ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
28 : 18

وَاصْبِرْ نَفْسَكَ مَعَ الَّذِیْنَ یَدْعُوْنَ رَبَّهُمْ بِالْغَدٰوةِ وَالْعَشِیِّ یُرِیْدُوْنَ وَجْهَهٗ وَلَا تَعْدُ عَیْنٰكَ عَنْهُمْ ۚ— تُرِیْدُ زِیْنَةَ الْحَیٰوةِ الدُّنْیَا ۚ— وَلَا تُطِعْ مَنْ اَغْفَلْنَا قَلْبَهٗ عَنْ ذِكْرِنَا وَاتَّبَعَ هَوٰىهُ وَكَانَ اَمْرُهٗ فُرُطًا ۟

ತಮ್ಮ ಪರಿಪಾಲಕನ (ಅಲ್ಲಾಹನ) ಸಂಪ್ರೀತಿಯನ್ನು ಬಯಸುತ್ತಾ, ಮುಂಜಾನೆ ಮತ್ತು ಸಂಜೆ ಅವನನ್ನು ಕರೆದು ಪ್ರಾರ್ಥಿಸುವವರ ಜೊತೆಗೆ ನೀವು ನಿಮ್ಮನ್ನು ಸ್ಥೈರ್ಯದಿಂದ ನಿಲ್ಲಿಸಿರಿ. ಇಹಲೋಕ ಜೀವನದ ಅಲಂಕಾರಗಳಿಗೆ ಮರುಳಾಗಿ ನಿಮ್ಮ ದೃಷ್ಟಿಯು ಅವರಿಂದ ದೂರವಾಗದಿರಲಿ. ನಾವು ಯಾರ ಹೃದಯಕ್ಕೆ ನಮ್ಮ ನೆನಪು ಬರದಂತೆ ಮಾಡಿದ್ದೇವೆಯೋ, ಯಾರು ಸ್ವೇಚ್ಛೆಗಳನ್ನು ಹಿಂಬಾಲಿಸುತ್ತಾನೋ ಮತ್ತು ಯಾರ ಕರ್ಮಗಳು ಹದ್ದು ಮೀರಿವೆಯೋ ಅವರನ್ನು ಅನುಸರಿಸಬೇಡಿ. info
التفاسير:

external-link copy
29 : 18

وَقُلِ الْحَقُّ مِنْ رَّبِّكُمْ ۫— فَمَنْ شَآءَ فَلْیُؤْمِنْ وَّمَنْ شَآءَ فَلْیَكْفُرْ ۚ— اِنَّاۤ اَعْتَدْنَا لِلظّٰلِمِیْنَ نَارًا اَحَاطَ بِهِمْ سُرَادِقُهَا ؕ— وَاِنْ یَّسْتَغِیْثُوْا یُغَاثُوْا بِمَآءٍ كَالْمُهْلِ یَشْوِی الْوُجُوْهَ ؕ— بِئْسَ الشَّرَابُ ؕ— وَسَآءَتْ مُرْتَفَقًا ۟

ಹೇಳಿರಿ: “ನನ್ನ ಈ ಸತ್ಯಸಂದೇಶವು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದಾಗಿದೆ. ಇಚ್ಛೆಯಿರುವವರು ಅದರಲ್ಲಿ ವಿಶ್ವಾಸವಿಡಲಿ ಮತ್ತು ಇಚ್ಛೆಯಿಲ್ಲದವರು ನಿಷೇಧಿಸಲಿ. ನಿಶ್ಚಯವಾಗಿಯೂ, ನಾವು ಅಕ್ರಮಿಗಳಿಗೆ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ. ಅದರ ಗೋಡೆಗಳು ಅವರನ್ನು ಆವರಿಸಿಕೊಂಡಿವೆ. ಅವರು ಕುಡಿಯಲು ನೀರು ಕೇಳುವಾಗ ನಾವು ಅವರಿಗೆ ಕಾಯಿಸಿದ ಎಣ್ಣೆಯ ಮಡ್ಡಿಯಂತಹ ನೀರನ್ನು ಕೊಡುವೆವು. ಅದು ಅವರ ಮುಖಗಳನ್ನು ಸುಟ್ಟು ಬಿಡುತ್ತದೆ. ಆ ಪಾನೀಯವು ಬಹಳ ನಿಕೃಷ್ಟವಾಗಿದೆ. ಆ ವಾಸಸ್ಥಳವು ಕೂಡ ಬಹಳ ನಿಕೃಷ್ಟವಾಗಿದೆ. info
التفاسير:

external-link copy
30 : 18

اِنَّ الَّذِیْنَ اٰمَنُوْا وَعَمِلُوا الصّٰلِحٰتِ اِنَّا لَا نُضِیْعُ اَجْرَ مَنْ اَحْسَنَ عَمَلًا ۟ۚ

ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅತ್ಯುತ್ತಮ ಕರ್ಮಗಳನ್ನು ಮಾಡುವ ಯಾರ ಪ್ರತಿಫಲವನ್ನೂ ನಾವು ವ್ಯರ್ಥಗೊಳಿಸುವುದಿಲ್ಲ. info
التفاسير:

external-link copy
31 : 18

اُولٰٓىِٕكَ لَهُمْ جَنّٰتُ عَدْنٍ تَجْرِیْ مِنْ تَحْتِهِمُ الْاَنْهٰرُ یُحَلَّوْنَ فِیْهَا مِنْ اَسَاوِرَ مِنْ ذَهَبٍ وَّیَلْبَسُوْنَ ثِیَابًا خُضْرًا مِّنْ سُنْدُسٍ وَّاِسْتَبْرَقٍ مُّتَّكِـِٕیْنَ فِیْهَا عَلَی الْاَرَآىِٕكِ ؕ— نِعْمَ الثَّوَابُ ؕ— وَحَسُنَتْ مُرْتَفَقًا ۟۠

ಅವರಿಗೆ ಶಾಶ್ವತವಾಸದ ಸ್ವರ್ಗೋದ್ಯಾನಗಳಿವೆ. ಅವರ ತಳಭಾಗದಿಂದ ನದಿಗಳು ಹರಿಯುತ್ತವೆ. ಅಲ್ಲಿ ಅವರಿಗೆ ಚಿನ್ನದ ಕಡಗಗಳನ್ನು ತೊಡಿಸಲಾಗುವುದು. ಅವರು ನಯವಾದ ಮತ್ತು ದಪ್ಪ ಹಸಿರು ರೇಷ್ಮೆ ಬಟ್ಟೆಗಳನ್ನು ಧರಿಸುವರು. ಅಲ್ಲಿ ಅವರು ಮಂಚಗಳಲ್ಲಿ ಒರಗಿ ಕುಳಿತು ವಿಶ್ರಾಂತಿ ಪಡೆಯುವರು. ಆ ಪ್ರತಿಫಲವು ಬಹಳ ಉತ್ಕೃಷ್ಟವಾಗಿದೆ. ಆ ವಾಸಸ್ಥಳವು ಬಹಳ ಶ್ರೇಷ್ಠವಾಗಿದೆ. info
التفاسير:

external-link copy
32 : 18

وَاضْرِبْ لَهُمْ مَّثَلًا رَّجُلَیْنِ جَعَلْنَا لِاَحَدِهِمَا جَنَّتَیْنِ مِنْ اَعْنَابٍ وَّحَفَفْنٰهُمَا بِنَخْلٍ وَّجَعَلْنَا بَیْنَهُمَا زَرْعًا ۟ؕ

ಅವರಿಗೆ ಒಂದು ಉದಾಹರಣೆಯನ್ನು ತಿಳಿಸಿಕೊಡಿ. ಇಬ್ಬರು ವ್ಯಕ್ತಿಗಳಿದ್ದರು. ಅವರಲ್ಲೊಬ್ಬನಿಗೆ ನಾವು ಎರಡು ದ್ರಾಕ್ಷಿ ತೋಟಗಳನ್ನು ನೀಡಿದ್ದೆವು. ಆ ಎರಡು ತೋಟಗಳನ್ನು ಖರ್ಜೂರ ಮರಗಳು ಸುತ್ತುವರಿಯುವಂತೆ ಮಾಡಿದ್ದೆವು. ಆ ತೋಟಗಳ ಮಧ್ಯೆ ಹೊಲವನ್ನು ಕೂಡ ಮಾಡಿಕೊಟ್ಟಿದ್ದೆವು. info
التفاسير:

external-link copy
33 : 18

كِلْتَا الْجَنَّتَیْنِ اٰتَتْ اُكُلَهَا وَلَمْ تَظْلِمْ مِّنْهُ شَیْـًٔا ۙ— وَّفَجَّرْنَا خِلٰلَهُمَا نَهَرًا ۟ۙ

ಆ ಎರಡು ತೋಟಗಳೂ ಅವುಗಳ ಫಲಗಳನ್ನು ನೀಡುತ್ತಿದ್ದವು. ಅದರಲ್ಲಿ ಅವು ಏನನ್ನೂ ಕಡಿಮೆ ಮಾಡಿರಲಿಲ್ಲ. ಅವುಗಳ ಮಧ್ಯೆ ತುಂಬಿ ಹರಿಯುವ ಒಂದು ಹೊಳೆಯನ್ನೂ ಮಾಡಿಕೊಟ್ಟಿದ್ದೆವು. info
التفاسير:

external-link copy
34 : 18

وَّكَانَ لَهٗ ثَمَرٌ ۚ— فَقَالَ لِصَاحِبِهٖ وَهُوَ یُحَاوِرُهٗۤ اَنَا اَكْثَرُ مِنْكَ مَالًا وَّاَعَزُّ نَفَرًا ۟

ಈ ಮಧ್ಯೆ, ಅವನ ಬಳಿ ಹಣ್ಣುಗಳಿದ್ದಾಗ, ಅವನು ತನ್ನ ಗೆಳೆಯನೊಡನೆ ಮಾತನಾಡುತ್ತಾ ಹೇಳಿದನು: “ನನಗೆ ನಿನಗಿಂತಲೂ ಹೆಚ್ಚು ಆಸ್ತಿಯಿದೆ. ಸಂತಾನದ ವಿಷಯದಲ್ಲೂ ನಾನು ನಿನಗಿಂತ ಪ್ರಬಲನಾಗಿದ್ದೇನೆ.” info
التفاسير: