[1] ಜನರೆಲ್ಲರೂ ಸತ್ಯವಿಶ್ವಾಸಿಗಳಾಗಬೇೆಕೆಂದು ಪ್ರವಾದಿ ಮುಹಮ್ಮದರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತೀವ ಉತ್ಸಾಹವಿತ್ತು. ಜನರು ಸತ್ಯವನ್ನು ನಿಷೇಧಿಸುವುದನ್ನು ಕಾಣುವಾಗ ಅವರಿಗೆ ಬಹಳ ಬೇಸರವಾಗುತ್ತಿತ್ತು. ಅವರು ಎಷ್ಟು ನೊಂದುಕೊಳ್ಳುತ್ತಿದ್ದರೆಂದರೆ ಇದರಿಂದ ಅವರ ಜೀವಕ್ಕೇ ಅಪಾಯವಾಗಬಹುದೋ ಎಂಬ ಭಯವು ಕಾಡುತ್ತಿತ್ತು.
[1] ಈ ಯುವಕರನ್ನು ‘ಅಸ್‌ಹಾಬುಲ್ ಕಹ್ಫ್’ (ಗುಹಾವಾಸಿಗಳು) ಎಂದು ಕರೆಯಲಾಗುತ್ತದೆ. ಇವರು ವಾಸವಾಗಿದ್ದ ಊರನ್ನು ದಖ್ಯಾನೂಸ್ ಎಂಬ ರಾಜ ಆಳುತ್ತಿದ್ದ. ಈತ ತನ್ನ ರಾಜ್ಯದಲ್ಲಿ ವಿಗ್ರಹಪೂಜೆ ಮತ್ತು ವಿಗ್ರಹಗಳಿಗೆ ಹರಕೆ ಹೊರುವುದನ್ನು ಕಡ್ಡಾಯಗೊಳಿಸಿದ. ಅಲ್ಲಾಹು ಕೆಲವು ಯುವಕರಿಗೆ ಏಕದೇವವಿಶ್ವಾಸದ ಕಡೆಗೆ ಮಾರ್ಗದರ್ಶನ ಮಾಡಿದ್ದ. ಅವರು ರಹಸ್ಯವಾಗಿ ಅಲ್ಲಾಹನನ್ನು ಆರಾಧಿಸುತ್ತಿದ್ದರು. ಕಾಲಕ್ರಮೇಣ, ಈ ವಿಷಯ ಊರಲ್ಲೆಲ್ಲಾ ಹಬ್ಬಿ ರಾಜನ ಕಿವಿಗೆ ಬಿತ್ತು. ಅವನು ಇವರನ್ನು ಆಸ್ಥಾನಕ್ಕೆ ಕರೆದು ವಿಚಾರಿಸಿದಾಗ ಅವರು ರಾಜನ ಮುಂದೆ ಧೈರ್ಯವಾಗಿ ಏಕದೇವವಿಶ್ವಾಸವನ್ನು ಘೋಷಿಸಿದರು. ನಂತರ ಅವರು ರಾಜನ ಶಿಕ್ಷೆಯಿಂದ ಪಾರಾಗಲು ಊರು ಬಿಟ್ಟು ಗುಹೆಯಲ್ಲಿ ಹೋಗಿ ನೆಲೆಸಿದರು.