ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
143 : 6

ثَمٰنِیَةَ اَزْوَاجٍ ۚ— مِنَ الضَّاْنِ اثْنَیْنِ وَمِنَ الْمَعْزِ اثْنَیْنِ ؕ— قُلْ ءٰٓالذَّكَرَیْنِ حَرَّمَ اَمِ الْاُنْثَیَیْنِ اَمَّا اشْتَمَلَتْ عَلَیْهِ اَرْحَامُ الْاُنْثَیَیْنِ ؕ— نَبِّـُٔوْنِیْ بِعِلْمٍ اِنْ كُنْتُمْ صٰدِقِیْنَ ۟ۙ

ಜಾನುವಾರುಗಳ ಪೈಕಿ ಎಂಟು ಜೋಡಿಗಳನ್ನು (ಸೃಷ್ಟಿಸಿದ್ದಾನೆ). ಕುರಿಗಳಿಂದ ಎರಡು ಮತ್ತು ಆಡುಗಳಿಂದ ಎರಡು, ನೀವು ಕೇಳಿರಿ: ಅಲ್ಲಾಹನು ನಿಷಿದ್ಧಗೊಳಿಸಿರುವುದು ಆ ಎರಡು ಗಂಡುಗಳನ್ನೋ ಅಥವಾ ಆ ಎರಡರ ಹೆಣ್ಣುಗಳನ್ನೋ ಅಥವಾ ಆ ಎರಡು ಹೆಣ್ಣು ತಮ್ಮ ಗರ್ಭಾಶಯಗಳಲ್ಲಿ ಹೊತ್ತುಕೊಂಡಿರುವುದನ್ನೋ? ನೀವು ಸತ್ಯವಂತರಾಗಿದ್ದರೆ ನನಗೆ ಆಧಾರದೊಂದಿಗೆ ಹೇಳಿರಿ; info
التفاسير:

external-link copy
144 : 6

وَمِنَ الْاِبِلِ اثْنَیْنِ وَمِنَ الْبَقَرِ اثْنَیْنِ ؕ— قُلْ ءٰٓالذَّكَرَیْنِ حَرَّمَ اَمِ الْاُنْثَیَیْنِ اَمَّا اشْتَمَلَتْ عَلَیْهِ اَرْحَامُ الْاُنْثَیَیْنِ ؕ— اَمْ كُنْتُمْ شُهَدَآءَ اِذْ وَصّٰىكُمُ اللّٰهُ بِهٰذَا ۚ— فَمَنْ اَظْلَمُ مِمَّنِ افْتَرٰی عَلَی اللّٰهِ كَذِبًا لِّیُضِلَّ النَّاسَ بِغَیْرِ عِلْمٍ ؕ— اِنَّ اللّٰهَ لَا یَهْدِی الْقَوْمَ الظّٰلِمِیْنَ ۟۠

ಒಂಟೆಯಿAದ ಎರಡು ವರ್ಗ ಮತ್ತು ಹಸುವಿನಿಂದ ಎರಡು ವರ್ಗವನ್ನು (ಸೃಷ್ಟಿಸಿದ್ದಾನೆ). ನೀವು ಕೇಳಿರಿ: ಅಲ್ಲಾಹನು ನಿಷಿದ್ಧಗೊಳಿಸಿರುವುದು ಆ ಎರಡು ಗಂಡು ವರ್ಗಗಳನ್ನೇ ಅಥವಾ ಆ ಎರಡು ಹೆಣ್ಣು ವರ್ಗಗಳನ್ನೇ ಅಥವಾ ಆ ಎರಡು ಹೆಣ್ಣು ವರ್ಗಗಳು ಗರ್ಭಾಶಯಗಳಲ್ಲಿ ಹೊತ್ತುಕೊಂಡಿರುವುದನ್ನೇ? ಅಲ್ಲಾಹನು ನಿಮಗಿದನ್ನು ಆದೇಶಿಸುವಾಗ ನೀವಲ್ಲಿ ಹಾಜರಿದ್ದಿರಾ? ಹೀಗಿರುವಾಗ ಯಾವುದೇ ಜ್ಞಾನವಿಲ್ಲದೆ ಜನರನ್ನು ದಾರಿಗೆಡಿಸಲು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಖಂಡಿತವಾಗಿಯು ಅಲ್ಲಾಹನು ಅಕ್ರಮಿಗಳಾದ ಜನರಿಗೆ ಸನ್ಮಾರ್ಗವನ್ನು ತೋರಿಸುವುದಿಲ್ಲ. info
التفاسير:

external-link copy
145 : 6

قُلْ لَّاۤ اَجِدُ فِیْ مَاۤ اُوْحِیَ اِلَیَّ مُحَرَّمًا عَلٰی طَاعِمٍ یَّطْعَمُهٗۤ اِلَّاۤ اَنْ یَّكُوْنَ مَیْتَةً اَوْ دَمًا مَّسْفُوْحًا اَوْ لَحْمَ خِنْزِیْرٍ فَاِنَّهٗ رِجْسٌ اَوْ فِسْقًا اُهِلَّ لِغَیْرِ اللّٰهِ بِهٖ ۚ— فَمَنِ اضْطُرَّ غَیْرَ بَاغٍ وَّلَا عَادٍ فَاِنَّ رَبَّكَ غَفُوْرٌ رَّحِیْمٌ ۟

ಹೇಳಿರಿ: ನನ್ನ ಬಳಿ ಬಂದಿರುವ ದಿವ್ಯ ಸಂದೇಶದಲ್ಲಿ ತಿನ್ನುವವನಿಗೆ ತಿನ್ನಲು ನಿಷಿದ್ಧವಾಗಿರುವುದನ್ನು ನಾನು ಕಾಣುತ್ತಿಲ್ಲ. ಆದರೆ ಅದು ಶವ ಅಥವ ಹರಿಯುವ ರಕ್ತ ಅಥವಾ ಹಂದಿ ಮಾಂಸವಾಗಿರುವುದರ ಹೊರತು. ಏಕೆಂದರೆ ಅದು ಅಶುದ್ಧವಾದುದಾಗಿದೆ ಅಥವಾ ಅಲ್ಲಾಹನ ಹೊರತು ಇತರರ ಹೆಸರಲ್ಲಿ ಬಿಡಲಾದುದ್ದು. ಇನ್ನು ಯಾರಾದರೂ (ಅದನ್ನು ತಿನ್ನಲು) ನಿರ್ಬಂಧಿತನಾದರೆ ಅವನು ಆಜ್ಞೋಲ್ಲಂಘನೇ ಮಾಡುವವನು, ಮಿತಿಮೀರುವವನು ಆಗಿರದಿದ್ದರೆ ಖಂಡಿತವಾಗಿಯು ನಿಮ್ಮ ಪ್ರಭು ಅತ್ಯಧಿಕ ಕ್ಷಮಿಸುವವನು ಕರುಣಾನಿಧಿಯು ಆಗಿದ್ದಾನೆ. info
التفاسير:

external-link copy
146 : 6

وَعَلَی الَّذِیْنَ هَادُوْا حَرَّمْنَا كُلَّ ذِیْ ظُفُرٍ ۚ— وَمِنَ الْبَقَرِ وَالْغَنَمِ حَرَّمْنَا عَلَیْهِمْ شُحُوْمَهُمَاۤ اِلَّا مَا حَمَلَتْ ظُهُوْرُهُمَاۤ اَوِ الْحَوَایَاۤ اَوْ مَا اخْتَلَطَ بِعَظْمٍ ؕ— ذٰلِكَ جَزَیْنٰهُمْ بِبَغْیِهِمْ ۖؗ— وَاِنَّا لَصٰدِقُوْنَ ۟

ಮತ್ತು ನಾವು ಯಹೂದರ ಮೇಲೆ ಉಗುರುಳ್ಳ ಎಲ್ಲಾ ಪ್ರಾಣಿಗಳನ್ನು ನಿಷಿದ್ಧಗೊಳಿಸಿದ್ದೆವು. ಹಸು, ಆಡು ಮುಂತಾದವುಗಳ ಕೊಬ್ಬುಗಳನ್ನು ನಾವು ಅವರ ಮೇಲೆ ನಿಷಿದ್ಧಗೊಳಿಸಿದ್ದೆವು. ಆದರೆ ಅವುಗಳ ಬೆನ್ನಿನ ಮೇಲಿರುವ ಅಥವಾ ಕರುಳಿನಲ್ಲಿರುವ ಅಥವಾ ಮೂಳೆಗಳಿಗೆ ಅಂಟಿಕೊAಡಿರುವುದರ ಹೊರತು. ಅವರ ದುಷ್ಟತನದ ನಿಮಿತ್ತ ನಾವು ಅವರಿಗೆ ಈ ಶಿಕ್ಷೆಯನ್ನು ನೀಡಿದೆವು. ಮತ್ತು ಖಂಡಿತವಾಗಿಯು ನಾವು ಸತ್ಯವಂತರಾಗಿದ್ದೇವೆ. info
التفاسير: