ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
45 : 6

فَقُطِعَ دَابِرُ الْقَوْمِ الَّذِیْنَ ظَلَمُوْا ؕ— وَالْحَمْدُ لِلّٰهِ رَبِّ الْعٰلَمِیْنَ ۟

ಅಕ್ರಮಿಗಳಾದ ಆ ಜನತೆಯ ಬುಡವನ್ನೇ ಕತ್ತರಿಸಿ ಬಿಡಲಾಯಿತು. ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ. info
التفاسير:

external-link copy
46 : 6

قُلْ اَرَءَیْتُمْ اِنْ اَخَذَ اللّٰهُ سَمْعَكُمْ وَاَبْصَارَكُمْ وَخَتَمَ عَلٰی قُلُوْبِكُمْ مَّنْ اِلٰهٌ غَیْرُ اللّٰهِ یَاْتِیْكُمْ بِهٖ ؕ— اُنْظُرْ كَیْفَ نُصَرِّفُ الْاٰیٰتِ ثُمَّ هُمْ یَصْدِفُوْنَ ۟

ಹೇಳಿರಿ: ನೀವೊಮ್ಮೆ ಆಲೋಚಿಸಿರಿ, ಅಲ್ಲಾಹನು ನಿಮ್ಮ ಕಿವಿಯನ್ನು, ಕಣ್ಣನ್ನು ಕಸಿದುಕೊಂಡು ನಿಮ್ಮ ಹೃದಯಗಳ ಮೇಲೆ ಮುದ್ರೆಯೊತ್ತಿ ಬಿಟ್ಟರೆ ಅಲ್ಲಾಹನ ಹೊರತು ಇನ್ನಾವ ಆರಾಧ್ಯನು ನಿಮಗದನ್ನು ಮರಳಿ ಕೊಡುತ್ತಾನೆ? ನಾವು ಅವರಿಗೆ ಹೇಗೆಲ್ಲಾ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತೇವೆಂಬುದನ್ನು ನೋಡಿರಿ. ಅದಾಗ್ಯೂ ಅವರು ವಿಮುಖರಾಗುತ್ತಾರೆ. info
التفاسير:

external-link copy
47 : 6

قُلْ اَرَءَیْتَكُمْ اِنْ اَتٰىكُمْ عَذَابُ اللّٰهِ بَغْتَةً اَوْ جَهْرَةً هَلْ یُهْلَكُ اِلَّا الْقَوْمُ الظّٰلِمُوْنَ ۟

ಹೇಳಿರಿ: ನೀವು ಒಮ್ಮೆ ಆಲೋಚಿಸಿದ್ದೀರಾ? ಅಲ್ಲಾಹನ ಶಿಕ್ಷೆಯು ನಿಮಗೆ ಹಠಾತ್ತನೆ ಅಥವಾ ಪ್ರತ್ಯಕ್ಷ(ಸೂಚಿತವಾಗಿ) ಬಂದು ಬಿಟ್ಟರೆ ಅಕ್ರಮಿಗಳಾದ ಜನತೆಯ ಹೊರತು ಇನ್ನಾರಾದರೂ ನಾಶಗೊಳಿಸಲ್ಪಡುತ್ತಾರೆಯೇ? info
التفاسير:

external-link copy
48 : 6

وَمَا نُرْسِلُ الْمُرْسَلِیْنَ اِلَّا مُبَشِّرِیْنَ وَمُنْذِرِیْنَ ۚ— فَمَنْ اٰمَنَ وَاَصْلَحَ فَلَا خَوْفٌ عَلَیْهِمْ وَلَا هُمْ یَحْزَنُوْنَ ۟

(ಸಜ್ಜನರಿಗೆ) ಶುಭವಾರ್ತೆ ನೀಡಲೆಂದೂ, (ದುರ್ಜನರಿಗೆ) ಮುನ್ನೆಚ್ಚರಿಕೆ ನೀಡಲೆಂದೂ ಮಾತ್ರ ನಾವು ಸಂದೇಶವಾಹಕರನ್ನು ನಿಯೋಗಿಸುತ್ತೇವೆ. ಅನಂತರ ಯಾರು ವಿಶ್ವಾಸವಿಡುತ್ತಾರೋ ಮತ್ತು ಸುಧಾರಣೆ ಮಾಡಿಕೊಳ್ಳುತ್ತಾರೋ ಅವರ ಮೇಲೆ ಯಾವುದೇ ಭಯವಿರುವುದಿಲ್ಲ ಮತ್ತು ಅವರು ದುಃಖಿತರೂ ಆಗಲಾರರು. info
التفاسير:

external-link copy
49 : 6

وَالَّذِیْنَ كَذَّبُوْا بِاٰیٰتِنَا یَمَسُّهُمُ الْعَذَابُ بِمَا كَانُوْا یَفْسُقُوْنَ ۟

ಮತ್ತು ಯಾರು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುತ್ತಾರೋ ಅವರ ಧಿಕ್ಕಾರದ ನಿಮಿತ್ತ ಅವರು ಶಿಕ್ಷೆಗೆ ಗುರಿಯಾಗುವರು. info
التفاسير:

external-link copy
50 : 6

قُلْ لَّاۤ اَقُوْلُ لَكُمْ عِنْدِیْ خَزَآىِٕنُ اللّٰهِ وَلَاۤ اَعْلَمُ الْغَیْبَ وَلَاۤ اَقُوْلُ لَكُمْ اِنِّیْ مَلَكٌ ۚ— اِنْ اَتَّبِعُ اِلَّا مَا یُوْحٰۤی اِلَیَّ ؕ— قُلْ هَلْ یَسْتَوِی الْاَعْمٰی وَالْبَصِیْرُ ؕ— اَفَلَا تَتَفَكَّرُوْنَ ۟۠

ಹೇಳಿರಿ: ನಾನು ನಿಮಗೆ ಅಲ್ಲಾಹನ ಭಂಡಾರಗಳು ನನ್ನ ಬಳಿಯಿವೆಯೆಂದು ದಾವೆ ಮಾಡುವುದಿಲ್ಲ ಮತ್ತು ಅಗೋಚರ ಜ್ಞಾನವನ್ನು ನಾನು ಅರಿಯುವುದೂ ಇಲ್ಲ ಮತ್ತು ನಾನು ಒಬ್ಬ ದೇವಚರನಾಗಿದ್ದೇನೆಂದು ನಿಮ್ಮೊಂದಿಗೆ ಹೇಳುವುದಿಲ್ಲ. ನಾನಂತೂ ನನ್ನ ಬಳಿಗೆ ದಿವ್ಯ ಸಂದೇಶ ನೀಡಲಾಗುವುದನ್ನೇ ಅನುಸರಿಸುತ್ತೇನೆ. ಹೇಳಿರಿ: ಕುರುಡನು, ದೃಷ್ಟಿಯುಳ್ಳವನು ಸಮಾನರೇ? ಹಾಗೆಯೇ ನೀವು ಚಿಂತಿಸುವುದಿಲ್ಲವೇ? info
التفاسير:

external-link copy
51 : 6

وَاَنْذِرْ بِهِ الَّذِیْنَ یَخَافُوْنَ اَنْ یُّحْشَرُوْۤا اِلٰی رَبِّهِمْ لَیْسَ لَهُمْ مِّنْ دُوْنِهٖ وَلِیٌّ وَّلَا شَفِیْعٌ لَّعَلَّهُمْ یَتَّقُوْنَ ۟

ಅಲ್ಲಾಹನ ಹೊರತು ಅವರಿಗೆ ಯಾವೊಬ್ಬ ಸಹಾಯಕನಾಗಲೀ, ಯಾವೊಬ್ಬ ಶಿಫಾರಸ್ಸುಗಾರನಾಗಲೀ ಇರದಂತಹ ಸ್ಥಿತಿಯಲ್ಲಿ ಅವರನ್ನು ತಮ್ಮ ಪ್ರಭುವಿನೆಡೆಗೆ ಒಟ್ಟುಗೂಡಿಸಲ್ಪಡುವೆವೆಂದು ಭಯಪಡುವವರಿಗೆ ನೀವು ಇದರ ಮೂಲಕ (ಕುರ್‌ಆನ್) ಮುನ್ನೆಚ್ಚರಿಕೆ ನೀಡಿರಿ. ಅವರು ಭಯಪಡಬಹುದು. info
التفاسير:

external-link copy
52 : 6

وَلَا تَطْرُدِ الَّذِیْنَ یَدْعُوْنَ رَبَّهُمْ بِالْغَدٰوةِ وَالْعَشِیِّ یُرِیْدُوْنَ وَجْهَهٗ ؕ— مَا عَلَیْكَ مِنْ حِسَابِهِمْ مِّنْ شَیْءٍ وَّمَا مِنْ حِسَابِكَ عَلَیْهِمْ مِّنْ شَیْءٍ فَتَطْرُدَهُمْ فَتَكُوْنَ مِنَ الظّٰلِمِیْنَ ۟

ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಮುಂಜಾನೆಯಲ್ಲೂ, ಮುಸ್ಸಂಜೆಯಲ್ಲೂ, ಅವನನ್ನು ಕರೆದು ಪ್ರಾರ್ಥಿಸುವವರನ್ನು ನೀವು ದೂರಕ್ಕಟ್ಟಬೇಡಿರಿ. ಅವರ ವಿಚಾರಣೆಯ ಹೊಣೆ ನಿಮ್ಮ ಮೇಲಿಲ್ಲ. ನಿಮ್ಮ ವಿಚಾರಣೆಯ ಹೊಣೆ ಅವರ ಮೇಲಿಲ್ಲ. ಆದುದರಿಂದ ನೀವು ಅವರನ್ನು ದೂರಗಟ್ಟಿದರೆ ಅಕ್ರಮಿಗಳಲ್ಲಿ ಸೇರಿ ಬಿಡುವಿರಿ. info
التفاسير: