Vertaling van de betekenissen Edele Qur'an - De Kannada vertaling - Hamza Batoer

Pagina nummer:close

external-link copy
7 : 9

كَیْفَ یَكُوْنُ لِلْمُشْرِكِیْنَ عَهْدٌ عِنْدَ اللّٰهِ وَعِنْدَ رَسُوْلِهٖۤ اِلَّا الَّذِیْنَ عٰهَدْتُّمْ عِنْدَ الْمَسْجِدِ الْحَرَامِ ۚ— فَمَا اسْتَقَامُوْا لَكُمْ فَاسْتَقِیْمُوْا لَهُمْ ؕ— اِنَّ اللّٰهَ یُحِبُّ الْمُتَّقِیْنَ ۟

ಬಹುದೇವವಿಶ್ವಾಸಿಗಳಿಗೆ ಅಲ್ಲಾಹು ಮತ್ತು ಅವನ ಸಂದೇಶವಾಹಕರೊಡನೆ ಕರಾರು ಇರುವುದು ಹೇಗೆ? ಪವಿತ್ರ ಮಸೀದಿಯ ಬಳಿ ನೀವು ಕರಾರು ಮಾಡಿಕೊಂಡವರ ಹೊರತು. ಅವರು ತಮ್ಮ ಕರಾರಿನಲ್ಲಿ ನೇರವಾಗಿ ನಿಲ್ಲುವ ತನಕ ನೀವು ನಿಮ್ಮ ಕರಾರಿನಲ್ಲಿ ನೇರವಾಗಿ ನಿಲ್ಲಿರಿ. ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ. info
التفاسير:

external-link copy
8 : 9

كَیْفَ وَاِنْ یَّظْهَرُوْا عَلَیْكُمْ لَا یَرْقُبُوْا فِیْكُمْ اِلًّا وَّلَا ذِمَّةً ؕ— یُرْضُوْنَكُمْ بِاَفْوَاهِهِمْ وَتَاْبٰی قُلُوْبُهُمْ ۚ— وَاَكْثَرُهُمْ فٰسِقُوْنَ ۟ۚ

ಅವರಿಗೆ ಕರಾರು ಇರುವುದು ಹೇಗೆ? ಅವರಿಗೆ ನಿಮ್ಮ ಮೇಲೆ ಪ್ರಾಬಲ್ಯ ದೊರೆತರೆ, ನಿಮ್ಮ ವಿಷಯದಲ್ಲಿ ಅವರು ಕುಟುಂಬ ಸಂಬಂಧವನ್ನು ಅಥವಾ ಕರಾರನ್ನು ಪರಿಗಣಿಸುವುದಿಲ್ಲ. ಅವರು ಮಾತಿನ ಮೂಲಕ ನಿಮ್ಮ ಬಗ್ಗೆ ಸಂತೃಪ್ತಿ ಸೂಚಿಸುತ್ತಾರೆ. ಆದರೆ ಅವರ ಹೃದಯಗಳು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅವರಲ್ಲಿ ಹೆಚ್ಚಿನವರೂ ದುಷ್ಕರ್ಮಿಗಳಾಗಿದ್ದಾರೆ. info
التفاسير:

external-link copy
9 : 9

اِشْتَرَوْا بِاٰیٰتِ اللّٰهِ ثَمَنًا قَلِیْلًا فَصَدُّوْا عَنْ سَبِیْلِهٖ ؕ— اِنَّهُمْ سَآءَ مَا كَانُوْا یَعْمَلُوْنَ ۟

ಅವರು ಅಲ್ಲಾಹನ ವಚನಗಳನ್ನು ಅಲ್ಪ ಬೆಲೆಗೆ ಮಾರಿದರು ಮತ್ತು ಅವನ ಮಾರ್ಗದಿಂದ ಜನರನ್ನು ತಡೆದರು. ನಿಶ್ಚಯವಾಗಿಯೂ ಅವರು ಮಾಡುವ ಕರ್ಮಗಳು ಬಹಳ ನೀಚವಾಗಿವೆ. info
التفاسير:

external-link copy
10 : 9

لَا یَرْقُبُوْنَ فِیْ مُؤْمِنٍ اِلًّا وَّلَا ذِمَّةً ؕ— وَاُولٰٓىِٕكَ هُمُ الْمُعْتَدُوْنَ ۟

ಅವರು ಸತ್ಯವಿಶ್ವಾಸಿಯ ವಿಷಯದಲ್ಲಿ ಕುಟುಂಬ ಸಂಬಂಧವನ್ನು ಅಥವಾ ಕರಾರನ್ನು ಪರಿಗಣಿಸುವುದಿಲ್ಲ. ಅವರೇ ಅತಿರೇಕಿಗಳು. info
التفاسير:

external-link copy
11 : 9

فَاِنْ تَابُوْا وَاَقَامُوا الصَّلٰوةَ وَاٰتَوُا الزَّكٰوةَ فَاِخْوَانُكُمْ فِی الدِّیْنِ ؕ— وَنُفَصِّلُ الْاٰیٰتِ لِقَوْمٍ یَّعْلَمُوْنَ ۟

ಆದರೆ ಅವರು ಪಶ್ಚಾತ್ತಾಪಪಟ್ಟು, ನಮಾಝನ್ನು ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ, ಅವರು ನಿಮ್ಮ ಧಾರ್ಮಿಕ ಸಹೋದರರಾಗಿದ್ದಾರೆ. ತಿಳುವಳಿಕೆಯಿರುವ ಜನರಿಗಾಗಿ ನಾವು ವಚನಗಳನ್ನು ವಿವರಿಸಿಕೊಡುತ್ತೇವೆ. info
التفاسير:

external-link copy
12 : 9

وَاِنْ نَّكَثُوْۤا اَیْمَانَهُمْ مِّنْ بَعْدِ عَهْدِهِمْ وَطَعَنُوْا فِیْ دِیْنِكُمْ فَقَاتِلُوْۤا اَىِٕمَّةَ الْكُفْرِ ۙ— اِنَّهُمْ لَاۤ اَیْمَانَ لَهُمْ لَعَلَّهُمْ یَنْتَهُوْنَ ۟

ಅವರು ಕರಾರು ಮಾಡಿದ ನಂತರ ತಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ ಮತ್ತು ನಿಮ್ಮ ಧರ್ಮವನ್ನು ಅವಹೇಳನ ಮಾಡಿದರೆ, ಆ ಸತ್ಯನಿಷೇಧದ ಮುಖಂಡರ ವಿರುದ್ಧ ಯುದ್ಧ ಮಾಡಿರಿ. ನಿಶ್ಚಯವಾಗಿಯೂ ಅವರ ಪ್ರತಿಜ್ಞೆಗಳಿಗೆ ಯಾವುದೇ ಬೆಲೆಯಿಲ್ಲ. ಅವರು (ವೈರವನ್ನು) ಮುಕ್ತಾಯಗೊಳಿಸಲೂಬಹುದು. info
التفاسير:

external-link copy
13 : 9

اَلَا تُقَاتِلُوْنَ قَوْمًا نَّكَثُوْۤا اَیْمَانَهُمْ وَهَمُّوْا بِاِخْرَاجِ الرَّسُوْلِ وَهُمْ بَدَءُوْكُمْ اَوَّلَ مَرَّةٍ ؕ— اَتَخْشَوْنَهُمْ ۚ— فَاللّٰهُ اَحَقُّ اَنْ تَخْشَوْهُ اِنْ كُنْتُمْ مُّؤْمِنِیْنَ ۟

ತಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದ ಮತ್ತು ಸಂದೇಶವಾಹಕರನ್ನು ಹೊರದಬ್ಬಲು ಯತ್ನಿಸಿದ ಜನರ ವಿರುದ್ಧ ನೀವೇಕೆ ಯುದ್ಧ ಮಾಡುವುದಿಲ್ಲ? ಮೊದಲು ಯುದ್ಧ ಆರಂಭಿಸಿದವರು ಅವರೇ. ನೀವು ಅವರಿಗೆ ಹೆದರುತ್ತೀರಾ? ನೀವು ಹೆದರಲು ಹೆಚ್ಚು ಅರ್ಹನಾಗಿರುವುದು ಅಲ್ಲಾಹನಾಗಿದ್ದಾನೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ. info
التفاسير: