ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
35 : 18

وَدَخَلَ جَنَّتَهٗ وَهُوَ ظَالِمٌ لِّنَفْسِهٖ ۚ— قَالَ مَاۤ اَظُنُّ اَنْ تَبِیْدَ هٰذِهٖۤ اَبَدًا ۟ۙ

ಅವನು ತನ್ನ ತೋಟವನ್ನು ಪ್ರವೇಶಿಸಿದನು. ಅವನು ಸ್ವಯಂ ಅಕ್ರಮವೆಸಗಿದವನಾಗಿದ್ದನು. ಅವನು ಹೇಳಿದನು: “ಇದು ಯಾವತ್ತಾದರೂ ನಾಶವಾಗಬಹುದೆಂದು ನಾನು ಭಾವಿಸುವುದೇ ಇಲ್ಲ. info
التفاسير:

external-link copy
36 : 18

وَّمَاۤ اَظُنُّ السَّاعَةَ قَآىِٕمَةً ۙ— وَّلَىِٕنْ رُّدِدْتُّ اِلٰی رَبِّیْ لَاَجِدَنَّ خَیْرًا مِّنْهَا مُنْقَلَبًا ۟ۚ

ಅಂತ್ಯಸಮಯವು ಸಂಭವಿಸುವುದೆಂದು ಕೂಡ ನಾನು ಭಾವಿಸುವುದಿಲ್ಲ. ಇನ್ನು ನನ್ನನ್ನು ನನ್ನ ಪರಿಪಾಲಕನ (ಅಲ್ಲಾಹನ) ಬಳಿಗೆ ಹಿಂದಿರುಗಿಸಲ್ಪಟ್ಟರೂ ಸಹ, ನಾನು ಅಲ್ಲಿಯೂ ಕೂಡ ಇದಕ್ಕಿಂತಲೂ ಶ್ರೇಷ್ಠವಾದುದನ್ನು ಬದಲಿಯಾಗಿ ಪಡೆಯುವೆನು.” info
التفاسير:

external-link copy
37 : 18

قَالَ لَهٗ صَاحِبُهٗ وَهُوَ یُحَاوِرُهٗۤ اَكَفَرْتَ بِالَّذِیْ خَلَقَكَ مِنْ تُرَابٍ ثُمَّ مِنْ نُّطْفَةٍ ثُمَّ سَوّٰىكَ رَجُلًا ۟ؕ

ಅವನೊಡನೆ ಮಾತನಾಡುತ್ತಾ ಅವನ ಗೆಳೆಯ ಹೇಳಿದನು: “ನಿನ್ನನ್ನು ಮಣ್ಣಿನಿಂದ, ನಂತರ ವೀರ್ಯದಿಂದ ಸೃಷ್ಟಿಸಿ, ನಿನ್ನನ್ನು ಒಬ್ಬ ಪೂರ್ಣ ಮಾನವನನ್ನಾಗಿ ಮಾಡಿದ ಅಲ್ಲಾಹನನ್ನು ನೀನು ನಿಷೇಧಿಸುವೆಯಾ? info
التفاسير:

external-link copy
38 : 18

لٰكِنَّاۡ هُوَ اللّٰهُ رَبِّیْ وَلَاۤ اُشْرِكُ بِرَبِّیْۤ اَحَدًا ۟

ಆದರೆ ಆ ಅಲ್ಲಾಹನೇ ನನ್ನ ಪರಿಪಾಲಕನೆಂದು ನಾನು ದೃಢವಾಗಿ ನಂಬುತ್ತೇನೆ. ನಾನು ನನ್ನ ಪರಿಪಾಲಕನೊಡನೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ. info
التفاسير:

external-link copy
39 : 18

وَلَوْلَاۤ اِذْ دَخَلْتَ جَنَّتَكَ قُلْتَ مَا شَآءَ اللّٰهُ ۙ— لَا قُوَّةَ اِلَّا بِاللّٰهِ ۚ— اِنْ تَرَنِ اَنَا اَقَلَّ مِنْكَ مَالًا وَّوَلَدًا ۟ۚ

ನೀನು ನಿನ್ನ ತೋಟವನ್ನು ಪ್ರವೇಶಿಸುವಾಗ, “ಇವೆಲ್ಲವೂ ಅಲ್ಲಾಹು ಇಚ್ಛಿಸಿದ್ದು. ಅಲ್ಲಾಹನಿಂದಲ್ಲದೆ ಯಾವುದೇ ಶಕ್ತಿಯಿಲ್ಲ” ಎಂದು ಏಕೆ ಹೇಳಲಿಲ್ಲ? ಆಸ್ತಿ ಮತ್ತು ಸಂತಾನದಲ್ಲಿ ನೀನು ನನ್ನನ್ನು ನಿನಗಿಂತಲೂ ಕೀಳಾಗಿ ಕಾಣುತ್ತಿದ್ದರೆ. info
التفاسير:

external-link copy
40 : 18

فَعَسٰی رَبِّیْۤ اَنْ یُّؤْتِیَنِ خَیْرًا مِّنْ جَنَّتِكَ وَیُرْسِلَ عَلَیْهَا حُسْبَانًا مِّنَ السَّمَآءِ فَتُصْبِحَ صَعِیْدًا زَلَقًا ۟ۙ

ನನ್ನ ಪರಿಪಾಲಕನು (ಅಲ್ಲಾಹು) ನಿನ್ನ ತೋಟಕ್ಕಿಂತಲೂ ಶ್ರೇಷ್ಠವಾದುದನ್ನು ನನಗೆ ನೀಡಬಹುದು ಮತ್ತು ನಿನ್ನ ತೋಟಕ್ಕೆ ಆಕಾಶದಿಂದ ಶಿಕ್ಷೆಯನ್ನು ಇಳಿಸಿ ಅದನ್ನು ಜಾರುಭೂಮಿಯಾಗಿ ಪರಿವರ್ತಿಸಬಹುದು. info
التفاسير:

external-link copy
41 : 18

اَوْ یُصْبِحَ مَآؤُهَا غَوْرًا فَلَنْ تَسْتَطِیْعَ لَهٗ طَلَبًا ۟

ಅಥವಾ ಅದರ ನೀರನ್ನು ಆಳಕ್ಕೆ ಇಂಗಿಸಬಹುದು. ಆಗ ಅದನ್ನು ಹುಡುಕಿ ತರಲು ನಿನಗೆ ಸಾಧ್ಯವಾಗದು.” info
التفاسير:

external-link copy
42 : 18

وَاُحِیْطَ بِثَمَرِهٖ فَاَصْبَحَ یُقَلِّبُ كَفَّیْهِ عَلٰی مَاۤ اَنْفَقَ فِیْهَا وَهِیَ خَاوِیَةٌ عَلٰی عُرُوْشِهَا وَیَقُوْلُ یٰلَیْتَنِیْ لَمْ اُشْرِكْ بِرَبِّیْۤ اَحَدًا ۟

ಅವನ ಎಲ್ಲಾ ಫಲಗಳು ಆವರಿಸಲ್ಪಟ್ಟಿತು (ಸಂಪೂರ್ಣ ನಾಶವಾಯಿತು). ಆಗ ಅವನು ಅದಕ್ಕೆ ಮಾಡಿದ ಖರ್ಚುಗಳಿಗಾಗಿ (ಹತಾಶೆಯಿಂದ) ಕೈಗಳನ್ನು ತಿರುಗಿಸತೊಡಗಿದನು. ಆ ತೋಟಗಳು ಸಂಪೂರ್ಣವಾಗಿ ಮಗುಚಿ ಬಿದ್ದಿದ್ದವು. ಅವನು ಹೇಳಿದನು: “ನಾನು ನನ್ನ ಪರಿಪಾಲಕನೊಡನೆ (ಅಲ್ಲಾಹನೊಡನೆ) ಸಹಭಾಗಿತ್ವ (ಶಿರ್ಕ್) ಮಾಡದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!” info
التفاسير:

external-link copy
43 : 18

وَلَمْ تَكُنْ لَّهٗ فِئَةٌ یَّنْصُرُوْنَهٗ مِنْ دُوْنِ اللّٰهِ وَمَا كَانَ مُنْتَصِرًا ۟ؕ

ಅಲ್ಲಾಹನಿಗೆ ವಿರುದ್ಧವಾಗಿ ಅವನ ರಕ್ಷಣೆ ಮಾಡಲು ಯಾವುದೇ ತಂಡವೂ ಬರಲಿಲ್ಲ. ಅವನಿಗೆ ಸ್ವಯಂ ರಕ್ಷಣೆ ಪಡೆಯಲೂ ಸಾಧ್ಯವಾಗಲಿಲ್ಲ. info
التفاسير:

external-link copy
44 : 18

هُنَالِكَ الْوَلَایَةُ لِلّٰهِ الْحَقِّ ؕ— هُوَ خَیْرٌ ثَوَابًا وَّخَیْرٌ عُقْبًا ۟۠

ಅಲ್ಲಿ ಅಧಿಕಾರವು ಸಂಪೂರ್ಣವಾಗಿ ಅಲ್ಲಾಹನದ್ದೆಂದು (ಸಾಬೀತಾಗಿದೆ). ಅವನು ಪ್ರತಿಫಲ ನೀಡುವುದಲ್ಲಿ ಅತ್ಯುತ್ತಮನಾಗಿದ್ದಾನೆ ಮತ್ತು ಅಂತಿಮ ಫಲಿತಾಂಶ ನೀಡುವುದರಲ್ಲೂ ಅತ್ಯುತ್ತಮನಾಗಿದ್ದಾನೆ. info
التفاسير:

external-link copy
45 : 18

وَاضْرِبْ لَهُمْ مَّثَلَ الْحَیٰوةِ الدُّنْیَا كَمَآءٍ اَنْزَلْنٰهُ مِنَ السَّمَآءِ فَاخْتَلَطَ بِهٖ نَبَاتُ الْاَرْضِ فَاَصْبَحَ هَشِیْمًا تَذْرُوْهُ الرِّیٰحُ ؕ— وَكَانَ اللّٰهُ عَلٰی كُلِّ شَیْءٍ مُّقْتَدِرًا ۟

(ಪ್ರವಾದಿಯವರೇ) ಅವರಿಗೆ ಇಹಲೋಕದ ಬಗ್ಗೆ ಒಂದು ಉದಾಹರಣೆಯನ್ನು ತಿಳಿಸಿಕೊಡಿ. ಅದು (ಇಹಲೋಕವು) ನಾವು ಆಕಾಶದಿಂದ ಸುರಿಸಿದ ಮಳೆಯಂತೆ. ಭೂಮಿಯ ಸಸ್ಯಗಳು ಅದರೊಂದಿಗೆ ಬೆರೆತು ಬೆಳೆದವು. ನಂತರ ಅವು ಗಾಳಿ ಬೀಸಿದರೆ ಹಾರಿ ಹೋಗುವ ಧೂಳಿಯಂತಾದವು. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸರ್ವಶಕ್ತನಾಗಿದ್ದಾನೆ. info
التفاسير: