ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
16 : 18

وَاِذِ اعْتَزَلْتُمُوْهُمْ وَمَا یَعْبُدُوْنَ اِلَّا اللّٰهَ فَاْوٗۤا اِلَی الْكَهْفِ یَنْشُرْ لَكُمْ رَبُّكُمْ مِّنْ رَّحْمَتِهٖ وَیُهَیِّئْ لَكُمْ مِّنْ اَمْرِكُمْ مِّرْفَقًا ۟

(ಅವರು ಪರಸ್ಪರ ಹೇಳಿದರು): “ನೀವು ಅವರನ್ನು ಮತ್ತು ಅಲ್ಲಾಹನನ್ನು ಬಿಟ್ಟು ಅವರು ಆರಾಧಿಸುತ್ತಿರುವ ದೇವರುಗಳನ್ನು ತೊರೆದಿದ್ದೀರಿ. ಆದ್ದರಿಂದ ನೀವು ಆ ಗುಹೆಯಲ್ಲಿ ಆಶ್ರಯ ಪಡೆಯಿರಿ. ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ಅವನ ದಯೆಯನ್ನು ಹೇರಳವಾಗಿ ದಯಪಾಲಿಸುವನು ಮತ್ತು ನಿಮ್ಮ ವಿಷಯದಲ್ಲಿ ನಿಮಗೆ ಅನುಕೂಲತೆ ಮಾಡಿಕೊಡುವನು.” info
التفاسير:

external-link copy
17 : 18

وَتَرَی الشَّمْسَ اِذَا طَلَعَتْ تَّزٰوَرُ عَنْ كَهْفِهِمْ ذَاتَ الْیَمِیْنِ وَاِذَا غَرَبَتْ تَّقْرِضُهُمْ ذَاتَ الشِّمَالِ وَهُمْ فِیْ فَجْوَةٍ مِّنْهُ ؕ— ذٰلِكَ مِنْ اٰیٰتِ اللّٰهِ ؕ— مَنْ یَّهْدِ اللّٰهُ فَهُوَ الْمُهْتَدِ ۚ— وَمَنْ یُّضْلِلْ فَلَنْ تَجِدَ لَهٗ وَلِیًّا مُّرْشِدًا ۟۠

ಸೂರ್ಯ ಉದಯಿಸುವಾಗ ಅದು ಅವರ ಗುಹೆಯ ಬಲಭಾಗಕ್ಕೆ ಚಲಿಸುವುದನ್ನು ಮತ್ತು ಸೂರ್ಯ ಅಸ್ತಮಿಸುವಾಗ ಅದು ಅವರನ್ನು ದಾಟಿ ಎಡಭಾಗಕ್ಕೆ ಚಲಿಸುವುದನ್ನು ನೀವು ಕಾಣುವಿರಿ.[1] ಅವರು ಆ ಗುಹೆಯ ವಿಸ್ತಾರವಾದ ಭಾಗದಲ್ಲಿದ್ದಾರೆ. ಅದು ಅಲ್ಲಾಹನ ದೃಷ್ಟಾಂತಗಳಲ್ಲಿ ಒಂದಾಗಿದೆ. ಅಲ್ಲಾಹು ಯಾರಿಗೆ ಸನ್ಮಾರ್ಗವನ್ನು ತೋರಿಸುತ್ತಾನೋ ಅವನು ಸನ್ಮಾರ್ಗವನ್ನು ಪಡೆಯುತ್ತಾನೆ. ಅವನು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಸರಿಯಾದ ಮಾರ್ಗವನ್ನು ತೋರಿಸಿಕೊಡುವ ಯಾವುದೇ ರಕ್ಷಕನನ್ನು ನೀವು ಎಂದಿಗೂ ಕಾಣಲಾರಿರಿ. info

[1] ಅಂದರೆ ಇಡೀ ದಿನ ಬಿಸಿಲು ಆ ಗುಹೆಯೊಳಗೆ ಬೀಳದಂತೆ ಅದನ್ನು ವಿನ್ಯಾಸಗೊಳಿಸಲಾಗಿತ್ತು.

التفاسير:

external-link copy
18 : 18

وَتَحْسَبُهُمْ اَیْقَاظًا وَّهُمْ رُقُوْدٌ ۖۗ— وَّنُقَلِّبُهُمْ ذَاتَ الْیَمِیْنِ وَذَاتَ الشِّمَالِ ۖۗ— وَكَلْبُهُمْ بَاسِطٌ ذِرَاعَیْهِ بِالْوَصِیْدِ ؕ— لَوِ اطَّلَعْتَ عَلَیْهِمْ لَوَلَّیْتَ مِنْهُمْ فِرَارًا وَّلَمُلِئْتَ مِنْهُمْ رُعْبًا ۟

ಅವರು ಎಚ್ಚರದಲ್ಲಿದ್ದಾರೆಂದು ನೀವು ಭಾವಿಸಬಹುದು. ಆದರೆ ಅವರು ನಿದ್ರೆಯಲ್ಲಿದ್ದಾರೆ. ನಾವು ಅವರನ್ನು ಬಲಭಾಗಕ್ಕೂ ಎಡಭಾಗಕ್ಕೂ ಹೊರಳುವಂತೆ ಮಾಡುತ್ತೇವೆ. ಅವರ ನಾಯಿ ಗುಹೆಯ ಬಾಗಿಲಲ್ಲಿ ತನ್ನ ಎರಡು ಕೈಗಳನ್ನು ಚಾಚಿಕೊಂಡಿದೆ. ನೀವೇನಾದರೂ ಅವರ ಕಡೆಗೆ ಇಣುಕಿದರೆ, ಖಂಡಿತ ಬೆನ್ನು ತಿರುಗಿಸಿ ಓಡುವಿರಿ ಮತ್ತು ಆ ದೃಶ್ಯವನ್ನು ಕಂಡು ನೀವು ಭಯವಿಹ್ವಲರಾಗಿ ಬಿಡುವಿರಿ. info
التفاسير:

external-link copy
19 : 18

وَكَذٰلِكَ بَعَثْنٰهُمْ لِیَتَسَآءَلُوْا بَیْنَهُمْ ؕ— قَالَ قَآىِٕلٌ مِّنْهُمْ كَمْ لَبِثْتُمْ ؕ— قَالُوْا لَبِثْنَا یَوْمًا اَوْ بَعْضَ یَوْمٍ ؕ— قَالُوْا رَبُّكُمْ اَعْلَمُ بِمَا لَبِثْتُمْ ؕ— فَابْعَثُوْۤا اَحَدَكُمْ بِوَرِقِكُمْ هٰذِهٖۤ اِلَی الْمَدِیْنَةِ فَلْیَنْظُرْ اَیُّهَاۤ اَزْكٰی طَعَامًا فَلْیَاْتِكُمْ بِرِزْقٍ مِّنْهُ  وَلَا یُشْعِرَنَّ بِكُمْ اَحَدًا ۟

ಈ ರೀತಿ ಅವರು ಪರಸ್ಪರ ಕೇಳುವುದಕ್ಕಾಗಿ ನಾವು ಅವರನ್ನು ಎಬ್ಬಿಸಿದೆವು. ಅವರಲ್ಲೊಬ್ಬರು ಕೇಳಿದರು: “ನೀವು ಎಷ್ಟು ಕಾಲ ಗುಹೆಯಲ್ಲಿದ್ದಿರಿ?” ಇತರರು ಹೇಳಿದರು: “ನಾವು ಒಂದು ದಿನ ಅಥವಾ ದಿನದ ಕೆಲವು ತಾಸುಗಳಷ್ಟು ಕಾಲ ಗುಹೆಯಲ್ಲಿದ್ದೆವು.” ಅವರು ಹೇಳಿದರು: “ನೀವು ಎಷ್ಟು ಕಾಲ ಗುಹೆಯಲ್ಲಿದ್ದಿರಿ ಎಂಬುದನ್ನು ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ನೀವು ನಿಮ್ಮಲ್ಲೊಬ್ಬರನ್ನು ಈ ಬೆಳ್ಳಿ ನಾಣ್ಯದೊಂದಿಗೆ ನಗರಕ್ಕೆ ಕಳುಹಿಸಿ. ಅಲ್ಲಿ ಯಾರ ಬಳಿ ಶುದ್ಧ ಆಹಾರವಿದೆಯೆಂದು ನೋಡಿ ಅವನು ನಿಮಗೆ ಆಹಾರವನ್ನು ತರಲಿ. ಅವನು ಅತ್ಯಂತ ಜಾಗರೂಕನಾಗಿರಲಿ ಮತ್ತು ನಿಮ್ಮ ಬಗ್ಗೆ ಯಾರಿಗೂ ಸುಳಿವು ನೀಡದಿರಲಿ. info
التفاسير:

external-link copy
20 : 18

اِنَّهُمْ اِنْ یَّظْهَرُوْا عَلَیْكُمْ یَرْجُمُوْكُمْ اَوْ یُعِیْدُوْكُمْ فِیْ مِلَّتِهِمْ وَلَنْ تُفْلِحُوْۤا اِذًا اَبَدًا ۟

ಅವರಿಗೆ ನಿಮ್ಮ ಬಗ್ಗೆ ಮಾಹಿತಿ ಸಿಕ್ಕಿದರೆ, ಅವರು ನಿಮ್ಮನ್ನು ಕಲ್ಲೆಸೆದು ಕೊಲ್ಲುವರು; ಅಥವಾ ನಿಮ್ಮನ್ನು ಬಲವಂತವಾಗಿ ಅವರ ಧರ್ಮಕ್ಕೆ ಸೇರಿಸುವರು. ಹಾಗೇನಾದರೂ ಆದರೆ ನೀವೆಂದಿಗೂ ಯಶಸ್ವಿಯಾಗಲಾರಿರಿ.” info
التفاسير: