Traducción de los significados del Sagrado Corán - Traducción al Canarés- Hamza Batur

Número de página:close

external-link copy
138 : 6

وَقَالُوْا هٰذِهٖۤ اَنْعَامٌ وَّحَرْثٌ حِجْرٌ ۖۗ— لَّا یَطْعَمُهَاۤ اِلَّا مَنْ نَّشَآءُ بِزَعْمِهِمْ وَاَنْعَامٌ حُرِّمَتْ ظُهُوْرُهَا وَاَنْعَامٌ لَّا یَذْكُرُوْنَ اسْمَ اللّٰهِ عَلَیْهَا افْتِرَآءً عَلَیْهِ ؕ— سَیَجْزِیْهِمْ بِمَا كَانُوْا یَفْتَرُوْنَ ۟

ಅವರು ಹೇಳುತ್ತಾರೆ: “ಈ ಜಾನುವಾರುಗಳು ಮತ್ತು ಕೃಷಿಗಳನ್ನು ನಿಷೇಧಿಸಲಾಗಿದೆ. ನಾವು ಇಚ್ಛಿಸುವವರ ಹೊರತು ಯಾರೂ ಇವುಗಳನ್ನು ತಿನ್ನಬಾರದು.” ಇದು ಅವರ ದಾವೆಯಾಗಿದೆ. “ಕೆಲವು ಜಾನುವಾರುಗಳ ಬೆನ್ನ ಮೇಲೆ ಸವಾರಿ ಮಾಡುವುದನ್ನು ನಿಷೇಧಿಸಲಾಗಿದೆ ಮತ್ತು ಕೆಲವು ಜಾನುವಾರುಗಳನ್ನು ಕೊಯ್ಯುವಾಗ ಅಲ್ಲಾಹನ ಹೆಸರನ್ನು ಉಚ್ಛರಿಸಬೇಕಾಗಿಲ್ಲ” (ಎಂದು ಅವರು ಹೇಳುತ್ತಾರೆ) ಇವೆಲ್ಲವೂ ಅವರು ಅಲ್ಲಾಹನ ಬಗ್ಗೆ ಆರೋಪಿಸುವ ಸುಳ್ಳುಗಳಾಗಿವೆ. ಅವನು ಅವರ ಆರೋಪಗಳಿಗೆ ತಕ್ಕ ಪ್ರತಿಫಲವನ್ನು ನೀಡುವನು. info
التفاسير:

external-link copy
139 : 6

وَقَالُوْا مَا فِیْ بُطُوْنِ هٰذِهِ الْاَنْعَامِ خَالِصَةٌ لِّذُكُوْرِنَا وَمُحَرَّمٌ عَلٰۤی اَزْوَاجِنَا ۚ— وَاِنْ یَّكُنْ مَّیْتَةً فَهُمْ فِیْهِ شُرَكَآءُ ؕ— سَیَجْزِیْهِمْ وَصْفَهُمْ ؕ— اِنَّهٗ حَكِیْمٌ عَلِیْمٌ ۟

ಅವರು ಹೇಳುತ್ತಾರೆ: “ಈ ಜಾನುವಾರುಗಳ ಹೊಟ್ಟೆಯಲ್ಲಿರುವುದು ನಮ್ಮ ಪುರುಷರಿಗೆ ಮಾತ್ರ ಇರುವಂತದ್ದು. ಅದು ನಮ್ಮ ಪತ್ನಿಯರಿಗೆ ನಿಷಿದ್ಧವಾಗಿವೆ.” ಆದರೆ ಅದು ಸತ್ತ ಪ್ರಾಣಿಯಾದರೆ ಅವರು ಅದನ್ನು ಸಮಾನವಾಗಿ ಪಾಲು ಮಾಡುತ್ತಾರೆ. ಅವನು ಅವರ ಆರೋಪಗಳಿಗೆ ತಕ್ಕ ಪ್ರತಿಫಲವನ್ನು ನೀಡುವನು. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ. info
التفاسير:

external-link copy
140 : 6

قَدْ خَسِرَ الَّذِیْنَ قَتَلُوْۤا اَوْلَادَهُمْ سَفَهًا بِغَیْرِ عِلْمٍ وَّحَرَّمُوْا مَا رَزَقَهُمُ اللّٰهُ افْتِرَآءً عَلَی اللّٰهِ ؕ— قَدْ ضَلُّوْا وَمَا كَانُوْا مُهْتَدِیْنَ ۟۠

ಅಜ್ಞಾನದಿಂದ ಅವಿವೇಕಿಗಳಾಗಿ ತಮ್ಮ ಮಕ್ಕಳನ್ನು ಕೊಂದವರು ಮತ್ತು ಅಲ್ಲಾಹನ ಬಗ್ಗೆ ಸುಳ್ಳು ಆರೋಪಿಸುತ್ತಾ ಅಲ್ಲಾಹು ದಯಪಾಲಿಸಿದ ವಸ್ತುಗಳನ್ನು ನಿಷೇಧಿಸಿದವರು ನಷ್ಟಹೊಂದಿದರು. ಅವರು ದಾರಿತಪ್ಪಿ ಹೋದರು. ಅವರು ಸನ್ಮಾರ್ಗದಲ್ಲಿ ಸೇರಲಿಲ್ಲ. info
التفاسير:

external-link copy
141 : 6

وَهُوَ الَّذِیْۤ اَنْشَاَ جَنّٰتٍ مَّعْرُوْشٰتٍ وَّغَیْرَ مَعْرُوْشٰتٍ وَّالنَّخْلَ وَالزَّرْعَ مُخْتَلِفًا اُكُلُهٗ وَالزَّیْتُوْنَ وَالرُّمَّانَ مُتَشَابِهًا وَّغَیْرَ مُتَشَابِهٍ ؕ— كُلُوْا مِنْ ثَمَرِهٖۤ اِذَاۤ اَثْمَرَ وَاٰتُوْا حَقَّهٗ یَوْمَ حَصَادِهٖ ۖؗ— وَلَا تُسْرِفُوْا ؕ— اِنَّهٗ لَا یُحِبُّ الْمُسْرِفِیْنَ ۟ۙ

ಚಪ್ಪರಗಳಿರುವ ಮತ್ತು ಚಪ್ಪರಗಳಿಲ್ಲದ ತೋಟಗಳನ್ನು, ಖರ್ಜೂರದ ಮರಗಳನ್ನು, ವೈವಿಧ್ಯಮಯ ಫಲಗಳಿರುವ ಕೃಷಿಗಳನ್ನು, ಹೋಲಿಕೆಯಿರುವ ಮತ್ತು ಹೋಲಿಕೆಯಿಲ್ಲದ ಆಲಿವ್ ಮತ್ತು ದಾಳಿಂಬೆಗಳನ್ನು ಸೃಷ್ಟಿಸಿದ್ದು ಅವನೇ. ಅವು ಹಣ್ಣು ಬಿಟ್ಟರೆ ಅವುಗಳ ಹಣ್ಣುಗಳನ್ನು ತಿನ್ನಿರಿ ಮತ್ತು ಅವುಗಳನ್ನು ಕೊಯ್ಯುವ ದಿನದಂದು ಅವುಗಳ ಹಕ್ಕನ್ನು (ಝಕಾತನ್ನು) ನೀಡಿರಿ. ದುರ್ವ್ಯಯ ಮಾಡಬೇಡಿ. ನಿಶ್ಚಯವಾಗಿಯೂ ದುರ್ವ್ಯಯ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ. info
التفاسير:

external-link copy
142 : 6

وَمِنَ الْاَنْعَامِ حَمُوْلَةً وَّفَرْشًا ؕ— كُلُوْا مِمَّا رَزَقَكُمُ اللّٰهُ وَلَا تَتَّبِعُوْا خُطُوٰتِ الشَّیْطٰنِ ؕ— اِنَّهٗ لَكُمْ عَدُوٌّ مُّبِیْنٌ ۟ۙ

ಭಾರ ಹೊರುವ ಜಾನುವಾರುಗಳನ್ನು ಮತ್ತು (ಆಹಾರಕ್ಕಾಗಿ) ಕೊಯ್ಯುವ ಜಾನುವಾರುಗಳನ್ನು (ಅವನು ಸೃಷ್ಟಿಸಿದ್ದಾನೆ). ಅಲ್ಲಾಹು ನಿಮಗೆ ಆಹಾರವಾಗಿ ನೀಡಿದ ವಸ್ತುಗಳಿಂದ ತಿನ್ನಿರಿ. ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ನಿಶ್ಚಯವಾಗಿಯೂ ಅವನು ನಿಮಗೆ ಪ್ರತ್ಯಕ್ಷ ಶತ್ರುವಾಗಿದ್ದಾನೆ. info
التفاسير: