤ اَنْزَلَ اللّٰهُ عَلٰی رَسُوْلِهٖ ؕ— وَاللّٰهُ عَلِیْمٌ حَكِیْمٌ ۟

ಮರುಭೂಮಿ ನಿವಾಸಿಗಳಾದ ಅರಬ್ಬಿಗಳು ಕಡು ನಿಷೇಧ ಮತ್ತು ಕಪಟತೆಯಿರುವ ಜನರಾಗಿದ್ದಾರೆ. ಅಲ್ಲಾಹು ಅವನ ಸಂದೇಶವಾಹಕರಿಗೆ ಅವತೀರ್ಣಗೊಳಿಸಿದ ನಿಯಮಗಳ ಬಗ್ಗೆ ಅಜ್ಞರಾಗಿರಲು ಅವರು ಹೆಚ್ಚು ಅರ್ಹರಾಗಿದ್ದಾರೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
98 : 9

وَمِنَ الْاَعْرَابِ مَنْ یَّتَّخِذُ مَا یُنْفِقُ مَغْرَمًا وَّیَتَرَبَّصُ بِكُمُ الدَّوَآىِٕرَ ؕ— عَلَیْهِمْ دَآىِٕرَةُ السَّوْءِ ؕ— وَاللّٰهُ سَمِیْعٌ عَلِیْمٌ ۟

(ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿದ್ದನ್ನು ದಂಡವೆಂದು ಪರಿಗಣಿಸುವವರು ಮತ್ತು ನಿಮಗೆ ಕೆಟ್ಟ ಕಾಲಚಕ್ರಗಳು ಬರುವುದನ್ನು ಕಾಯುವವರು ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿದ್ದಾರೆ. ಕೆಟ್ಟ ಕಾಲಚಕ್ರಗಳು ಅವರಿಗೇ ಬರಲಿ! ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ. info
التفاسير:

external-link copy
99 : 9

وَمِنَ الْاَعْرَابِ مَنْ یُّؤْمِنُ بِاللّٰهِ وَالْیَوْمِ الْاٰخِرِ وَیَتَّخِذُ مَا یُنْفِقُ قُرُبٰتٍ عِنْدَ اللّٰهِ وَصَلَوٰتِ الرَّسُوْلِ ؕ— اَلَاۤ اِنَّهَا قُرْبَةٌ لَّهُمْ ؕ— سَیُدْخِلُهُمُ اللّٰهُ فِیْ رَحْمَتِهٖ ؕ— اِنَّ اللّٰهَ غَفُوْرٌ رَّحِیْمٌ ۟۠

ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರು ಮತ್ತು (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿದ್ದನ್ನು ಅಲ್ಲಾಹನ ಸಾಮೀಪ್ಯ ಪಡೆಯುವ ಮತ್ತು ಸಂದೇಶವಾಹಕರ ಪ್ರಾರ್ಥನೆಗಳಲ್ಲಿ ಒಳಪಡುವ ಮಾರ್ಗವೆಂದು ಪರಿಗಣಿಸುವವರೂ ಕೂಡ ಆ ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅದು ಅವರಿಗೆ ಸಾಮೀಪ್ಯ ಪಡೆಯುವ ಮಾರ್ಗವಾಗಿದೆ. ಅಲ್ಲಾಹು ಅವರನ್ನು ತನ್ನ ಕರುಣೆಯಲ್ಲಿ ಸೇರಿಸುವನು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير: