ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
84 : 18

اِنَّا مَكَّنَّا لَهٗ فِی الْاَرْضِ وَاٰتَیْنٰهُ مِنْ كُلِّ شَیْءٍ سَبَبًا ۟ۙ

ನಾವು ಅವರಿಗೆ ಭೂಮಿಯಲ್ಲಿ ಅಧಿಕಾರವನ್ನು ನೀಡಿದ್ದೆವು ಮತ್ತು ಅವರಿಗೆ ಬೇಕಾದ ಎಲ್ಲಾ ಸಾಧನಾನುಕೂಲತೆಗಳನ್ನು ನೀಡಿದ್ದೆವು. info
التفاسير:

external-link copy
85 : 18

فَاَتْبَعَ سَبَبًا ۟

ಅವರು ಒಂದು ಮಾರ್ಗವನ್ನು ಹಿಂಬಾಲಿಸಿ ಹೋದರು. info
التفاسير:

external-link copy
86 : 18

حَتّٰۤی اِذَا بَلَغَ مَغْرِبَ الشَّمْسِ وَجَدَهَا تَغْرُبُ فِیْ عَیْنٍ حَمِئَةٍ وَّوَجَدَ عِنْدَهَا قَوْمًا ؕ۬— قُلْنَا یٰذَا الْقَرْنَیْنِ اِمَّاۤ اَنْ تُعَذِّبَ وَاِمَّاۤ اَنْ تَتَّخِذَ فِیْهِمْ حُسْنًا ۟

ಎಲ್ಲಿಯವರೆಗೆಂದರೆ, ಅವರು ಸೂರ್ಯಾಸ್ತದ ಸ್ಥಳಕ್ಕೆ ತಲುಪಿದಾಗ, ಅದು (ಸೂರ್ಯ) ಕೆಸರು ನೀರಿನ ತೊರೆಯಲ್ಲಿ ಅಸ್ತಮಿಸುವುದನ್ನು ಕಂಡರು. ಆ ತೊರೆಯ ಬಳಿ ಜನರನ್ನೂ ಕಂಡರು. ನಾವು ಹೇಳಿದೆವು: “ಓ ದುಲ್-ಕರ್ನೈನ್! ಒಂದೋ ಇವರನ್ನು ಶಿಕ್ಷಿಸಿ ಅಥವಾ ಅವರ ಬಗ್ಗೆ ಉತ್ತಮ ಸಮೀಪನವನ್ನು ಸ್ವೀಕರಿಸಿ.” info
التفاسير:

external-link copy
87 : 18

قَالَ اَمَّا مَنْ ظَلَمَ فَسَوْفَ نُعَذِّبُهٗ ثُمَّ یُرَدُّ اِلٰی رَبِّهٖ فَیُعَذِّبُهٗ عَذَابًا نُّكْرًا ۟

ಅವರು ಹೇಳಿದರು: “ಯಾರು ಅಕ್ರಮವೆಸಗುತ್ತಾನೋ ಅವನನ್ನು ನಾವು ಶಿಕ್ಷಿಸುತ್ತೇವೆ. ನಂತರ ಅವನನ್ನು ಅವನ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿಸಲಾಗುತ್ತದೆ. ಆಗ ಅವನು ಅವನಿಗೆ ಕಠೋರ ಶಿಕ್ಷೆಯನ್ನು ನೀಡುತ್ತಾನೆ. info
التفاسير:

external-link copy
88 : 18

وَاَمَّا مَنْ اٰمَنَ وَعَمِلَ صَالِحًا فَلَهٗ جَزَآءَ ١لْحُسْنٰی ۚ— وَسَنَقُوْلُ لَهٗ مِنْ اَمْرِنَا یُسْرًا ۟ؕ

ಆದರೆ ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮವೆಸಗುತ್ತಾನೋ ಅವನಿಗೆ ಅತ್ಯುತ್ತಮ ಪ್ರತಿಫಲವು ದೊರೆಯುತ್ತದೆ. ನಾವು ಅವನಿಗೆ ನಮ್ಮ ಕೆಲಸಗಳಲ್ಲಿ ಸುಲಭವಾಗಿರುವುದನ್ನೇ ಆದೇಶಿಸುತ್ತೇವೆ.” info
التفاسير:

external-link copy
89 : 18

ثُمَّ اَتْبَعَ سَبَبًا ۟

ನಂತರ ಅವರು ಇನ್ನೊಂದು ಮಾರ್ಗವನ್ನು ಹಿಂಬಾಲಿಸಿ ಹೋದರು. info
التفاسير:

external-link copy
90 : 18

حَتّٰۤی اِذَا بَلَغَ مَطْلِعَ الشَّمْسِ وَجَدَهَا تَطْلُعُ عَلٰی قَوْمٍ لَّمْ نَجْعَلْ لَّهُمْ مِّنْ دُوْنِهَا سِتْرًا ۟ۙ

ಎಲ್ಲಿಯವರೆಗೆಂದರೆ, ಅವರು ಸೂರ್ಯೋದಯದ ಸ್ಥಳಕ್ಕೆ ತಲುಪಿದಾಗ, ಅದು (ಸೂರ್ಯ) ಜನರ ಮೇಲೆ ಉದಯವಾಗುತ್ತಿರುವಂತೆ ಕಂಡರು. ಅದರಿಂದ ಮರೆಯಾಗಲು ನಾವು ಅವರಿಗೆ ಯಾವುದೇ ಪರದೆಯನ್ನು ಮಾಡಿಕೊಟ್ಟಿರಲಿಲ್ಲ. info
التفاسير:

external-link copy
91 : 18

كَذٰلِكَ ؕ— وَقَدْ اَحَطْنَا بِمَا لَدَیْهِ خُبْرًا ۟

ವಿಷಯವು ಈ ರೀತಿಯಾಗಿದೆ. ನಾವು ಅವರ ಬಗೆಗಿನ ಎಲ್ಲಾ ಸಮಾಚಾರಗಳನ್ನು ಆವರಿಸಿಕೊಂಡಿದ್ದೆವು. info
التفاسير:

external-link copy
92 : 18

ثُمَّ اَتْبَعَ سَبَبًا ۟

ನಂತರ ಅವರು ಇನ್ನೊಂದು ಮಾರ್ಗವನ್ನು ಹಿಂಬಾಲಿಸಿ ಹೋದರು. info
التفاسير:

external-link copy
93 : 18

حَتّٰۤی اِذَا بَلَغَ بَیْنَ السَّدَّیْنِ وَجَدَ مِنْ دُوْنِهِمَا قَوْمًا ۙ— لَّا یَكَادُوْنَ یَفْقَهُوْنَ قَوْلًا ۟

ಎಲ್ಲಿಯವರೆಗೆಂದರೆ, ಅವರು ಎರಡು ಬೆಟ್ಟಗಳ ನಡುವೆ ತಲುಪಿದಾಗ, ಅವುಗಳ ಈಚೆ ಬದಿಯಲ್ಲಿ ಒಂದು ಜನತೆಯನ್ನು ಕಂಡರು. ಅವರಿಗೆ ಮಾತನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. info
التفاسير:

external-link copy
94 : 18

قَالُوْا یٰذَا الْقَرْنَیْنِ اِنَّ یَاْجُوْجَ وَمَاْجُوْجَ مُفْسِدُوْنَ فِی الْاَرْضِ فَهَلْ نَجْعَلُ لَكَ خَرْجًا عَلٰۤی اَنْ تَجْعَلَ بَیْنَنَا وَبَیْنَهُمْ سَدًّا ۟

ಅವರು ಹೇಳಿದರು: “ಓ ದುಲ್-ಕರ್ನೈನ್! ನಿಶ್ಚಯವಾಗಿಯೂ ಯಾ‌ಜೂಜ್-ಮಾ‌ಜೂಜರು ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಿದ್ದಾರೆ. ನಾವು ನಿಮಗೆ ಒಂದು ಖರ್ಚನ್ನು ನಿಗದಿಪಡಿಸಿದರೆ, ನೀವು ನಮ್ಮ ಮತ್ತು ಅವರ ನಡುವೆ ಒಂದು ತಡೆಗೋಡೆಯನ್ನು ನಿರ್ಮಿಸಿಕೊಡುವಿರಾ? info
التفاسير:

external-link copy
95 : 18

قَالَ مَا مَكَّنِّیْ فِیْهِ رَبِّیْ خَیْرٌ فَاَعِیْنُوْنِیْ بِقُوَّةٍ اَجْعَلْ بَیْنَكُمْ وَبَیْنَهُمْ رَدْمًا ۟ۙ

ದುಲ್-ಕರ್ನೈನ್ ಹೇಳಿದರು: “ನನ್ನ ಪರಿಪಾಲಕನು (ಅಲ್ಲಾಹು) ಏನೆಲ್ಲಾ ನನ್ನ ಅಧಿಕಾರಕ್ಕೆ ನೀಡಿದ್ದಾನೋ ಅದು ಅತ್ಯುತ್ತಮವಾಗಿದೆ. ನೀವು ನಿಮ್ಮ ದೇಹಬಲದಿಂದ ನನಗೆ ಸಹಾಯ ಮಾಡಿರಿ. ನಿಮ್ಮ ಮತ್ತು ಅವರ ನಡುವೆ ನಾನು ಒಂದು ಬಲಿಷ್ಠ ಗೋಡೆಯನ್ನು ನಿರ್ಮಿಸಿಕೊಡುತ್ತೇನೆ.” info
التفاسير:

external-link copy
96 : 18

اٰتُوْنِیْ زُبَرَ الْحَدِیْدِ ؕ— حَتّٰۤی اِذَا سَاوٰی بَیْنَ الصَّدَفَیْنِ قَالَ انْفُخُوْا ؕ— حَتّٰۤی اِذَا جَعَلَهٗ نَارًا ۙ— قَالَ اٰتُوْنِیْۤ اُفْرِغْ عَلَیْهِ قِطْرًا ۟ؕ

(ನಂತರ ಅವರು ಹೇಳಿದರು): “ನನಗೆ ಕಬ್ಬಿಣದ ತುಂಡುಗಳನ್ನು ತಂದುಕೊಡಿ.” ಎಲ್ಲಿಯವರೆಗೆಂದರೆ, ಆ ಎರಡು ಬೆಟ್ಟಗಳ ನಡುವೆ ಗೋಡೆಯನ್ನು ಸಮಗೊಳಿಸಿದಾಗ, ಅವರು ಹೇಳಿದರು: “ಬೆಂಕಿಯನ್ನು ಜೋರಾಗಿ ಉರಿಯುವಂತೆ ಮಾಡಿರಿ.” ಎಲ್ಲಿಯವರೆಗೆಂದರೆ, ಆ ಕಬ್ಬಿಣದ ತುಂಡುಗಳು ಸಂಪೂರ್ಣ ಕೆಂಡದಂತಾದಾಗ, ಅವರು ಹೇಳಿದರು: “ನನಗೆ ಕರಗಿಸಿದ ತಾಮ್ರವನ್ನು ತಂದು ಕೊಡಿ. ನಾನು ಅದನ್ನು ಅದಕ್ಕೆ ಸುರಿಯುತ್ತೇನೆ.” info
التفاسير:

external-link copy
97 : 18

فَمَا اسْطَاعُوْۤا اَنْ یَّظْهَرُوْهُ وَمَا اسْتَطَاعُوْا لَهٗ نَقْبًا ۟

ನಂತರ ಆ ಗೋಡೆಯನ್ನು ಏರಿ ಬರಲು ಅವರಿಗೆ (ಯಾ‌ಜೂಜ್-ಮಾ‌ಜೂಜರಿಗೆ) ಸಾಧ್ಯವಾಗಲಿಲ್ಲ. ಅದಕ್ಕೆ ಕನ್ನ ಕೊರೆಯಲೂ ಅವರಿಗೆ ಸಾಧ್ಯವಾಗಲಿಲ್ಲ. info
التفاسير: