ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
75 : 18

قَالَ اَلَمْ اَقُلْ لَّكَ اِنَّكَ لَنْ تَسْتَطِیْعَ مَعِیَ صَبْرًا ۟

ಆ ವ್ಯಕ್ತಿ ಹೇಳಿದರು: “ನಾನು ಹೇಳಿರಲಿಲ್ಲವೇ? ನನ್ನ ಜೊತೆ ತಾಳ್ಮೆಯಿಂದಿರಲು ನಿಮಗೆ ಸಾಧ್ಯವಿಲ್ಲವೆಂದು!” info
التفاسير:

external-link copy
76 : 18

قَالَ اِنْ سَاَلْتُكَ عَنْ شَیْ بَعْدَهَا فَلَا تُصٰحِبْنِیْ ۚ— قَدْ بَلَغْتَ مِنْ لَّدُنِّیْ عُذْرًا ۟

ಮೂಸಾ ಹೇಳಿದರು: “ಇನ್ನು ಮುಂದಕ್ಕೆ ನಾನು ನಿಮ್ಮಲ್ಲಿ ಯಾವುದಾದರೂ ವಿಷಯದ ಬಗ್ಗೆ ಪ್ರಶ್ನಿಸಿದರೆ, ನೀವು ನನ್ನನ್ನು ಬಿಟ್ಟು ಹೋಗಬಹುದು. ನನ್ನ ಕಡೆಯಿಂದ ನಿಮಗಂತೂ ಒಂದು ನೆವನ ಸಿಕ್ಕಿಬಿಟ್ಟಿದೆ.” info
التفاسير:

external-link copy
77 : 18

فَانْطَلَقَا ۫— حَتّٰۤی اِذَاۤ اَتَیَاۤ اَهْلَ قَرْیَةِ ١سْتَطْعَمَاۤ اَهْلَهَا فَاَبَوْا اَنْ یُّضَیِّفُوْهُمَا فَوَجَدَا فِیْهَا جِدَارًا یُّرِیْدُ اَنْ یَّنْقَضَّ فَاَقَامَهٗ ؕ— قَالَ لَوْ شِئْتَ لَتَّخَذْتَ عَلَیْهِ اَجْرًا ۟

ಅವರಿಬ್ಬರೂ ಹೊರಟರು. ಎಲ್ಲಿಯವರೆಗೆಂದರೆ, ಅವರು ಒಂದು ಊರನ್ನು ತಲುಪಿದಾಗ, ಅದರ ನಿವಾಸಿಗಳೊಡನೆ ಆಹಾರ ಕೇಳಿದರು. ಆದರೆ ಅವರು ಆತಿಥ್ಯ ನೀಡಲು ನಿರಾಕರಿಸಿದರು. ಆಗ ಅವರು ಅಲ್ಲಿ ಕುಸಿದು ಬೀಳುವಂತಾಗಿರುವ ಒಂದು ಗೋಡೆಯನ್ನು ಕಂಡರು. ತಕ್ಷಣ ಆ ವ್ಯಕ್ತಿ ಅದನ್ನು ದುರಸ್ತಿಗೊಳಿಸಿ ನಿಲ್ಲಿಸಿದರು. ಮೂಸಾ ಹೇಳಿದರು: “ನೀವು ಬಯಸಿದರೆ ಈ ಕೆಲಸ ಮಾಡಿದ್ದಕ್ಕಾಗಿ ಅವರಿಂದ ವೇತನ ಪಡೆಯಬಹುದಿತ್ತು.” info
التفاسير:

external-link copy
78 : 18

قَالَ هٰذَا فِرَاقُ بَیْنِیْ وَبَیْنِكَ ۚ— سَاُنَبِّئُكَ بِتَاْوِیْلِ مَا لَمْ تَسْتَطِعْ عَّلَیْهِ صَبْرًا ۟

ಆ ವ್ಯಕ್ತಿ ಹೇಳಿದರು: “ಇದು ನಮ್ಮ ನಡುವಿನ ಅಗಲಿಕೆಯಾಗಿದೆ. ಯಾವುದರ ಬಗ್ಗೆ ತಾಳ್ಮೆಯಿಂದಿರಲು ನಿಮಗೆ ಸಾಧ್ಯವಾಗಲಿಲ್ಲವೋ ಅದರ ಮರ್ಮವನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. info
التفاسير:

external-link copy
79 : 18

اَمَّا السَّفِیْنَةُ فَكَانَتْ لِمَسٰكِیْنَ یَعْمَلُوْنَ فِی الْبَحْرِ فَاَرَدْتُّ اَنْ اَعِیْبَهَا وَكَانَ وَرَآءَهُمْ مَّلِكٌ یَّاْخُذُ كُلَّ سَفِیْنَةٍ غَصْبًا ۟

ಆ ನಾವೆಯು ಕಡಲಲ್ಲಿ ಕೆಲಸ ಮಾಡುವ ಕೆಲವು ಬಡವರದ್ದಾಗಿತ್ತು. ಆದ್ದರಿಂದ ನಾನು ಅದನ್ನು ಹಾಳುಮಾಡಲು ಬಯಸಿದೆನು. ಏಕೆಂದರೆ, ಅವರ ಹಿಂಭಾಗದಲ್ಲಿ ಒಬ್ಬ ಅರಸನಿದ್ದನು ಮತ್ತು ಅವನು ಎಲ್ಲಾ (ಉತ್ತಮ) ನಾವೆಗಳನ್ನು ಬಲವಂತದಿಂದ ವಶಪಡಿಸಿಕೊಳ್ಳುತ್ತಿದ್ದನು. info
التفاسير:

external-link copy
80 : 18

وَاَمَّا الْغُلٰمُ فَكَانَ اَبَوٰهُ مُؤْمِنَیْنِ فَخَشِیْنَاۤ اَنْ یُّرْهِقَهُمَا طُغْیَانًا وَّكُفْرًا ۟ۚ

ಆ ಹುಡುಗನ ಮಾತಾಪಿತರು ಸತ್ಯವಿಶ್ವಾಸಿಗಳಾಗಿದ್ದರು. ಅವನು (ದೊಡ್ಡವನಾಗಿ) ಅವರನ್ನು ಅತಿರೇಕ ಮತ್ತು ಸತ್ಯ ನಿಷೇಧಕ್ಕೆ ನಿರ್ಬಂಧಿಸಬಹುದೆಂದು ನಮಗೆ ಭಯವಾಯಿತು. info
التفاسير:

external-link copy
81 : 18

فَاَرَدْنَاۤ اَنْ یُّبْدِلَهُمَا رَبُّهُمَا خَیْرًا مِّنْهُ زَكٰوةً وَّاَقْرَبَ رُحْمًا ۟

ಆದ್ದರಿಂದ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಅವನಿಗಿಂತಲೂ ಹೆಚ್ಚು ಪರಿಶುದ್ಧನಾದ ಮತ್ತು ಅವನಿಗಿಂತಲೂ ಹೆಚ್ಚು ಪ್ರೀತಿ-ವಾತ್ಸಲ್ಯವಿರುವ ಒಬ್ಬ ಮಗನನ್ನು ಬದಲಿಯಾಗಿ ನೀಡಲಿ ಎಂದು ನಾವು ಬಯಸಿದೆವು. info
التفاسير:

external-link copy
82 : 18

وَاَمَّا الْجِدَارُ فَكَانَ لِغُلٰمَیْنِ یَتِیْمَیْنِ فِی الْمَدِیْنَةِ وَكَانَ تَحْتَهٗ كَنْزٌ لَّهُمَا وَكَانَ اَبُوْهُمَا صَالِحًا ۚ— فَاَرَادَ رَبُّكَ اَنْ یَّبْلُغَاۤ اَشُدَّهُمَا وَیَسْتَخْرِجَا كَنْزَهُمَا ۖۗ— رَحْمَةً مِّنْ رَّبِّكَ ۚ— وَمَا فَعَلْتُهٗ عَنْ اَمْرِیْ ؕ— ذٰلِكَ تَاْوِیْلُ مَا لَمْ تَسْطِعْ عَّلَیْهِ صَبْرًا ۟ؕ۠

ಆ ಗೋಡೆಯು ಊರಿನ ಇಬ್ಬರು ಅನಾಥ ಬಾಲಕರಿಗೆ ಸೇರಿತ್ತು. ಅದರ ಅಡಿಯಲ್ಲಿ ಅವರಿಗೆ ಸಿಗಬೇಕಾದ ಒಂದು ನಿಧಿಯಿತ್ತು. ಅವರ ತಂದೆ ನೀತಿವಂತನಾಗಿದ್ದ. ಆದ್ದರಿಂದ ಅವರಿಬ್ಬರೂ ಪ್ರೌಢಾವಸ್ಥೆಯನ್ನು ತಲುಪಿದ ನಂತರ ತಮ್ಮ ನಿಧಿಯನ್ನು ಹೊರತೆಗೆಯಬೇಕೆಂದು ನಿಮ್ಮ ಪರಿಪಾಲಕ (ಅಲ್ಲಾಹು) ಬಯಸಿದ್ದನು. ಇದು ನಮ್ಮ ಪರಿಪಾಲಕನ (ಅಲ್ಲಾಹನ) ದಯೆಯಾಗಿದೆ. ನಾನು ಇವೆಲ್ಲವನ್ನೂ ನನ್ನ ಇಷ್ಟದಂತೆ ಮಾಡಿರಲಿಲ್ಲ. ಯಾವುದರ ಬಗ್ಗೆ ನಿಮಗೆ ತಾಳ್ಮೆಯಿಂದಿರಲು ಸಾಧ್ಯವಾಗಲಿಲ್ಲವೋ ಅದರ ಮರ್ಮವು ಇದೇ.” info
التفاسير:

external-link copy
83 : 18

وَیَسْـَٔلُوْنَكَ عَنْ ذِی الْقَرْنَیْنِ ؕ— قُلْ سَاَتْلُوْا عَلَیْكُمْ مِّنْهُ ذِكْرًا ۟ؕ

(ಪ್ರವಾದಿಯವರೇ) ಅವರು ನಿಮ್ಮಲ್ಲಿ ದುಲ್-ಕರ್ನೈನರ ಬಗ್ಗೆ ಕೇಳುತ್ತಾರೆ. ಹೇಳಿರಿ: “ಅವರ ಬಗ್ಗೆ ನಾನು ನಿಮಗೆ ಸ್ವಲ್ಪ ಓದಿ ಕೊಡುತ್ತೇನೆ.” info
التفاسير: