ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

ಅಲ್- ಕಹ್ಫ್

external-link copy
1 : 18

اَلْحَمْدُ لِلّٰهِ الَّذِیْۤ اَنْزَلَ عَلٰی عَبْدِهِ الْكِتٰبَ وَلَمْ یَجْعَلْ لَّهٗ عِوَجًا ۟ؕٚ

ತನ್ನ ದಾಸನ ಮೇಲೆ ಕುರ್‌ಆನ್ ಅವತೀರ್ಣಗೊಳಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅವನು ಅದರಲ್ಲಿ ಯಾವುದೇ ಕುಂದುಕೊರತೆಗಳನ್ನು ಮಾಡಿಲ್ಲ. info
التفاسير:

external-link copy
2 : 18

قَیِّمًا لِّیُنْذِرَ بَاْسًا شَدِیْدًا مِّنْ لَّدُنْهُ وَیُبَشِّرَ الْمُؤْمِنِیْنَ الَّذِیْنَ یَعْمَلُوْنَ الصّٰلِحٰتِ اَنَّ لَهُمْ اَجْرًا حَسَنًا ۟ۙ

ಅವನು ಅದನ್ನು ಸರಿಯಾದ ರೀತಿಯಲ್ಲಿಟ್ಟಿದ್ದಾನೆ. ಅವನ ಕಡೆಯ ಕಠೋರ ಶಿಕ್ಷೆಯ ಬಗ್ಗೆ ಎಚ್ಚರಿಕೆ ನೀಡಲು ಮತ್ತು ಸತ್ಕರ್ಮವೆಸಗುವ ಸತ್ಯವಿಶ್ವಾಸಿಗಳಿಗೆ ಅತ್ಯುತ್ತಮ ಪ್ರತಿಫಲವಿದೆಯೆಂಬ ಸುವಾರ್ತೆಯನ್ನು ತಿಳಿಸಲು. info
التفاسير:

external-link copy
3 : 18

مَّاكِثِیْنَ فِیْهِ اَبَدًا ۟ۙ

ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. info
التفاسير:

external-link copy
4 : 18

وَّیُنْذِرَ الَّذِیْنَ قَالُوا اتَّخَذَ اللّٰهُ وَلَدًا ۟ۗ

ಮತ್ತು “ಅಲ್ಲಾಹನಿಗೆ ಮಕ್ಕಳಿದ್ದಾರೆ” ಎಂದು ಹೇಳುವವರಿಗೆ ಮುನ್ನೆಚ್ಚರಿಕೆ ನೀಡಲು. info
التفاسير: