Traducción de los significados del Sagrado Corán - Traducción al Canarés- Hamza Batur

Número de página:close

external-link copy
119 : 6

وَمَا لَكُمْ اَلَّا تَاْكُلُوْا مِمَّا ذُكِرَ اسْمُ اللّٰهِ عَلَیْهِ وَقَدْ فَصَّلَ لَكُمْ مَّا حَرَّمَ عَلَیْكُمْ اِلَّا مَا اضْطُرِرْتُمْ اِلَیْهِ ؕ— وَاِنَّ كَثِیْرًا لَّیُضِلُّوْنَ بِاَهْوَآىِٕهِمْ بِغَیْرِ عِلْمٍ ؕ— اِنَّ رَبَّكَ هُوَ اَعْلَمُ بِالْمُعْتَدِیْنَ ۟

ಅಲ್ಲಾಹನ ಹೆಸರನ್ನು ಉಚ್ಛರಿಸಿ (ಕೊಯ್ಯ) ಲಾದ ಪ್ರಾಣಿಯನ್ನು ತಿನ್ನದಿರಲು ನಿಮಗೇನಾಗಿದೆ? ನಿಮಗೆ ನಿಷೇಧಿಸಲಾದ ವಸ್ತುಗಳನ್ನು ಅವನು ಈಗಾಗಲೇ ನಿಮಗೆ ವಿವರಿಸಿಕೊಟ್ಟಿದ್ದಾನೆ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಅದು ಕೂಡ ನಿಮಗೆ ಅನುಮತಿಸಲಾಗಿದೆ. ಹೆಚ್ಚಿನ ಜನರು ಯಾವುದೇ ಜ್ಞಾನವಿಲ್ಲದೆ ತಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸುತ್ತಾ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ನಿಶ್ಚಯವಾಗಿಯೂ ಅತಿರೇಕಿಗಳ ಬಗ್ಗೆ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. info
التفاسير:

external-link copy
120 : 6

وَذَرُوْا ظَاهِرَ الْاِثْمِ وَبَاطِنَهٗ ؕ— اِنَّ الَّذِیْنَ یَكْسِبُوْنَ الْاِثْمَ سَیُجْزَوْنَ بِمَا كَانُوْا یَقْتَرِفُوْنَ ۟

ಬಹಿರಂಗವಾಗಿ ಮಾಡುವ ಪಾಪಗಳನ್ನು ಮತ್ತು ರಹಸ್ಯವಾಗಿ ಮಾಡುವ ಪಾಪಗಳನ್ನು ಬಿಟ್ಟುಬಿಡಿ. ನಿಶ್ಚಯವಾಗಿಯೂ ಪಾಪ ಮಾಡುವವರು ಯಾರೋ—ಅವರು ಮಾಡಿದ ಪಾಪಕ್ಕೆ ತಕ್ಕ ಪ್ರತಿಫಲವನ್ನು ನೀಡಲಾಗುವುದು. info
التفاسير:

external-link copy
121 : 6

وَلَا تَاْكُلُوْا مِمَّا لَمْ یُذْكَرِ اسْمُ اللّٰهِ عَلَیْهِ وَاِنَّهٗ لَفِسْقٌ ؕ— وَاِنَّ الشَّیٰطِیْنَ لَیُوْحُوْنَ اِلٰۤی اَوْلِیٰٓـِٕهِمْ لِیُجَادِلُوْكُمْ ۚ— وَاِنْ اَطَعْتُمُوْهُمْ اِنَّكُمْ لَمُشْرِكُوْنَ ۟۠

ಅಲ್ಲಾಹನ ಹೆಸರನ್ನು ಉಚ್ಛರಿಸದಿರುವ ಪ್ರಾಣಿಗಳನ್ನು ತಿನ್ನಬೇಡಿ. ನಿಶ್ಚಯವಾಗಿಯೂ ಅದು ಅವಿಧೇಯತೆಯಾಗಿದೆ. ನಿಮ್ಮೊಂದಿಗೆ ತರ್ಕಿಸಲು ನಿಶ್ಚಯವಾಗಿಯೂ ಶೈತಾನರು ತಮ್ಮ ಮಿತ್ರರಿಗೆ ದುರ್ಬೋಧನೆ ಮಾಡುತ್ತಾರೆ. ನೀವೇನಾದರೂ ಅವರನ್ನು ಅನುಸರಿಸಿದರೆ ನಿಶ್ಚಯವಾಗಿಯೂ ನೀವು ಸಹಭಾಗಿತ್ವ (ಶಿರ್ಕ್) ಮಾಡಿದವರಾಗುವಿರಿ. info
التفاسير:

external-link copy
122 : 6

اَوَمَنْ كَانَ مَیْتًا فَاَحْیَیْنٰهُ وَجَعَلْنَا لَهٗ نُوْرًا یَّمْشِیْ بِهٖ فِی النَّاسِ كَمَنْ مَّثَلُهٗ فِی الظُّلُمٰتِ لَیْسَ بِخَارِجٍ مِّنْهَا ؕ— كَذٰلِكَ زُیِّنَ لِلْكٰفِرِیْنَ مَا كَانُوْا یَعْمَلُوْنَ ۟

ನಿರ್ಜೀವ ಸ್ಥಿತಿಯಲ್ಲಿದ್ದ ಒಬ್ಬ ವ್ಯಕ್ತಿಗೆ ನಾವು ಜೀವವನ್ನು ನೀಡಿ, ಅವನಿಗೆ ಒಂದು ಬೆಳಕನ್ನು ಸಹ ದಯಪಾಲಿಸಿದೆವು. ಅವನು ಆ ಬೆಳಕಿನೊಂದಿಗೆ ಜನರ ಮಧ್ಯೆ ಓಡಾಡುತ್ತಾನೆ. ಇಂತಹವನು ಹೊರಬರಲಾಗದ ಸ್ಥಿತಿಯಲ್ಲಿ ಗಾಢಾಂಧಕಾರಗಳಲ್ಲಿ ಬಿದ್ದಿರುವ ವ್ಯಕ್ತಿಯಂತಾಗುವನೇ? ಈ ರೀತಿ ಸತ್ಯನಿಷೇಧಿಗಳಿಗೆ ಅವರು ಮಾಡುತ್ತಿರುವ ದುಷ್ಕರ್ಮಗಳನ್ನು ಅಲಂಕರಿಸಿಕೊಡಲಾಗಿದೆ. info
التفاسير:

external-link copy
123 : 6

وَكَذٰلِكَ جَعَلْنَا فِیْ كُلِّ قَرْیَةٍ اَكٰبِرَ مُجْرِمِیْهَا لِیَمْكُرُوْا فِیْهَا ؕ— وَمَا یَمْكُرُوْنَ اِلَّا بِاَنْفُسِهِمْ وَمَا یَشْعُرُوْنَ ۟

ಇದೇ ರೀತಿ ನಾವು ಪ್ರತಿಯೊಂದು ಊರಿನಲ್ಲೂ ಅಲ್ಲಿನ ಅಪರಾಧಿಗಳ ಮುಖಂಡರನ್ನು ಪಿತೂರಿಗಳಲ್ಲಿ ಮಗ್ನರಾಗುವಂತೆ ಮಾಡಿದ್ದೇವೆ. ವಾಸ್ತವದಲ್ಲಿ, ಅವರು ಅವರ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆ. ಆದರೆ, ಅವರು ಅದನ್ನು ಅರಿಯುವುದಿಲ್ಲ.[1] info

[1] ಅಂದರೆ ಅವರು ಮಾಡುವ ಎಲ್ಲಾ ಪಿತೂರಿಗಳ ದುಷ್ಪರಿಣಾಮಗಳನ್ನು ಸ್ವತಃ ಅವರೇ ಅನುಭವಿಸುವರು.

التفاسير:

external-link copy
124 : 6

وَاِذَا جَآءَتْهُمْ اٰیَةٌ قَالُوْا لَنْ نُّؤْمِنَ حَتّٰی نُؤْتٰی مِثْلَ مَاۤ اُوْتِیَ رُسُلُ اللّٰهِ ؔۘؕ— اَللّٰهُ اَعْلَمُ حَیْثُ یَجْعَلُ رِسَالَتَهٗ ؕ— سَیُصِیْبُ الَّذِیْنَ اَجْرَمُوْا صَغَارٌ عِنْدَ اللّٰهِ وَعَذَابٌ شَدِیْدٌۢ بِمَا كَانُوْا یَمْكُرُوْنَ ۟

ಯಾವುದೇ ದೃಷ್ಟಾಂತವು ಅವರ ಬಳಿಗೆ ಬಂದಾಗ, “ಅಲ್ಲಾಹನ ಸಂದೇಶವಾಹಕರುಗಳಿಗೆ ನೀಡಲಾದ ವಸ್ತುವನ್ನು ನಮಗೂ ನೀಡಲಾಗುವ ತನಕ ನಾವು ಖಂಡಿತ ವಿಶ್ವಾಸವಿಡುವುದಿಲ್ಲ” ಎಂದು ಅವರು ಹೇಳುತ್ತಾರೆ. ಆದರೆ ತನ್ನ ಸಂದೇಶವಾಹಕತ್ವವನ್ನು ಎಲ್ಲಿ ಸ್ಥಾಪಿಸಬೇಕೆಂದು ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ಅಪರಾಧಿಗಳಿಗೆ, ಅವರ ಮಾಡುವ ಪಿತೂರಿಗಳಿಂದಾಗಿ ಅಲ್ಲಾಹನ ಬಳಿ ಅಪಮಾನ ಮತ್ತು ಕಠಿಣವಾದ ಶಿಕ್ಷೆಯನ್ನು ಸದ್ಯವೇ ಅನುಭವಿಸಬೇಕಾಗಿ ಬರುವುದು. info
التفاسير: