ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
28 : 6

بَلْ بَدَا لَهُمْ مَّا كَانُوْا یُخْفُوْنَ مِنْ قَبْلُ ؕ— وَلَوْ رُدُّوْا لَعَادُوْا لِمَا نُهُوْا عَنْهُ وَاِنَّهُمْ لَكٰذِبُوْنَ ۟

ವಾಸ್ತವದಲ್ಲಿ ಅವರು ಈ ಮೊದಲು ಯಾವುದನ್ನು ಮರೆಮಾಚುತ್ತಿದ್ದರೋ ಅದು ಅವರ ಮುಂದೆ ಬಹಿರಂಗಗೊAಡಿದೆ ಮತ್ತು ಅವರನ್ನು ಪುನಃ ಕಳುಹಿಸಲಾದರೂ ಯಾವುದರಿಂದ ಅವರನ್ನು ತಡೆಯಲಾಗಿತ್ತೋ ಅದೇ ಕೃತ್ಯವನ್ನು ಅವರು ಮಾಡುವರು. ಖಂಡಿತವಾಗಿಯು ಅವರು ಸುಳ್ಳುಗಾರರಾಗಿದ್ದಾರೆ. info
التفاسير:

external-link copy
29 : 6

وَقَالُوْۤا اِنْ هِیَ اِلَّا حَیَاتُنَا الدُّنْیَا وَمَا نَحْنُ بِمَبْعُوْثِیْنَ ۟

ಮತ್ತು ಅವರು ಹೇಳುತ್ತಾರೆ: 'ನಮ್ಮ ಜೀವನವೆಂದರೆ ಕೇವಲ ಈ ಇಹಲೋಕ ಜೀವನವಲ್ಲದೆ ಇನ್ನೇನೂ ಇಲ್ಲ ಮತ್ತು ನಾವು (ಮರಣದ ನಂತರ) ಪುನರ್ಜೀವಗೊಳಿಸಲ್ಪಡುವವರಲ್ಲ. info
التفاسير:

external-link copy
30 : 6

وَلَوْ تَرٰۤی اِذْ وُقِفُوْا عَلٰی رَبِّهِمْ ؕ— قَالَ اَلَیْسَ هٰذَا بِالْحَقِّ ؕ— قَالُوْا بَلٰی وَرَبِّنَا ؕ— قَالَ فَذُوْقُوا الْعَذَابَ بِمَا كُنْتُمْ تَكْفُرُوْنَ ۟۠

ಮತ್ತು ಅವರು ತಮ್ಮ ಪ್ರಭುವಿನ ಮುಂದೆ ನಿಲ್ಲಿಸಲಾಗುವ ಸಂದರ್ಭವನ್ನು ತಾವು ಕಂಡಿರುತ್ತಿದ್ದರೆ! ಅಲ್ಲಾಹನು ಕೇಳುವನು: ಈ ಸಂಗತಿಯು ವಾಸ್ತವಿಕತೆಯಲ್ಲವೇ? ಅವರು ಹೇಳುವರು: ನಿಸ್ಸಂಶಯವಾಗಿಯೂ, ನಮ್ಮ ಪ್ರಭುವಿನ ಮೇಲಾಣೆ. ಅಲ್ಲಾಹನು ಹೇಳುವನು: ನೀವು ನಿಮ್ಮ ಸತ್ಯನಿಷೇಧದ ಫಲವಾಗಿ ಈ ಶಿಕ್ಷೆಯನ್ನು ಸವಿಯಿರಿ. info
التفاسير:

external-link copy
31 : 6

قَدْ خَسِرَ الَّذِیْنَ كَذَّبُوْا بِلِقَآءِ اللّٰهِ ؕ— حَتّٰۤی اِذَا جَآءَتْهُمُ السَّاعَةُ بَغْتَةً قَالُوْا یٰحَسْرَتَنَا عَلٰی مَا فَرَّطْنَا فِیْهَا ۙ— وَهُمْ یَحْمِلُوْنَ اَوْزَارَهُمْ عَلٰی ظُهُوْرِهِمْ ؕ— اَلَا سَآءَ مَا یَزِرُوْنَ ۟

ನಿಸ್ಸಂಶಯವಾಗಿಯು ಅಲ್ಲಾಹನೊಂದಿಗೆ ಭೇಟಿಯಾಗುವುದನ್ನು ಸುಳ್ಳಾಗಿಸಿದವರು ನಷ್ಟಕ್ಕೀಡಾದರು. ಕೊನೆಗೆ ಆ ಘಳಿಗೆಯು (ಪ್ರಳಯವು) ಹಠಾತ್ತನೆ ಬಂದೆರಗಿದರೆ ಅವರು ಹೇಳುವರು: 'ಅಯ್ಯೋ ನಮ್ಮ ದುರ್ಗತಿಯೆ ನಾವು ಈ ವಿಷಯದ ಕುರಿತು ಪ್ರಮಾದವೆಸಗಿದೆವಲ್ಲಾ'. ಅವರು ತಮ್ಮ ಪಾಪಗಳ ಭಾರವನ್ನು ತಮ್ಮ ಬೆನ್ನುಗಳಲ್ಲಿ ಹೊತ್ತಿರುವರು. ಎಚ್ಚರಿಕೆ! ಅವರು ಹೊರುವ ಭಾರವು ಅದೆಷ್ಟು ನಿಕೃಷ್ಟವಾದದ್ದು! info
التفاسير:

external-link copy
32 : 6

وَمَا الْحَیٰوةُ الدُّنْیَاۤ اِلَّا لَعِبٌ وَّلَهْوٌ ؕ— وَلَلدَّارُ الْاٰخِرَةُ خَیْرٌ لِّلَّذِیْنَ یَتَّقُوْنَ ؕ— اَفَلَا تَعْقِلُوْنَ ۟

ಐಹಿಕ ಜೀವನವು ಆಟ ಮತ್ತು ವಿನೋದವಲ್ಲದೆ ಇನ್ನೇನೂ ಅಲ್ಲ ಮತ್ತು ಭಯಭಕ್ತಿ ಪಾಲಿಸುವವರಿಗೆ ಪರಲೋಕವೇ ಉತ್ತಮವಾಗಿದೆ. ನೀವು ಚಿಂತಿಸುವುದಿಲ್ಲವೇ? info
التفاسير:

external-link copy
33 : 6

قَدْ نَعْلَمُ اِنَّهٗ لَیَحْزُنُكَ الَّذِیْ یَقُوْلُوْنَ فَاِنَّهُمْ لَا یُكَذِّبُوْنَكَ وَلٰكِنَّ الظّٰلِمِیْنَ بِاٰیٰتِ اللّٰهِ یَجْحَدُوْنَ ۟

ಅವರ ಮಾತುಗಳು ಖಂಡಿತವಾಗಿ ನಿಮ್ಮನ್ನು ದುಃಖಕ್ಕೀಡು ಮಾಡುತ್ತಿವೆಯೆಂದು ನಾವು ಅರಿತಿದ್ದೇವೆ. ವಾಸ್ತವದಲ್ಲಿ ಅವರು ನಿಮ್ಮನ್ನು ಸುಳ್ಳಾಗಿಸುತ್ತಿಲ್ಲ ಈ ಅಕ್ರಮಿಗಳಂತು ಅಲ್ಲಾಹನ ದೃಷ್ಟಾಂತಗಳನ್ನು ಧಿಕ್ಕರಿಸುತ್ತಿದ್ದಾರೆ. info
التفاسير:

external-link copy
34 : 6

وَلَقَدْ كُذِّبَتْ رُسُلٌ مِّنْ قَبْلِكَ فَصَبَرُوْا عَلٰی مَا كُذِّبُوْا وَاُوْذُوْا حَتّٰۤی اَتٰىهُمْ نَصْرُنَا ۚ— وَلَا مُبَدِّلَ لِكَلِمٰتِ اللّٰهِ ۚ— وَلَقَدْ جَآءَكَ مِنْ نَّبَاۡ الْمُرْسَلِیْنَ ۟

ಖಂಡಿತವಾಗಿಯು ನಿಮಗಿಂತ ಮುಂಚೆ ಅದೆಷ್ಟೋ ಸಂದೇಶವಾಹಕರು ಧಿಕ್ಕರಿಸಲ್ಪಟ್ಟಿದ್ದಾರೆ. ಆದರೆ ಅವರು ತಮ್ಮನ್ನು ನಿರಾಕರಿಸಿದ್ದನ್ನು ಹಿಂಸಿಸಲಾಗಿದ್ದನ್ನು ಸಹಿಸಿಕೊಂಡರು. ಕೊನೆಗೆ ನಮ್ಮ ಸಹಾಯವು ಅವರಿಗೆ ತಲುಪಿತು. ಅಲ್ಲಾಹನ ನಿರ್ಣಯಗಳನ್ನು ಬದಲಾಯಿಸುವವನಾರಿಲ್ಲ. ಮತ್ತು ನಿಮ್ಮ ಬಳಿಗೆ ಕೆಲವು ಸಂದೇಶವಾಹಕರ ವೃತ್ತಾಂತಗಳು ತಲುಪಿರುತ್ತವೆ. info
التفاسير:

external-link copy
35 : 6

وَاِنْ كَانَ كَبُرَ عَلَیْكَ اِعْرَاضُهُمْ فَاِنِ اسْتَطَعْتَ اَنْ تَبْتَغِیَ نَفَقًا فِی الْاَرْضِ اَوْ سُلَّمًا فِی السَّمَآءِ فَتَاْتِیَهُمْ بِاٰیَةٍ ؕ— وَلَوْ شَآءَ اللّٰهُ لَجَمَعَهُمْ عَلَی الْهُدٰی فَلَا تَكُوْنَنَّ مِنَ الْجٰهِلِیْنَ ۟

ಮತ್ತು ಅವರ ವಿಮುಖತೆಯು ನಿಮಗೆ ಅಸಹನೀಯವಾಗಿ ತೋರುವುದಾದರೆ ನಿಮಗೆ ಸಾಧ್ಯವಿದ್ದರೆ ಭೂಮಿಯಲ್ಲಿ ಒಂದು ಸುರಂಗವನ್ನು ತೋಡಿರಿ ಅಥವಾ ಆಕಾಶದಲ್ಲಿ ಒಂದು ಏಣಿಯನ್ನು ಹುಡುಕಿ ಅನಂತರ ಅವರಿಗೆ ದೃಷ್ಟಾಂತವೊAದನ್ನು (ಕುರುಹನ್ನು) ತಂದು ಕೊಡಲಿಕ್ಕಾಗುವುದಾದರೆ ಹಾಗೆ ಮಾಡಿರಿ.ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರೆಲ್ಲರನ್ನು ಸನ್ಮಾರ್ಗದಲ್ಲಿ ಒಟ್ಟುಗೂಡಿಸುತ್ತಿದ್ದನು. ಆದುದರಿಂದ ನೀವು ಅವಿವೇಕಿಗಳ ಪೈಕಿ ಸೇರದಿರಿ. info
التفاسير: