Traducción de los significados del Sagrado Corán - Traducción al Canarés- Hamza Batur

Número de página:close

external-link copy
131 : 6

ذٰلِكَ اَنْ لَّمْ یَكُنْ رَّبُّكَ مُهْلِكَ الْقُرٰی بِظُلْمٍ وَّاَهْلُهَا غٰفِلُوْنَ ۟

ಅದು (ಸಂದೇಶವಾಹಕರನ್ನು ಕಳುಹಿಸಿರುವುದು) ನಿಮ್ಮ ಪರಿಪಾಲಕನು (ಅಲ್ಲಾಹು) ಊರುಗಳನ್ನು—ಅವುಗಳ ನಿವಾಸಿಗಳು (ಸತ್ಯದ ಬಗ್ಗೆ) ಅಜ್ಞರಾಗಿರುವಾಗ ಮಾಡಿದ ಅಕ್ರಮದ ನಿಮಿತ್ತ ನಾಶ ಮಾಡುವುದಿಲ್ಲ ಎಂಬ ಕಾರಣದಿಂದಾಗಿದೆ.[1] info

[1] ಜೀವನದಲ್ಲಿ ಒಮ್ಮೆಯೂ ಸತ್ಯವನ್ನು ತಿಳಿಯುವ ಅವಕಾಶ ಸಿಗದವರನ್ನು ಅಲ್ಲಾಹು ಶಿಕ್ಷಿಸುವುದಿಲ್ಲವೆಂದು ಇದರಿಂದ ಅರ್ಥಮಾಡಿಕೊಳ್ಳಬಹುದು.

التفاسير:

external-link copy
132 : 6

وَلِكُلٍّ دَرَجٰتٌ مِّمَّا عَمِلُوْا ؕ— وَمَا رَبُّكَ بِغَافِلٍ عَمَّا یَعْمَلُوْنَ ۟

ಪ್ರತಿಯೊಬ್ಬರಿಗೂ ಅವರು ಮಾಡಿದ ಕರ್ಮಗಳಿಗೆ ಅನುಗುಣವಾಗಿ ಅನೇಕ ಪದವಿಗಳಿವೆ. ಅವರು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನೇನಲ್ಲ. info
التفاسير:

external-link copy
133 : 6

وَرَبُّكَ الْغَنِیُّ ذُو الرَّحْمَةِ ؕ— اِنْ یَّشَاْ یُذْهِبْكُمْ وَیَسْتَخْلِفْ مِنْ بَعْدِكُمْ مَّا یَشَآءُ كَمَاۤ اَنْشَاَكُمْ مِّنْ ذُرِّیَّةِ قَوْمٍ اٰخَرِیْنَ ۟ؕ

ನಿಮ್ಮ ಪರಿಪಾಲಕನು (ಅಲ್ಲಾಹು) ನಿರಪೇಕ್ಷನು ಮತ್ತು ದಯಾಳುವಾಗಿದ್ದಾನೆ. ಅವನು ಇಚ್ಛಿಸಿದರೆ ನಿಮ್ಮನ್ನು ನಿವಾರಿಸಿ, ನಿಮ್ಮ ಸ್ಥಾನದಲ್ಲಿ ಅವನು ಇಚ್ಛಿಸುವ ಬೇರೆ ಜನರನ್ನು ಉತ್ತರಾಧಿಕಾರಿಗಳಾಗಿ ಮಾಡುವನು. ನಿಮ್ಮನ್ನು ಬೇರೆ ಜನರ ವಂಶಸ್ಥರನ್ನಾಗಿ ಮಾಡಿದಂತೆ. info
التفاسير:

external-link copy
134 : 6

اِنَّ مَا تُوْعَدُوْنَ لَاٰتٍ ۙ— وَّمَاۤ اَنْتُمْ بِمُعْجِزِیْنَ ۟

ನಿಶ್ಚಯವಾಗಿಯೂ ನಿಮಗೆ ಎಚ್ಚರಿಕೆ ನೀಡಲಾಗುವ ಸಂಗತಿಯು ಬಂದೇ ಬರುತ್ತದೆ. ನಿಮಗೆ (ಅಲ್ಲಾಹನನ್ನು) ಸೋಲಿಸಲು ಸಾಧ್ಯವಿಲ್ಲ. info
التفاسير:

external-link copy
135 : 6

قُلْ یٰقَوْمِ اعْمَلُوْا عَلٰی مَكَانَتِكُمْ اِنِّیْ عَامِلٌ ۚ— فَسَوْفَ تَعْلَمُوْنَ ۙ— مَنْ تَكُوْنُ لَهٗ عَاقِبَةُ الدَّارِ ؕ— اِنَّهٗ لَا یُفْلِحُ الظّٰلِمُوْنَ ۟

ಹೇಳಿರಿ: “ಓ ನನ್ನ ಜನರೇ! ನೀವು ನಿಮ್ಮ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿರಿ. ನಾನೂ ಕಾರ್ಯ ನಿರ್ವಹಿಸುತ್ತೇನೆ. ಇಹಲೋಕದ ಅಂತಿಮ ವಿಜಯವು ಯಾರಿಗೆ ಎಂದು ನೀವು ಸದ್ಯವೇ ತಿಳಿಯುವಿರಿ. ನಿಶ್ಚಯವಾಗಿಯೂ ಅಕ್ರಮಿಗಳು ಯಶಸ್ವಿಯಾಗುವುದಿಲ್ಲ.” info
التفاسير:

external-link copy
136 : 6

وَجَعَلُوْا لِلّٰهِ مِمَّا ذَرَاَ مِنَ الْحَرْثِ وَالْاَنْعَامِ نَصِیْبًا فَقَالُوْا هٰذَا لِلّٰهِ بِزَعْمِهِمْ وَهٰذَا لِشُرَكَآىِٕنَا ۚ— فَمَا كَانَ لِشُرَكَآىِٕهِمْ فَلَا یَصِلُ اِلَی اللّٰهِ ۚ— وَمَا كَانَ لِلّٰهِ فَهُوَ یَصِلُ اِلٰی شُرَكَآىِٕهِمْ ؕ— سَآءَ مَا یَحْكُمُوْنَ ۟

ಅಲ್ಲಾಹು ಸೃಷ್ಟಿಸಿದ ಕೃಷಿ ಮತ್ತು ಜಾನುವಾರುಗಳಿಂದ ಅವರು ಅವನಿಗೆ ಒಂದು ಪಾಲನ್ನು ನಿಶ್ಚಯಿಸಿದರು. ನಂತರ ತಮ್ಮ ದಾವೆಗೆ ಅನುಗುಣವಾಗಿ, “ಇದು ಅಲ್ಲಾಹನಿಗೆ ಮತ್ತು ಇದು ನಮ್ಮ ದೇವರುಗಳಿಗೆ” ಎಂದು ಅವರು ಹೇಳಿದರು. ಅವರ ದೇವರುಗಳಿಗೆ ಮೀಸಲಿಟ್ಟಿರುವುದು ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅಲ್ಲಾಹನಿಗೆ ಮೀಸಲಿಟ್ಟಿರುವುದು ಅವರ ದೇವರುಗಳಿಗೆ ತಲುಪುತ್ತದೆ. ಅವರು ನೀಡುವ ತೀರ್ಪು ಬಹಳ ನಿಕೃಷ್ಟವಾಗಿದೆ.[1] info

[1] ಅವರು ತಮ್ಮ ಕೃಷಿ ಮತ್ತು ಜಾನುವಾರುಗಳಲ್ಲಿ ಒಂದಂಶವನ್ನು ಅಲ್ಲಾಹನಿಗೆ ಮೀಸಲಿಡುತ್ತಿದ್ದರು. ಅಂದರೆ ಅದನ್ನು ಅತಿಥಿಗಳಿಗೆ, ಬಡವರಿಗೆ, ಪ್ರಯಾಣಿಕರಿಗೆ ಖರ್ಚು ಮಾಡುತ್ತಿದ್ದರು. ಇನ್ನೊಂದು ಅಂಶವನ್ನು ಅವರು ತಮ್ಮ ವಿಗ್ರಹಗಳಿಗೆ ಮೀಸಲಿಡುತ್ತಿದ್ದರು. ಇದನ್ನು ಅವರು ವಿಗ್ರಹಗಳಿಗೆ ಅರ್ಪಿಸುತ್ತಿದ್ದರು. ಕೆಲವೊಮ್ಮೆ ಅವರು ಅಲ್ಲಾಹನಿಗೆ ಮೀಸಲಿಟ್ಟದ್ದನ್ನು ವಿಗ್ರಹಗಳಿಗೆ ಅರ್ಪಿಸುತ್ತಿದ್ದರು. ಆದರೆ ವಿಗ್ರಹಗಳಿಗೆ ಮೀಸಲಿಟ್ಟದ್ದನ್ನು ಅಲ್ಲಾಹನಿಗೆ, ಅಂದರೆ ಅತಿಥಿಗಳಿಗೆ, ಬಡವರಿಗೆ ನೀಡುತ್ತಿರಲಿಲ್ಲ.

التفاسير:

external-link copy
137 : 6

وَكَذٰلِكَ زَیَّنَ لِكَثِیْرٍ مِّنَ الْمُشْرِكِیْنَ قَتْلَ اَوْلَادِهِمْ شُرَكَآؤُهُمْ لِیُرْدُوْهُمْ وَلِیَلْبِسُوْا عَلَیْهِمْ دِیْنَهُمْ ؕ— وَلَوْ شَآءَ اللّٰهُ مَا فَعَلُوْهُ فَذَرْهُمْ وَمَا یَفْتَرُوْنَ ۟

ಹೀಗೆ ಬಹುದೇವಾರಾಧಕರಲ್ಲಿ ಹೆಚ್ಚಿನವರಿಗೂ ಅವರ ಮಕ್ಕಳನ್ನು ಕೊಲ್ಲುವುದನ್ನು ಅವರ ದೇವರುಗಳು ಅಲಂಕರಿಸಿಕೊಟ್ಟಿದ್ದಾರೆ.[1] ಅವರನ್ನು ನಾಶ ಮಾಡುವುದಕ್ಕಾಗಿ ಮತ್ತು ಅವರ ಧರ್ಮವನ್ನು ಅವರಿಗೆ ಗೊಂದಲಗೊಳಿಸುವುದಕ್ಕಾಗಿ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು ಅದನ್ನು ಮಾಡುತ್ತಿರಲಿಲ್ಲ. ಆದ್ದರಿಂದ ಅವರು ಆರೋಪಿಸುವ ವಿಷಯಗಳೊಂದಿಗೆ ಅವರನ್ನು ಬಿಟ್ಟುಬಿಡಿ. info

[1] ಅರೇಬಿಯಾದಲ್ಲಿ ಶಿಶುಹತ್ಯೆ ಸಾಮಾನ್ಯವಾಗಿತ್ತು. ಅವರು ಮಕ್ಕಳನ್ನು ವಿಗ್ರಹಗಳಿಗೆ ಬಲಿ ನೀಡುತ್ತಿದ್ದರು. ಬಡತನದ ಭಯದಿಂದ ಮಕ್ಕಳನ್ನು ಕೊಲ್ಲುತ್ತಿದ್ದರು. ಹೆಣ್ಣು ಮಗು ಹುಟ್ಟಿದರೆ ಅಪಮಾನದಿಂದ ಅದನ್ನು ಜೀವಂತ ದಫನ ಮಾಡುತ್ತಿದ್ದರು. ಇವುಗಳನ್ನು ಅವರು ತಪ್ಪೆಂದು ಭಾವಿಸುತ್ತಿರಲಿಲ್ಲ.

التفاسير: