Vertaling van de betekenissen Edele Qur'an - De Kannada vertaling - Hamza Batoer

Pagina nummer:close

external-link copy
69 : 9

كَالَّذِیْنَ مِنْ قَبْلِكُمْ كَانُوْۤا اَشَدَّ مِنْكُمْ قُوَّةً وَّاَكْثَرَ اَمْوَالًا وَّاَوْلَادًا ؕ— فَاسْتَمْتَعُوْا بِخَلَاقِهِمْ فَاسْتَمْتَعْتُمْ بِخَلَاقِكُمْ كَمَا اسْتَمْتَعَ الَّذِیْنَ مِنْ قَبْلِكُمْ بِخَلَاقِهِمْ وَخُضْتُمْ كَالَّذِیْ خَاضُوْا ؕ— اُولٰٓىِٕكَ حَبِطَتْ اَعْمَالُهُمْ فِی الدُّنْیَا وَالْاٰخِرَةِ ۚ— وَاُولٰٓىِٕكَ هُمُ الْخٰسِرُوْنَ ۟

(ನಿಮ್ಮ ಸ್ಥಿತಿಯು) ನಿಮಗಿಂತ ಮೊದಲಿನ ಸತ್ಯನಿಷೇಧಿಗಳಂತೆ. ಅವರು ನಿಮಗಿಂತಲೂ ಹೆಚ್ಚು ಬಲಿಷ್ಠರಾಗಿದ್ದರು ಮತ್ತು ನಿಮಗಿಂತಲೂ ಹೆಚ್ಚು ಆಸ್ತಿ ಹಾಗೂ ಮಕ್ಕಳನ್ನು ಹೊಂದಿದ್ದರು. ಅವರು ಅವರ ಪಾಲನ್ನು ಪಡೆದು ಆನಂದಿಸಿದರು. ನಿಮಗಿಂತ ಮೊದಲಿನವರು ಅವರ ಪಾಲನ್ನು ಪಡೆದು ಆನಂದಿಸಿದಂತೆ ನೀವೂ ಸಹ ನಿಮ್ಮ ಪಾಲನ್ನು ಪಡೆದು ಆನಂದಿಸುತ್ತೀರಿ. ಅವರು ತಮಾಷೆಗಳಲ್ಲಿ ಕಾಲಹರಣ ಮಾಡಿದಂತೆ ನೀವು ಕೂಡ ತಮಾಷೆಗಳಲ್ಲಿ ಕಾಲಹರಣ ಮಾಡಿದ್ದೀರಿ. ಅಂತಹವರ ಕರ್ಮಗಳು ಇಹಲೋಕದಲ್ಲೂ, ಪರಲೋಕದಲ್ಲೂ ವ್ಯರ್ಥವಾಗಿವೆ. ಅವರೇ ನಷ್ಟಹೊಂದಿದವರು. info
التفاسير:

external-link copy
70 : 9

اَلَمْ یَاْتِهِمْ نَبَاُ الَّذِیْنَ مِنْ قَبْلِهِمْ قَوْمِ نُوْحٍ وَّعَادٍ وَّثَمُوْدَ ۙ۬— وَقَوْمِ اِبْرٰهِیْمَ وَاَصْحٰبِ مَدْیَنَ وَالْمُؤْتَفِكٰتِ ؕ— اَتَتْهُمْ رُسُلُهُمْ بِالْبَیِّنٰتِ ۚ— فَمَا كَانَ اللّٰهُ لِیَظْلِمَهُمْ وَلٰكِنْ كَانُوْۤا اَنْفُسَهُمْ یَظْلِمُوْنَ ۟

ಅವರಿಗಿಂತ ಮೊದಲಿನವರ—ನೂಹರ ಜನರು, ಆದ್ ಗೋತ್ರ, ಸಮೂದ್ ಗೋತ್ರ, ಇಬ್ರಾಹೀಮರ ಜನರು, ಮದ್ಯನ್ ದೇಶದ ಜನರು, ಬುಡಮೇಲಾದ ದೇಶದ ಜನರು—ಮುಂತಾದವರ ಸಮಾಚಾರಗಳು ಇವರಿಗೆ ತಲುಪಿಲ್ಲವೇ? ಅವರೆಲ್ಲರ ಬಳಿಗೆ ಅವರ ಪ್ರವಾದಿಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಬಂದಿದ್ದರು. ಅಲ್ಲಾಹು ಅವರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದರೆ ಅವರೇ ಅವರಿಗೆ ಅನ್ಯಾಯ ಮಾಡಿದರು. info
التفاسير:

external-link copy
71 : 9

وَالْمُؤْمِنُوْنَ وَالْمُؤْمِنٰتُ بَعْضُهُمْ اَوْلِیَآءُ بَعْضٍ ۘ— یَاْمُرُوْنَ بِالْمَعْرُوْفِ وَیَنْهَوْنَ عَنِ الْمُنْكَرِ وَیُقِیْمُوْنَ الصَّلٰوةَ وَیُؤْتُوْنَ الزَّكٰوةَ وَیُطِیْعُوْنَ اللّٰهَ وَرَسُوْلَهٗ ؕ— اُولٰٓىِٕكَ سَیَرْحَمُهُمُ اللّٰهُ ؕ— اِنَّ اللّٰهَ عَزِیْزٌ حَكِیْمٌ ۟

ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರು ಪರಸ್ಪರ ಆಪ್ತಮಿತ್ರರು. ಅವರು ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ, ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ನೀಡುತ್ತಾರೆ ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರ ಆಜ್ಞಾಪಾಲನೆ ಮಾಡುತ್ತಾರೆ. ಅಲ್ಲಾಹು ಅವರಿಗೆ ಖಂಡಿತ ದಯೆ ತೋರುವನು. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
72 : 9

وَعَدَ اللّٰهُ الْمُؤْمِنِیْنَ وَالْمُؤْمِنٰتِ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا وَمَسٰكِنَ طَیِّبَةً فِیْ جَنّٰتِ عَدْنٍ ؕ— وَرِضْوَانٌ مِّنَ اللّٰهِ اَكْبَرُ ؕ— ذٰلِكَ هُوَ الْفَوْزُ الْعَظِیْمُ ۟۠

ಅಲ್ಲಾಹು ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳ ಭರವಸೆ ನೀಡಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಚಿರಸ್ಥಾಯಿಯಾದ ಉದ್ಯಾನಗಳಲ್ಲಿರುವ ಮನಮೋಹಕ ವಸತಿಗಳ ಭರವಸೆಯನ್ನೂ ನೀಡಿದ್ದಾನೆ. ಆದರೆ ಅಲ್ಲಾಹನ ಸಂಪ್ರೀತಿಯೇ ಎಲ್ಲಕ್ಕಿಂತಲೂ ದೊಡ್ಡದು. ಅದೇ ಅತಿದೊಡ್ಡ ಯಶಸ್ಸು. info
التفاسير: