Traducción de los significados del Sagrado Corán - Traducción al Canarés- Hamza Batur

Número de página:close

external-link copy
69 : 6

وَمَا عَلَی الَّذِیْنَ یَتَّقُوْنَ مِنْ حِسَابِهِمْ مِّنْ شَیْءٍ وَّلٰكِنْ ذِكْرٰی لَعَلَّهُمْ یَتَّقُوْنَ ۟

ಅವರ ವಿಚಾರಣೆ ಮಾಡುವ ಯಾವುದೇ ಹೊಣೆ ದೇವಭಯವುಳ್ಳವರಿಗಿಲ್ಲ. ಆದರೆ ಅವರಿಗೆ ನೆನಪಿಸಿಕೊಡಬೇಕು. ಅವರು ದೇವಭಯದಿಂದ ಜೀವಿಸುವುದಕ್ಕಾಗಿ. info
التفاسير:

external-link copy
70 : 6

وَذَرِ الَّذِیْنَ اتَّخَذُوْا دِیْنَهُمْ لَعِبًا وَّلَهْوًا وَّغَرَّتْهُمُ الْحَیٰوةُ الدُّنْیَا وَذَكِّرْ بِهٖۤ اَنْ تُبْسَلَ نَفْسٌ بِمَا كَسَبَتْ ۖۗ— لَیْسَ لَهَا مِنْ دُوْنِ اللّٰهِ وَلِیٌّ وَّلَا شَفِیْعٌ ۚ— وَاِنْ تَعْدِلْ كُلَّ عَدْلٍ لَّا یُؤْخَذْ مِنْهَا ؕ— اُولٰٓىِٕكَ الَّذِیْنَ اُبْسِلُوْا بِمَا كَسَبُوْا ۚ— لَهُمْ شَرَابٌ مِّنْ حَمِیْمٍ وَّعَذَابٌ اَلِیْمٌ بِمَا كَانُوْا یَكْفُرُوْنَ ۟۠

ತಮ್ಮ ಧರ್ಮವನ್ನು ಆಟ ಮತ್ತು ಮನೋರಂಜನೆಯಾಗಿ ಸ್ವೀಕರಿಸಿದವರನ್ನು ಹಾಗೂ ಇಹಲೋಕದ ಜೀವನಕ್ಕೆ ಮರುಳಾದವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಜನರು ತಮ್ಮ ಕರ್ಮಗಳ ಕಾರಣದಿಂದ ನಾಶವಾಗದಿರುವುದಕ್ಕಾಗಿ ಇದರ (ಕುರ್‌ಆನಿನ) ಮೂಲಕ ಅವರಿಗೆ ಉಪದೇಶ ನೀಡಿ. ಅವರಿಗೆ ಅಲ್ಲಾಹನ ಹೊರತು ಯಾವುದೇ ರಕ್ಷಕ ಅಥವಾ ಶಿಫಾರಸುಗಾರನಿಲ್ಲ. ಅವರು ಎಲ್ಲಾ ರೀತಿಯ ಪರಿಹಾರಗಳನ್ನು ನೀಡಿದರೂ ಅದನ್ನು ಅವರಿಂದ ಸ್ವೀಕರಿಸಲಾಗುವುದಿಲ್ಲ. ಅವರೇ ತಮ್ಮ ಕರ್ಮಗಳ ಕಾರಣದಿಂದ ನಾಶವಾದವರು. ಅವರು ಸತ್ಯವನ್ನು ನಿಷೇಧಿಸುವ ಕಾರಣ ಅವರಿಗೆ ಕುದಿಯುವ ನೀರು ಮತ್ತು ಯಾತನಾಮಯ ಶಿಕ್ಷೆಯಿದೆ. info
التفاسير:

external-link copy
71 : 6

قُلْ اَنَدْعُوْا مِنْ دُوْنِ اللّٰهِ مَا لَا یَنْفَعُنَا وَلَا یَضُرُّنَا وَنُرَدُّ عَلٰۤی اَعْقَابِنَا بَعْدَ اِذْ هَدٰىنَا اللّٰهُ كَالَّذِی اسْتَهْوَتْهُ الشَّیٰطِیْنُ فِی الْاَرْضِ حَیْرَانَ ۪— لَهٗۤ اَصْحٰبٌ یَّدْعُوْنَهٗۤ اِلَی الْهُدَی ائْتِنَا ؕ— قُلْ اِنَّ هُدَی اللّٰهِ هُوَ الْهُدٰی ؕ— وَاُمِرْنَا لِنُسْلِمَ لِرَبِّ الْعٰلَمِیْنَ ۟ۙ

ಹೇಳಿರಿ: “ಅಲ್ಲಾಹನನ್ನು ಬಿಟ್ಟು ನಮಗೆ ಉಪಕಾರ ಅಥವಾ ತೊಂದರೆ ಮಾಡಲು ಸಾಧ್ಯವಿಲ್ಲದವರನ್ನು ನಾವು ಕರೆದು ಪ್ರಾರ್ಥಿಸಬೇಕೇ? ಅಲ್ಲಾಹು ನಮಗೆ ಸನ್ಮಾರ್ಗವನ್ನು ತೋರಿಸಿದ ಬಳಿಕ ನಾವು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳಿ ಹೋಗುವಂತಾಗಬೇಕೇ? “ನಮ್ಮ ಬಳಿ ಬಾ” ಎಂದು ಸನ್ಮಾರ್ಗಕ್ಕೆ ಕರೆಯುವ ಗೆಳೆಯರಿದ್ದೂ ಸಹ, ಶೈತಾನರ ಆಮಿಷಕ್ಕೆ ಬಲಿಯಾಗಿ ಭೂಮಿಯಲ್ಲಿ ದಿಗ್ಭ್ರಾಂತನಾಗಿ ಅಲೆದಾಡುವ ವ್ಯಕ್ತಿಯಂತೆ ನಾವಾಗಬೇಕೇ?” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನ. ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಶರಣಾಗಬೇಕೆಂದು ನಮಗೆ ಆಜ್ಞಾಪಿಸಲಾಗಿದೆ.” info
التفاسير:

external-link copy
72 : 6

وَاَنْ اَقِیْمُوا الصَّلٰوةَ وَاتَّقُوْهُ ؕ— وَهُوَ الَّذِیْۤ اِلَیْهِ تُحْشَرُوْنَ ۟

“ನಮಾಝ್ ಸಂಸ್ಥಾಪಿಸಿರಿ ಮತ್ತು ಅಲ್ಲಾಹನನ್ನು ಭಯಪಡಿರಿ” ಎಂದು ಕೂಡ (ನಮಗೆ ಆಜ್ಞಾಪಿಸಲಾಗಿದೆ). ನಿಮ್ಮೆಲ್ಲರನ್ನೂ ಅವನ ಬಳಿಗೇ ಒಟ್ಟುಗೂಡಿಸಲಾಗುವುದು. info
التفاسير:

external-link copy
73 : 6

وَهُوَ الَّذِیْ خَلَقَ السَّمٰوٰتِ وَالْاَرْضَ بِالْحَقِّ ؕ— وَیَوْمَ یَقُوْلُ كُنْ فَیَكُوْنُ ؕ۬— قَوْلُهُ الْحَقُّ ؕ— وَلَهُ الْمُلْكُ یَوْمَ یُنْفَخُ فِی الصُّوْرِ ؕ— عٰلِمُ الْغَیْبِ وَالشَّهَادَةِ ؕ— وَهُوَ الْحَكِیْمُ الْخَبِیْرُ ۟

ಭೂಮ್ಯಾಕಾಶಗಳನ್ನು ಸತ್ಯ ಸಹಿತ ಸೃಷ್ಟಿಸಿದವನು ಅವನೇ. ಅವನು “ಉಂಟಾಗು” ಎಂದು ಹೇಳುವ ದಿನ ಅದು ಉಂಟಾಗುತ್ತದೆ. ಅವನ ಮಾತು ಸತ್ಯವಾಗಿದೆ. ಕಹಳೆಯಲ್ಲಿ ಊದಲಾಗುವ ದಿನ ಆಧಿಪತ್ಯವು ಅವನದ್ದಾಗಿದೆ. ಅವನು ದೃಶ್ಯ-ಅದೃಶ್ಯಗಳನ್ನು ತಿಳಿದವನು. ಅವನು ವಿವೇಕಪೂರ್ಣನು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ. info
التفاسير: