ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
69 : 6

وَمَا عَلَی الَّذِیْنَ یَتَّقُوْنَ مِنْ حِسَابِهِمْ مِّنْ شَیْءٍ وَّلٰكِنْ ذِكْرٰی لَعَلَّهُمْ یَتَّقُوْنَ ۟

ಭಯಭಕ್ತಿ ಪಾಲಿಸುವವರಿಗೆ ಅವರ (ಅಕ್ರಮಿಗಳ) ವಿಚಾರಣೆಯ ಹೊಣೆಯಿಲ್ಲ. ಆದರೆ ಅವರ ಮೇಲೆ ಸದುಪದೇಶದ ಹೊಣೆಯಿರುತ್ತದೆ. ಪ್ರಾಯಶಃ ಅವರು ಭಯಭಕ್ತಿಯುಳ್ಳವರಾಗಬಹುದು. info
التفاسير:

external-link copy
70 : 6

وَذَرِ الَّذِیْنَ اتَّخَذُوْا دِیْنَهُمْ لَعِبًا وَّلَهْوًا وَّغَرَّتْهُمُ الْحَیٰوةُ الدُّنْیَا وَذَكِّرْ بِهٖۤ اَنْ تُبْسَلَ نَفْسٌ بِمَا كَسَبَتْ ۖۗ— لَیْسَ لَهَا مِنْ دُوْنِ اللّٰهِ وَلِیٌّ وَّلَا شَفِیْعٌ ۚ— وَاِنْ تَعْدِلْ كُلَّ عَدْلٍ لَّا یُؤْخَذْ مِنْهَا ؕ— اُولٰٓىِٕكَ الَّذِیْنَ اُبْسِلُوْا بِمَا كَسَبُوْا ۚ— لَهُمْ شَرَابٌ مِّنْ حَمِیْمٍ وَّعَذَابٌ اَلِیْمٌ بِمَا كَانُوْا یَكْفُرُوْنَ ۟۠

ಮತ್ತು ತಮ್ಮ ಧರ್ಮವನ್ನು ಆಟ ಮತ್ತು ವಿನೋದವನ್ನಾಗಿ ಮಾಡಿರುವವರನ್ನು ಹಾಗೂ ಐಹಿಕ ಜೀವನಕ್ಕೆ ಮೋಸ ಹೋದವರನ್ನು ನೀವು ಬಿಟ್ಟುಬಿಡಿರಿ. ಯಾವೊಬ್ಬ ವ್ಯಕ್ತಿಯು ತಾನು ಮಾಡಿ ಬಿಟ್ಟಿರುವುದರ ಫಲವಾಗಿ ನಾಶ ಕೋಪಕ್ಕೆ ತಳ್ಳಲ್ಪಡದಿರಲೆಂದು ನೀವು ಈ ಕುರ್‌ಆನಿನ ಮೂಲಕ ಸದುಪದೇಶ ಮಾಡುತ್ತಿರಿ. ಆಗ ಅವನಿಗೆ ಅಲ್ಲಾಹನ ಹೊರತು ಯಾವೊಬ್ಬ ಸಹಾಯಕನಾಗಲೀ, ಶಿಫಾರಸ್ಸುಗಾರನಾಗಲೀ ಇರಲಾರನು ಮತ್ತು ಅಂದು ಅವನು ಸಕಲ ವಿಧದ ಪ್ರಾಯಶ್ಚಿತ್ತವನ್ನು ನೀಡಿದರೂ ಅವನಿಂದ ಅದನ್ನು ಸ್ವೀಕರಿಸಲಾಗದು. ಸ್ವತಃ ತಾವು ಮಾಡಿಟ್ಟಿರುವುದರ ಫಲವಾಗಿ ನಾಶಕೋಪಕ್ಕೆ ತಳ್ಳಲ್ಪಡುವವರು ಇವರೇ ಆಗಿದ್ದಾರೆ. ಅವರಿಗೆ ನರಕದಲ್ಲಿ ಕುಡಿಯಲು ಕುದಿಯುವ ನೀರು ಇರುವುದು ಮತ್ತು ವೇದನಾಜನಕ ಶಿಕ್ಷೆಯಿರುವುದು. ಇದು ಅವರ ಸತ್ಯನಿಷೇಧದ ನಿಮಿತ್ತವಾಗಿದೆ. info
التفاسير:

external-link copy
71 : 6

قُلْ اَنَدْعُوْا مِنْ دُوْنِ اللّٰهِ مَا لَا یَنْفَعُنَا وَلَا یَضُرُّنَا وَنُرَدُّ عَلٰۤی اَعْقَابِنَا بَعْدَ اِذْ هَدٰىنَا اللّٰهُ كَالَّذِی اسْتَهْوَتْهُ الشَّیٰطِیْنُ فِی الْاَرْضِ حَیْرَانَ ۪— لَهٗۤ اَصْحٰبٌ یَّدْعُوْنَهٗۤ اِلَی الْهُدَی ائْتِنَا ؕ— قُلْ اِنَّ هُدَی اللّٰهِ هُوَ الْهُدٰی ؕ— وَاُمِرْنَا لِنُسْلِمَ لِرَبِّ الْعٰلَمِیْنَ ۟ۙ

ಹೇಳಿರಿ: ಅಲ್ಲಾಹನ ಹೊರತು ನಮಗೆ ಲಾಭವನ್ನಾಗಲಿ, ಹಾನಿಯನ್ನಾಗಲಿ ಉಂಟು ಮಾಡದ ವಸ್ತುಗಳನ್ನು ನಾವು ಆರಾಧಿಸಬೇಕೇ? ಅಲ್ಲಾಹನು ನಮ್ಮನ್ನು ಸನ್ಮಾರ್ಗಕ್ಕೆ ಸೇರಿಸಿದ ನಂತರ ನಾವು ಹಿಂದಕ್ಕೆ ಮರಳಬೇಕೇ? ಒಬ್ಬ ವ್ಯಕ್ತಿಯು ಮರುಭೂಮಿಯಲ್ಲಿ ಶೈತಾನನಿಂದ ದಾರಿ ತಪ್ಪಿಸಲ್ಪಟ್ಟು ಅವನನ್ನು 'ನಮ್ಮ ಬಳಿಗೆ ಬಾ' ಎಂದು ಅವನ ಗೆಳೆಯರು ಕರೆಯುತ್ತಿದ್ದರೂ ನೇರದಾರಿಗೆ ಬರದೆ ದಿಗ್ಭಾçಂತನಾಗಿ ಅಲೆದಾಡುವಂತೆ ನಾವಾಗಬೇಕೇ?. ಹೇಳಿರಿ: ಅಲ್ಲಾಹನ ಮಾರ್ಗದರ್ಶನವೇ ನೈಜ ಮಾರ್ಗದರ್ಶನವಾಗಿದೆ. ಮತ್ತು ನಾವು ಜಗದೊಡೆಯನಿಗೆ ಸಂಪೂರ್ಣ ವಿಧೇಯರಾಗಬೇಕೆಂದು ನಮ್ಮೊಂದಿಗೆ ಆಜ್ಞಾಪಿಸಲಾಗಿದೆ. info
التفاسير:

external-link copy
72 : 6

وَاَنْ اَقِیْمُوا الصَّلٰوةَ وَاتَّقُوْهُ ؕ— وَهُوَ الَّذِیْۤ اِلَیْهِ تُحْشَرُوْنَ ۟

ಹಾಗೂ ನಮಾಝನ್ನು ಸಂಸ್ಥಾಪಿಸಿರಿ ಮತ್ತು ಅವನನ್ನು ಭಯಪಡಿರಿ. (ಎಂದು ಆಜ್ಞಾಪಿಸಲಾಗಿದೆ) ನಿಮ್ಮೆಲ್ಲರನ್ನೂ ಅವನೆಡೆಗೇ (ಅಲ್ಲಾಹನೆಡೆಗೆ) ಒಟ್ಟುಗೂಡಿಸಲಾಗುವುದು. info
التفاسير:

external-link copy
73 : 6

وَهُوَ الَّذِیْ خَلَقَ السَّمٰوٰتِ وَالْاَرْضَ بِالْحَقِّ ؕ— وَیَوْمَ یَقُوْلُ كُنْ فَیَكُوْنُ ؕ۬— قَوْلُهُ الْحَقُّ ؕ— وَلَهُ الْمُلْكُ یَوْمَ یُنْفَخُ فِی الصُّوْرِ ؕ— عٰلِمُ الْغَیْبِ وَالشَّهَادَةِ ؕ— وَهُوَ الْحَكِیْمُ الْخَبِیْرُ ۟

ಮತ್ತು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯವಾಗಿ ಸೃಷ್ಟಿಸಿದವನು ಅವನೇ ಹಾಗೂ ಅವನು ಉಂಟಾಗು ಎಂದು ಹೇಳುವ ದಿನ ಅದು (ಪ್ರಳಯ) ಉಂಟಾಗಲಿದೆ. ಅವನ ಮಾತು ಪರಮ ಸತ್ಯ. ಕಹಳೆಯನ್ನು ಊದಲ್ಪಡುವ ದಿನ ಅಧಿಪತ್ಯವು ಅವನಿಗೆ ಮಾತ್ರವಿರುವುದು. ಗೋಚರ, ಅಗೋಚರಗಳ ಜ್ಞಾನಿಯವನು. ಮತ್ತು ಅವನು ಯುಕ್ತಿವಂತನೂ, ಸೂಕ್ಷö್ಮ ಜ್ಞಾನಿಯೂ ಆಗಿದ್ದಾನೆ. info
التفاسير: