Traducción de los significados del Sagrado Corán - Traducción al Canarés- Hamza Batur

Número de página:close

external-link copy
111 : 6

وَلَوْ اَنَّنَا نَزَّلْنَاۤ اِلَیْهِمُ الْمَلٰٓىِٕكَةَ وَكَلَّمَهُمُ الْمَوْتٰی وَحَشَرْنَا عَلَیْهِمْ كُلَّ شَیْءٍ قُبُلًا مَّا كَانُوْا لِیُؤْمِنُوْۤا اِلَّاۤ اَنْ یَّشَآءَ اللّٰهُ وَلٰكِنَّ اَكْثَرَهُمْ یَجْهَلُوْنَ ۟

ನಾವು ಅವರ ಬಳಿಗೆ ದೇವದೂತರುಗಳನ್ನು ಇಳಿಸಿದರೂ, ಸತ್ತವರು (ಎದ್ದು ಬಂದು) ಅವರೊಡನೆ ಮಾತನಾಡಿದರೂ, ನಾವು ಎಲ್ಲಾ ವಸ್ತುಗಳನ್ನು ಅವರ ಮುಂದೆ ಒಟ್ಟುಗೂಡಿಸಿದರೂ ಅವರು ವಿಶ್ವಾಸವಿಡುವುದಿಲ್ಲ. ಅಲ್ಲಾಹು ಇಚ್ಛಿಸಿದರೆ ಹೊರತು. ಆದರೆ ಅವರಲ್ಲಿ ಹೆಚ್ಚಿನವರು ಅವಿವೇಕಿಗಳಾಗಿದ್ದಾರೆ. info
التفاسير:

external-link copy
112 : 6

وَكَذٰلِكَ جَعَلْنَا لِكُلِّ نَبِیٍّ عَدُوًّا شَیٰطِیْنَ الْاِنْسِ وَالْجِنِّ یُوْحِیْ بَعْضُهُمْ اِلٰی بَعْضٍ زُخْرُفَ الْقَوْلِ غُرُوْرًا ؕ— وَلَوْ شَآءَ رَبُّكَ مَا فَعَلُوْهُ فَذَرْهُمْ وَمَا یَفْتَرُوْنَ ۟

ಈ ರೀತಿ ನಾವು ಪ್ರತಿಯೊಬ್ಬ ಸಂದೇಶವಾಹಕರಿಗೂ ಮನುಷ್ಯರಲ್ಲಿ ಮತ್ತು ಜಿನ್ನ್‌ಗಳಲ್ಲಿ ಸೇರಿದ ಶೈತಾನರನ್ನು ಶತ್ರುಗಳನ್ನಾಗಿ ಮಾಡಿದ್ದೇವೆ. ಅವರು ವಂಚನಾತ್ಮಕವಾದ ಆಕರ್ಷಕ ಮಾತುಗಳನ್ನು ಪರಸ್ಪರ ದುರ್ಬೋಧನೆ ಮಾಡುತ್ತಾರೆ. ನಿಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸಿದ್ದರೆ ಅವರು ಹಾಗೆ ಮಾಡುತ್ತಿರಲಿಲ್ಲ. ಆದ್ದರಿಂದ ಅವರನ್ನು ಅವರು ಆರೋಪಿಸುತ್ತಿರುವ ವಿಷಯಗಳೊಂದಿಗೆ ಬಿಟ್ಟುಬಿಡಿ. info
التفاسير:

external-link copy
113 : 6

وَلِتَصْغٰۤی اِلَیْهِ اَفْـِٕدَةُ الَّذِیْنَ لَا یُؤْمِنُوْنَ بِالْاٰخِرَةِ وَلِیَرْضَوْهُ وَلِیَقْتَرِفُوْا مَا هُمْ مُّقْتَرِفُوْنَ ۟

ಪರಲೋಕದಲ್ಲಿ ವಿಶ್ವಾಸವಿಡದವರ ಹೃದಯಗಳು ಅದರ (ಅವರ ಮಾತುಗಳ) ಕಡೆಗೆ ಆಕರ್ಷಿತವಾಗುವುದಕ್ಕಾಗಿ, ಅವರು ಅದರಲ್ಲಿ ಸಂತೃಪ್ತರಾಗುವುದಕ್ಕಾಗಿ ಮತ್ತು ಅವರು ಮಾಡುವ ಪಾಪಗಳೆಲ್ಲವನ್ನೂ ಮಾಡುವುದಕ್ಕಾಗಿ (ಅವರು ಹಾಗೆ ಮಾಡುತ್ತಿದ್ದಾರೆ). info
التفاسير:

external-link copy
114 : 6

اَفَغَیْرَ اللّٰهِ اَبْتَغِیْ حَكَمًا وَّهُوَ الَّذِیْۤ اَنْزَلَ اِلَیْكُمُ الْكِتٰبَ مُفَصَّلًا ؕ— وَالَّذِیْنَ اٰتَیْنٰهُمُ الْكِتٰبَ یَعْلَمُوْنَ اَنَّهٗ مُنَزَّلٌ مِّنْ رَّبِّكَ بِالْحَقِّ فَلَا تَكُوْنَنَّ مِنَ الْمُمْتَرِیْنَ ۟

ಈ ವಿವರಣಾತ್ಮಕ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿದ್ದು ಅಲ್ಲಾಹನಾಗಿರುವಾಗ ನಾನು ಅವನ ಹೊರತಾದವರನ್ನು ತೀರ್ಪುಗಾರರನ್ನಾಗಿ ಹುಡುಕಬೇಕೇ? ನಾವು ಯಾರಿಗೆ ಗ್ರಂಥ ನೀಡಿದ್ದೇವೆಯೋ ಅವರೆಲ್ಲರೂ ಇದು ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸತ್ಯ ಸಹಿತ ಅವತೀರ್ಣವಾದ ಗ್ರಂಥವೆಂದು ತಿಳಿದಿದ್ದಾರೆ. ಆದ್ದರಿಂದ ನೀವು ಸಂಶಯಪಡುವವರಲ್ಲಿ ಸೇರಬೇಡಿ. info
التفاسير:

external-link copy
115 : 6

وَتَمَّتْ كَلِمَتُ رَبِّكَ صِدْقًا وَّعَدْلًا ؕ— لَا مُبَدِّلَ لِكَلِمٰتِهٖ ۚ— وَهُوَ السَّمِیْعُ الْعَلِیْمُ ۟

ನಿಮ್ಮ ಪರಿಪಾಲಕನ (ಅಲ್ಲಾಹನ) ವಚನವು ಸತ್ಯದಲ್ಲಿ ಮತ್ತು ನ್ಯಾಯದಲ್ಲಿ ಪರಿಪೂರ್ಣವಾಗಿದೆ. ಅವನ ವಚನಗಳನ್ನು ಬದಲಾಯಿಸುವವರು ಯಾರೂ ಇಲ್ಲ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ. info
التفاسير:

external-link copy
116 : 6

وَاِنْ تُطِعْ اَكْثَرَ مَنْ فِی الْاَرْضِ یُضِلُّوْكَ عَنْ سَبِیْلِ اللّٰهِ ؕ— اِنْ یَّتَّبِعُوْنَ اِلَّا الظَّنَّ وَاِنْ هُمْ اِلَّا یَخْرُصُوْنَ ۟

ನೀವು ಭೂಮಿಯಲ್ಲಿರುವ ಬಹುಸಂಖ್ಯಾತರನ್ನು ಅನುಸರಿಸಿದರೆ ಅವರು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸುತ್ತಾರೆ. ಅವರು ಕೇವಲ ಊಹಾ-ಪೋಹಗಳನ್ನು ಮಾತ್ರ ಅನುಸರಿಸುತ್ತಾರೆ. ಅವರು ಕೇವಲ ಸುಳ್ಳನ್ನು ಮಾತ್ರ ಹೇಳುತ್ತಾರೆ. info
التفاسير:

external-link copy
117 : 6

اِنَّ رَبَّكَ هُوَ اَعْلَمُ مَنْ یَّضِلُّ عَنْ سَبِیْلِهٖ ۚ— وَهُوَ اَعْلَمُ بِالْمُهْتَدِیْنَ ۟

ತನ್ನ ಮಾರ್ಗದಿಂದ ತಪ್ಪಿಹೋದವನು ಯಾರೆಂದು ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ತಿಳಿದಿದೆ. ಸನ್ಮಾರ್ಗದಲ್ಲಿರುವವರು ಯಾರೆಂಬ ಬಗ್ಗೆಯೂ ಅವನಿಗೆ ತಿಳಿದಿದೆ. info
التفاسير:

external-link copy
118 : 6

فَكُلُوْا مِمَّا ذُكِرَ اسْمُ اللّٰهِ عَلَیْهِ اِنْ كُنْتُمْ بِاٰیٰتِهٖ مُؤْمِنِیْنَ ۟

ಆದ್ದರಿಂದ ಅಲ್ಲಾಹನ ಹೆಸರನ್ನು ಉಚ್ಛರಿಸಿ (ಕೊಯ್ಯ)ಲಾದ ಪ್ರಾಣಿಗಳನ್ನು ತಿನ್ನಿರಿ. ನೀವು ಅವನ ವಚನಗಳಲ್ಲಿ ವಿಶ್ವಾಸವಿಡುವವರಾಗಿದ್ದರೆ! info
التفاسير: