Traducción de los significados del Sagrado Corán - Traducción al Canarés- Hamza Batur

Número de página:close

external-link copy
28 : 6

بَلْ بَدَا لَهُمْ مَّا كَانُوْا یُخْفُوْنَ مِنْ قَبْلُ ؕ— وَلَوْ رُدُّوْا لَعَادُوْا لِمَا نُهُوْا عَنْهُ وَاِنَّهُمْ لَكٰذِبُوْنَ ۟

ಅಲ್ಲ, ವಾಸ್ತವವಾಗಿ ಅವರು ಇದಕ್ಕೆ ಮೊದಲು ಏನನ್ನು ಮುಚ್ಚಿಟ್ಟಿದ್ದರೋ ಅದು ಈಗ ಅವರಿಗೆ ಬಹಿರಂಗವಾಗಿದೆ. ಅವರನ್ನು ಪುನಃ ಭೂಲೋಕಕ್ಕೆ ಕಳುಹಿಸಲಾದರೂ, ಅವರಿಗೆ ವಿರೋಧಿಸಲಾದ ವಿಷಯಗಳನ್ನೇ ಅವರು ಪುನರಾವರ್ತಿಸುವರು. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುವವರಾಗಿದ್ದಾರೆ. info
التفاسير:

external-link copy
29 : 6

وَقَالُوْۤا اِنْ هِیَ اِلَّا حَیَاتُنَا الدُّنْیَا وَمَا نَحْنُ بِمَبْعُوْثِیْنَ ۟

ಅವರು ಹೇಳಿದರು: “ನಮ್ಮ ಈ ಭೂಲೋಕ ಜೀವನದ ಹೊರತು ಬೇರೇನೂ ಇಲ್ಲ. ನಮಗೆ ಪುನಃ ಜೀವ ನೀಡಿ ಎಬ್ಬಿಸಲಾಗುವುದೂ ಇಲ್ಲ.” info
التفاسير:

external-link copy
30 : 6

وَلَوْ تَرٰۤی اِذْ وُقِفُوْا عَلٰی رَبِّهِمْ ؕ— قَالَ اَلَیْسَ هٰذَا بِالْحَقِّ ؕ— قَالُوْا بَلٰی وَرَبِّنَا ؕ— قَالَ فَذُوْقُوا الْعَذَابَ بِمَا كُنْتُمْ تَكْفُرُوْنَ ۟۠

ಅವರನ್ನು ಅವರ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲಿಸಲಾದ ದೃಶ್ಯವನ್ನು ನೀವು ನೋಡಿದ್ದರೆ! ಅವನು ಕೇಳುವನು: “ಇದು ಸತ್ಯವಲ್ಲವೇ?” ಅವರು ಉತ್ತರಿಸುವರು: “ಹೌದು! ನಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ.” ಅವನು ಹೇಳುವನು: “ಹಾಗಾದರೆ ನೀವು ಏನನ್ನು ನಿಷೇಧಿಸಿದಿರೋ ಅದರ ಶಿಕ್ಷೆಯನ್ನು ಅನುಭವಿಸಿರಿ.” info
التفاسير:

external-link copy
31 : 6

قَدْ خَسِرَ الَّذِیْنَ كَذَّبُوْا بِلِقَآءِ اللّٰهِ ؕ— حَتّٰۤی اِذَا جَآءَتْهُمُ السَّاعَةُ بَغْتَةً قَالُوْا یٰحَسْرَتَنَا عَلٰی مَا فَرَّطْنَا فِیْهَا ۙ— وَهُمْ یَحْمِلُوْنَ اَوْزَارَهُمْ عَلٰی ظُهُوْرِهِمْ ؕ— اَلَا سَآءَ مَا یَزِرُوْنَ ۟

ಅಲ್ಲಾಹನ ಭೇಟಿಯನ್ನು ನಿಷೇಧಿಸಿದವರು ನಿಶ್ಚಯವಾಗಿಯೂ ನಷ್ಟ ಹೊಂದಿದರು. ಎಲ್ಲಿಯವರೆಗೆಂದರೆ, ಹಠಾತ್ತನೆ ಅಂತಿಮದಿನವು ಬರುವಾಗ, ಅವರು ಹೇಳುವರು: “ನಾವು ಇದರ (ಅಂತಿಮದಿನ) ಬಗ್ಗೆ ನಿರ್ಲಕ್ಷ್ಯ ಮಾಡಿದ ಕಾರಣ ಅಯ್ಯೋ! ನಮ್ಮ ದುರ್ಗತಿಯೇ!” ಅವರು ಅವರ ಬೆನ್ನುಗಳ ಮೇಲೆ ಪಾಪಗಳ ಭಾರವನ್ನು ಹೊರುತ್ತಿರುವರು. ಅವರು ಹೊರುವ ಭಾರವು ಬಹಳ ನಿಕೃಷ್ಟವಾಗಿದೆ. info
التفاسير:

external-link copy
32 : 6

وَمَا الْحَیٰوةُ الدُّنْیَاۤ اِلَّا لَعِبٌ وَّلَهْوٌ ؕ— وَلَلدَّارُ الْاٰخِرَةُ خَیْرٌ لِّلَّذِیْنَ یَتَّقُوْنَ ؕ— اَفَلَا تَعْقِلُوْنَ ۟

ಇಹಲೋಕ ಜೀವನವು ಆಟ ಮತ್ತು ಮನೋರಂಜನೆಯಲ್ಲದೆ ಇನ್ನೇನೂ ಅಲ್ಲ. ದೇವಭಯವುಳ್ಳವರಿಗೆ ಪರಲೋಕ ಜೀವನವೇ ಉತ್ತಮವಾಗಿದೆ. ನೀವು ಆಲೋಚಿಸುವುದಿಲ್ಲವೇ? info
التفاسير:

external-link copy
33 : 6

قَدْ نَعْلَمُ اِنَّهٗ لَیَحْزُنُكَ الَّذِیْ یَقُوْلُوْنَ فَاِنَّهُمْ لَا یُكَذِّبُوْنَكَ وَلٰكِنَّ الظّٰلِمِیْنَ بِاٰیٰتِ اللّٰهِ یَجْحَدُوْنَ ۟

ಅವರು ಹೇಳುವ ಮಾತುಗಳಿಂದ ನಿಮಗೆ ಬೇಸರವಾಗುತ್ತಿದೆಯೆಂದು ನಮಗೆ ಖಂಡಿತ ತಿಳಿದಿದೆ. ಆದರೆ ಅವರು ನಿಮ್ಮನ್ನು ನಿಷೇಧಿಸುವುದಿಲ್ಲ. ಆದರೆ ಆ ಅತಿರೇಕಿಗಳು ಅಲ್ಲಾಹನ ವಚನಗಳನ್ನು ನಿಷೇಧಿಸುತ್ತಾರೆ. info
التفاسير:

external-link copy
34 : 6

وَلَقَدْ كُذِّبَتْ رُسُلٌ مِّنْ قَبْلِكَ فَصَبَرُوْا عَلٰی مَا كُذِّبُوْا وَاُوْذُوْا حَتّٰۤی اَتٰىهُمْ نَصْرُنَا ۚ— وَلَا مُبَدِّلَ لِكَلِمٰتِ اللّٰهِ ۚ— وَلَقَدْ جَآءَكَ مِنْ نَّبَاۡ الْمُرْسَلِیْنَ ۟

ನಿಮಗಿಂತ ಮೊದಲೂ ಸಂದೇಶವಾಹಕರು ನಿಷೇಧಿಸಲ್ಪಟ್ಟಿದ್ದಾರೆ. ಜನರು ತಮ್ಮನ್ನು ನಿಷೇಧಿಸುವುದನ್ನು ಮತ್ತು ತಮಗೆ ತೊಂದರೆ ನೀಡುವುದನ್ನು ಅವರು ತಾಳಿಕೊಳ್ಳುತ್ತಿದ್ದರು—ನಮ್ಮ ಸಹಾಯವು ಬರುವವರೆಗೆ. ಅಲ್ಲಾಹನ ವಚನಗಳನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಸಂದೇಶವಾಹಕರುಗಳ ಕೆಲವು ಸಮಾಚಾರಗಳು ನಿಮಗೆ ಈಗಾಗಲೇ ತಲುಪಿವೆ. info
التفاسير:

external-link copy
35 : 6

وَاِنْ كَانَ كَبُرَ عَلَیْكَ اِعْرَاضُهُمْ فَاِنِ اسْتَطَعْتَ اَنْ تَبْتَغِیَ نَفَقًا فِی الْاَرْضِ اَوْ سُلَّمًا فِی السَّمَآءِ فَتَاْتِیَهُمْ بِاٰیَةٍ ؕ— وَلَوْ شَآءَ اللّٰهُ لَجَمَعَهُمْ عَلَی الْهُدٰی فَلَا تَكُوْنَنَّ مِنَ الْجٰهِلِیْنَ ۟

ಅವರು ನಿಮ್ಮನ್ನು ತಿರಸ್ಕರಿಸಿ ವಿಮುಖರಾಗುವುದನ್ನು ಸಹಿಸಿಕೊಳ್ಳಲು ನಿಮಗೆ ಕಷ್ಟವಾಗುವುದಾದರೆ, ಭೂಮಿಯೊಳಗಿಳಿಯಲು ಒಂದು ಸುರಂಗವನ್ನು, ಅಥವಾ ಆಕಾಶಕ್ಕೇರಲು ಒಂದು ಏಣಿಯನ್ನು ಹುಡುಕಿ, ನಂತರ ಅವರಿಗೊಂದು ದೃಷ್ಟಾಂತವನ್ನು ತಂದುಕೊಡಲು ಸಾಧ್ಯವಾಗುವುದಾದರೆ ತಂದು ಕೊಡಿ. ಅಲ್ಲಾಹು ಇಚ್ಛಿಸಿದರೆ ಅವರೆಲ್ಲರನ್ನೂ ಸನ್ಮಾರ್ಗದಲ್ಲಿ ಒಟ್ಟುಗೂಡಿಸುತ್ತಿದ್ದನು. ಆದ್ದರಿಂದ ನೀವು ಅವಿವೇಕಿಗಳಲ್ಲಿ ಸೇರಬೇಡಿ. info
التفاسير: