ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
152 : 6

وَلَا تَقْرَبُوْا مَالَ الْیَتِیْمِ اِلَّا بِالَّتِیْ هِیَ اَحْسَنُ حَتّٰی یَبْلُغَ اَشُدَّهٗ ۚ— وَاَوْفُوا الْكَیْلَ وَالْمِیْزَانَ بِالْقِسْطِ ۚ— لَا نُكَلِّفُ نَفْسًا اِلَّا وُسْعَهَا ۚ— وَاِذَا قُلْتُمْ فَاعْدِلُوْا وَلَوْ كَانَ ذَا قُرْبٰی ۚ— وَبِعَهْدِ اللّٰهِ اَوْفُوْا ؕ— ذٰلِكُمْ وَصّٰىكُمْ بِهٖ لَعَلَّكُمْ تَذَكَّرُوْنَ ۟ۙ

ಮತ್ತು ಅನಾಥನು ಪ್ರಬುದ್ಧನಾಗುವ ತನಕ ಅತ್ಯುತ್ತಮವಾದ ಮಾರ್ಗದಿಂದಲೇ ಹೊರತು ಅವನ ಸಂಪತ್ತಿನ ಹತ್ತಿರ ಸುಳಿಯ ಬೇಡಿರಿ. ನೀವು ಅಳತೆ ಮತ್ತು ತೂಕವನ್ನು ನ್ಯಾಯಪೂರ್ವಕವಾಗಿ ಪೂರ್ತಿ ನೀಡಿರಿ. ನಾವು ಯಾವೊಬ್ಬ ವ್ಯಕ್ತಿಗೂ ಅವನ ಸಾಮರ್ಥ್ಯಕ್ಕಿಂತ ಮಿಗಿಲಾಗಿ ಹೊಣೆಯನ್ನು ಹೊರಿಸುವುದಿಲ್ಲ. ನೀವು ಮಾತನಾಡುವಾಗ ನ್ಯಾಯ ಪಾಲಿಸಿರಿ. ಅವನು ನಿಕಟ ಬಂಧುವಾಗಿದ್ದರು ಸರಿಯೇ. ಅಲ್ಲಾಹನೊಂದಿಗೆ ಮಾಡಿಕೊಂಡಿರುವ ಕರಾರನ್ನು ಈಡೇರಿಸಿರಿ. ನೀವು ಸ್ಮರಿಸಿಕೊಳ್ಳಲೆಂದು ಅಲ್ಲಾಹನು ನಿಮಗೆ ಈ ಆದೇಶವನ್ನು ನೀಡಿದ್ದಾನೆ. info
التفاسير:

external-link copy
153 : 6

وَاَنَّ هٰذَا صِرَاطِیْ مُسْتَقِیْمًا فَاتَّبِعُوْهُ ۚ— وَلَا تَتَّبِعُوا السُّبُلَ فَتَفَرَّقَ بِكُمْ عَنْ سَبِیْلِهٖ ؕ— ذٰلِكُمْ وَصّٰىكُمْ بِهٖ لَعَلَّكُمْ تَتَّقُوْنَ ۟

ಮತ್ತು ಖಂಡಿತವಾಗಿಯೂ ಇದೇ ಧರ್ಮ ನನ್ನ ಋಜುವಾದ ಮಾರ್ಗ, ಆದ್ದರಿಂದ ನೀವು ಅದನ್ನು ಅನುಸರಿಸಿರಿ. ಇತರ ಮಾರ್ಗಗಳನ್ನು ಅನುಸರಿಸಬೇಡಿರಿ. ಅವು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ಬೇರ್ಪಡಿಸಿ ಬಿಡುತ್ತವೆ. ನೀವು ಭಯಭಕ್ತಿ ಪಾಲಿಸಲೆಂದು ಅವನು ನಿಮಗೆ ಈ ಆದೇಶವನ್ನು ನೀಡಿರುತ್ತಾನೆ. info
التفاسير:

external-link copy
154 : 6

ثُمَّ اٰتَیْنَا مُوْسَی الْكِتٰبَ تَمَامًا عَلَی الَّذِیْۤ اَحْسَنَ وَتَفْصِیْلًا لِّكُلِّ شَیْءٍ وَّهُدًی وَّرَحْمَةً لَّعَلَّهُمْ بِلِقَآءِ رَبِّهِمْ یُؤْمِنُوْنَ ۟۠

ಅನಂತರ ನಾವು ಮೂಸಾರವರಿಗೆ ಇಂತಹ ಗ್ರಂಥವನ್ನು ದಯಪಾಲಿಸಿದೆವು ಅದು ಸನ್ಮಾರ್ಗದಲ್ಲಿ ನಡೆಯುವವರಿಗೆ ಸಂಪೂರ್ಣವಾಗಿತ್ತು ಹಾಗೂ ಅದರಲ್ಲಿ ಅವಶ್ಯವಿರುವ ಪ್ರತಿಯೊಂದರ ವಿವರಣೆಯಿತ್ತು. ಹಾಗೂ ಆ ಗ್ರಂಥವು ಅನುಗ್ರಹವೂ, ಕಾರುಣ್ಯವೂ ಆಗಿತ್ತು. ಏಕೆಂದರೆ ಅವರು ತಮ್ಮ ಪ್ರಭುವನ್ನು ಭೇಟಿಯಾಗುವುದನ್ನು ದೃಢವಾಗಿ ನಂಬಲೆAದಾಗಿದೆ. info
التفاسير:

external-link copy
155 : 6

وَهٰذَا كِتٰبٌ اَنْزَلْنٰهُ مُبٰرَكٌ فَاتَّبِعُوْهُ وَاتَّقُوْا لَعَلَّكُمْ تُرْحَمُوْنَ ۟ۙ

ಈಗ ನಾವು ನಿಮಗಾಗಿ ಅನುಗ್ರಹಪೂರ್ಣ ಗ್ರಂಥ (ಕುರ್‌ಆನ್‌ನÀನ್ನು) ಅವತೀರ್ಣಗೊಳಿಸಿದೆವು. ಆದ್ದರಿಂದ ನೀವು ಇದನ್ನು ಅನುಸರಿಸಿರಿ ಮತ್ತು ಭಯಭಕ್ತಿಯನ್ನು ಪಾಲಿಸಿರಿ. ನಿಮಗೆ ಕಾರುಣ್ಯವು ಲಭಿಸಬಹುದು. info
التفاسير:

external-link copy
156 : 6

اَنْ تَقُوْلُوْۤا اِنَّمَاۤ اُنْزِلَ الْكِتٰبُ عَلٰی طَآىِٕفَتَیْنِ مِنْ قَبْلِنَا ۪— وَاِنْ كُنَّا عَنْ دِرَاسَتِهِمْ لَغٰفِلِیْنَ ۟ۙ

ನಮಗಿಂತ ಮೊದಲಿದ್ದಂತಹ ಎರಡು ಸಮುದಾಯಗಳಿಗೆ ಮಾತ್ರ (ಯಹೂದಿಯರು ಮತ್ತು ಕ್ರೆöÊಸ್ತರು) ಗ್ರಂಥ ಅವತೀರ್ಣಗೊಳಿಸಲಾಗಿತ್ತು ಮತ್ತು ಅದನ್ನು ಕಲಿಯುವ ಅರಿವು ನಮಗಿರಲಿಲ್ಲ ಎಂದು ನೀವು ಹೇಳಬಾರದೆಂದು (ಕುರ್‌ಆನ್‌ನ್ನು ಅವರ್ತೀಣಗೊಳಿಸಲಾಗಿದೆ.) info
التفاسير:

external-link copy
157 : 6

اَوْ تَقُوْلُوْا لَوْ اَنَّاۤ اُنْزِلَ عَلَیْنَا الْكِتٰبُ لَكُنَّاۤ اَهْدٰی مِنْهُمْ ۚ— فَقَدْ جَآءَكُمْ بَیِّنَةٌ مِّنْ رَّبِّكُمْ وَهُدًی وَّرَحْمَةٌ ۚ— فَمَنْ اَظْلَمُ مِمَّنْ كَذَّبَ بِاٰیٰتِ اللّٰهِ وَصَدَفَ عَنْهَا ؕ— سَنَجْزِی الَّذِیْنَ یَصْدِفُوْنَ عَنْ اٰیٰتِنَا سُوْٓءَ الْعَذَابِ بِمَا كَانُوْا یَصْدِفُوْنَ ۟

ನಮ್ಮ ಮೇಲೆ ಗ್ರಂಥವು ಅವತೀರ್ಣಗೊಳಿಸಿರುತ್ತಿದ್ದರೆ ನಾವು ಅವರಿಗಿಂತಲೂ ಹೆಚ್ಚು ಸನ್ಮಾರ್ಗಿಗಳಾಗಿರುತ್ತಿದ್ದೆವು ಎಂದು ನೀವು ನೆಪ ಹೂಡದಿರಲು ನಿಮ್ಮೆಡೆಗೆ ನಿಮ್ಮ ಪ್ರಭುವಿನ ಬಳಿಯಿಂದ ಒಂದು ಸ್ಪಷ್ಟ ಗ್ರಂಥವು, ಮಾರ್ಗದರ್ಶನವು ಮತ್ತು ಕಾರಣ್ಯವು ಬಂದಿದೆ. ಅದಾಗ್ಯೂ ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವವನಿಗಿಂತ ಮತ್ತು ಅದರಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ನಾವು ಸದ್ಯದಲ್ಲೇ ನಮ್ಮ ದೃಷ್ಟಾಂತಗಳಿAದ ವಿಮುಖರಾಗುವವರಿಗೆ ಅವರ ವಿಮುಖತೆಯ ನಿಮಿತ್ತ ಕಠಿಣ ಶಿಕ್ಷೆಯನ್ನು ನೀಡಲಿರುವೆವು. info
التفاسير: