ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
119 : 6

وَمَا لَكُمْ اَلَّا تَاْكُلُوْا مِمَّا ذُكِرَ اسْمُ اللّٰهِ عَلَیْهِ وَقَدْ فَصَّلَ لَكُمْ مَّا حَرَّمَ عَلَیْكُمْ اِلَّا مَا اضْطُرِرْتُمْ اِلَیْهِ ؕ— وَاِنَّ كَثِیْرًا لَّیُضِلُّوْنَ بِاَهْوَآىِٕهِمْ بِغَیْرِ عِلْمٍ ؕ— اِنَّ رَبَّكَ هُوَ اَعْلَمُ بِالْمُعْتَدِیْنَ ۟

ಮತ್ತು ಅಲ್ಲಾಹನ ನಾಮವನ್ನು ಉಚ್ಛರಿಸಿ ಕೊಯ್ಯಲಾದ ಪ್ರಾಣಿಯನ್ನು ತಿನ್ನದಿರಲು ನಿಮಗೇನಾಗಿದೆ? ನೀವು ಅನಿವಾರ್ಯಕ್ಕೊಳಗಾಗುವುದರ ಹೊರತು ಅಲ್ಲಾಹನು ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿರುವುದನ್ನು ನಿಮಗೆ ವಿವರಿಸಿಕೊಟ್ಟಿದ್ದಾನೆ. ಮತ್ತು ಹೆಚ್ಚಿನವರು ತಮ್ಮ ಇಷ್ಟಾನುಸಾರ ಯಾವುದೇ ಆಧಾರವಿಲ್ಲದೆ ಜನರನ್ನು ದಾರಿಗೆಡಿಸುತ್ತಿದ್ದಾರೆ. ನಿಮ್ಮ ಪ್ರಭು ಹದ್ದು ಮೀರುವವರನ್ನು ಚೆನ್ನಾಗಿ ಅರಿಯುತ್ತಾನೆ. info
التفاسير:

external-link copy
120 : 6

وَذَرُوْا ظَاهِرَ الْاِثْمِ وَبَاطِنَهٗ ؕ— اِنَّ الَّذِیْنَ یَكْسِبُوْنَ الْاِثْمَ سَیُجْزَوْنَ بِمَا كَانُوْا یَقْتَرِفُوْنَ ۟

ಮತ್ತು ನೀವು ಪ್ರತ್ಯಕ್ಷ ಹಾಗೂ ಪರೋಕ್ಷವಾದ ಪಾಪಗಳನ್ನೂ ಬಿಟ್ಟು ಬಿಡಿರಿ. ನಿಸ್ಸಂಶಯವಾಗಿಯು ಪಾಪ ಮಾಡುತ್ತಿರುವವರು ತಮ್ಮ ಪಾಪಕ್ಕೆ ತಕ್ಕ ಪ್ರತಿಫಲವನ್ನು ಸದ್ಯದಲ್ಲೇ ಪಡೆಯಲಿರುವರು. info
التفاسير:

external-link copy
121 : 6

وَلَا تَاْكُلُوْا مِمَّا لَمْ یُذْكَرِ اسْمُ اللّٰهِ عَلَیْهِ وَاِنَّهٗ لَفِسْقٌ ؕ— وَاِنَّ الشَّیٰطِیْنَ لَیُوْحُوْنَ اِلٰۤی اَوْلِیٰٓـِٕهِمْ لِیُجَادِلُوْكُمْ ۚ— وَاِنْ اَطَعْتُمُوْهُمْ اِنَّكُمْ لَمُشْرِكُوْنَ ۟۠

ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ನಾಮವನ್ನು ಉಚ್ಛರಿಸದೇ ಕೊಯ್ಯಲಾದ ಪ್ರಾಣಿಗಳನ್ನು ನೀವು ತಿನ್ನ ಬೇಡಿರಿ. ಇದು ಧಿಕ್ಕಾರವಾಗಿದೆ, ಖಂಡಿತವಾಗಿಯು ನಿಮ್ಮೊಂದಿಗೆ ತರ್ಕಿಸುವುದಕ್ಕಾಗಿ ಶೈತಾನರು ತಮ್ಮ ಮಿತ್ರರಿಗೆ ದುರ್ಬೋಧನೆ ನೀಡುತ್ತಿರುವರು ಮತ್ತು ನೀವೇನಾದರೂ ಅವರನ್ನು ಅನುಸರಿಸಿದರೆ ಖಂಡಿತವಾಗಿಯು ನೀವು (ಅಲ್ಲಾಹನೊಂದಿಗೆ) ಸಹಭಾಗಿಗಳನ್ನು ನಿಶ್ಚಯಿಸಿದವರಾಗುವಿರಿ. info
التفاسير:

external-link copy
122 : 6

اَوَمَنْ كَانَ مَیْتًا فَاَحْیَیْنٰهُ وَجَعَلْنَا لَهٗ نُوْرًا یَّمْشِیْ بِهٖ فِی النَّاسِ كَمَنْ مَّثَلُهٗ فِی الظُّلُمٰتِ لَیْسَ بِخَارِجٍ مِّنْهَا ؕ— كَذٰلِكَ زُیِّنَ لِلْكٰفِرِیْنَ مَا كَانُوْا یَعْمَلُوْنَ ۟

(ಸತ್ಯವಿಶ್ವಾಸದಿಂದ ವಂಚಿತನಾಗಿದ್ದ) ಮೃತ ವ್ಯಕ್ತಿಯೊಬ್ಬನನ್ನು ನಾವು (ಸತ್ಯವಿಶ್ವಾಸವನ್ನು ನೀಡಿ) ಜೀವಂತಗೊಳಿಸಿ ಮತ್ತು ಅವನಿಗೆ ಒಂದು ಪ್ರಕಾಶವನ್ನು ನೀಡಿದೆವು. ಅವನು (ಪ್ರಕಾಶವನ್ನು ತಲುಪಿಸಲು) ಜನರ ನಡುವೆ ಓಡಾಡಿಕೊಂಡಿದ್ದಾನೆ. ಅಂತಹ ವ್ಯಕ್ತಿಯು, ಅಂಧಕಾರಗಳಿAದ ಹೊರಬರಲು ಸಾಧ್ಯವಾಗದಂತಹ ವ್ಯಕ್ತಿಯಂತಾಗುವನೇ? ಹೀಗೆ ಸತ್ಯನಿಷೇಧಿಗಳಿಗೆ ಅವರ ಕರ್ಮಗಳನ್ನು ಮನಮೋಹಕಗೊಳಿಸಲಾಗಿದೆ. info
التفاسير:

external-link copy
123 : 6

وَكَذٰلِكَ جَعَلْنَا فِیْ كُلِّ قَرْیَةٍ اَكٰبِرَ مُجْرِمِیْهَا لِیَمْكُرُوْا فِیْهَا ؕ— وَمَا یَمْكُرُوْنَ اِلَّا بِاَنْفُسِهِمْ وَمَا یَشْعُرُوْنَ ۟

ಇದೇ ಪ್ರಕಾರ ನಾವು ಪ್ರತಿಯೊಂದು ನಾಡಿನಲ್ಲೂ, ಅಪರಾಧಿಗಳನ್ನೇ ಅಲ್ಲಿನ ನಾಯಕರನ್ನಾಗಿ ಮಾಡುತ್ತೇವೆ. ಇದೇಕೆಂದರೆ ಅವರು ಅಲ್ಲಿ ಕುತಂತ್ರಗಳನ್ನು ಹೂಡಲೆಂದಾಗಿದೆ ಮತ್ತು ಅವರು ಸ್ವತಃ ತಮ್ಮ ವಿರುದ್ಧವೆ ಕುತಂತ್ರಗಳನ್ನು ಹೂಡುತ್ತಿದ್ದಾರೆ. ಆದರೆ ಅವರಿಗೆ ಪ್ರಜ್ಞೆಯಿಲ್ಲ. info
التفاسير:

external-link copy
124 : 6

وَاِذَا جَآءَتْهُمْ اٰیَةٌ قَالُوْا لَنْ نُّؤْمِنَ حَتّٰی نُؤْتٰی مِثْلَ مَاۤ اُوْتِیَ رُسُلُ اللّٰهِ ؔۘؕ— اَللّٰهُ اَعْلَمُ حَیْثُ یَجْعَلُ رِسَالَتَهٗ ؕ— سَیُصِیْبُ الَّذِیْنَ اَجْرَمُوْا صَغَارٌ عِنْدَ اللّٰهِ وَعَذَابٌ شَدِیْدٌۢ بِمَا كَانُوْا یَمْكُرُوْنَ ۟

ಮತ್ತು ಅವರ (ಮಕ್ಕಾಃದ ಖುರೈಷರ) ಬಳಿ ಯಾವ ದೃಷ್ಟಾಂತವು ಬಂದರೂ ಅಲ್ಲಾಹನ ಸಂದೇಶವಾಹಕರಿಗೆ ನೀಡಲಾಗಿರುವ ದಿವ್ಯ ಬೋಧನೆ ನಮಗೂ ನೀಡುವವರೆಗೆ ನಾವು ವಿಶ್ವಾಸವಿಡಲಾರೆವು. ಎಂದು ಅವರು ಹೇಳುತ್ತಾರೆ. ಆದರೆ ತನ್ನ ಸಂದೇಶವಾಹಕತ್ವವನ್ನು ಎಲ್ಲಿ ಒಪ್ಪಿಸಬೇಕೆಂಬುದನ್ನು ಅಲ್ಲಾಹನು ಚೆನ್ನಾಗಿ ಅರಿತಿದ್ದಾನೆ. ಸದ್ಯದಲ್ಲೇ ಅಪರಾಧವೆಸಗಿದವರು ತಮ್ಮ ದುಷ್ಕೃತ್ಯಗಳ ಫಲವಾಗಿ ಅಲ್ಲಾಹನ ಬಳಿ ನಿಂದ್ಯತೆಯನ್ನು, ಕಠಿಣವಾದ ಶಿಕ್ಷೆಯನ್ನು ಅನುಭವಿಸುವರು. info
التفاسير: