[1] ಒಮ್ಮೆ ಯಹೂದಿಗಳು ಪ್ರವಾದಿ ಮುಹಮ್ಮದರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಮೂರು ಪ್ರಶ್ನೆಗಳನ್ನು ಕೇಳಿದರು. ಆತ್ಮದ ನಿಜಸ್ಥಿತಿಯ ಬಗ್ಗೆ, ಗುಹಾವಾಸಿಗಳ ಬಗ್ಗೆ ಮತ್ತು ದುಲ್-ಕರ್ನೈನ್ ಬಗ್ಗೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೇವವಾಣಿಯ ಮೂಲಕ ಉತ್ತರ ಬರಬಹುದೆಂಬ ನಿರೀಕ್ಷೆಯಿಂದ ನಾಳೆ ಹೇಳುತ್ತೇನೆ ಎಂದರು. ಆದರೆ 15 ದಿನಗಳ ತನಕ ಉತ್ತರ ಬರಲಿಲ್ಲ. ಕೊನೆಗೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಈ ಅಧ್ಯಾಯದೊಂದಿಗೆ ಬಂದರು. ಭವಿಷ್ಯದಲ್ಲಿ ಮಾಡುವ ಯಾವುದೇ ವಿಷಯದ ಬಗ್ಗೆ ಹೇಳುವಾಗ ಇನ್ ಶಾ ಅಲ್ಲಾಹ್ (ಅಲ್ಲಾಹು ಇಚ್ಛಿಸಿದರೆ ಮಾಡುತ್ತೇನೆ) ಎಂಬ ಮಾತನ್ನು ಸೇರಿಸಬೇಕೆಂದು ಇಲ್ಲಿ ಆಜ್ಞಾಪಿಸಲಾಗಿದೆ. ಹೇಳಲು ಮರೆತರೆ ನೆನಪಾದಾಗ ಹೇಳಬೇಕು.