ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
82 : 6

اَلَّذِیْنَ اٰمَنُوْا وَلَمْ یَلْبِسُوْۤا اِیْمَانَهُمْ بِظُلْمٍ اُولٰٓىِٕكَ لَهُمُ الْاَمْنُ وَهُمْ مُّهْتَدُوْنَ ۟۠

ಸತ್ಯವಿಶ್ವಾಸವಿಟ್ಟು ಮತ್ತು ತಮ್ಮ ವಿಶ್ವಾಸದಲ್ಲಿ ದೇವ ಸಹಭಾಗಿತ್ವವನ್ನು ಬೆರೆಸದವರಿಗೆ ಸುರಕ್ಷತೆಯಿದೆ. ಮತ್ತು ಅವರೇ ಸನ್ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ. info
التفاسير:

external-link copy
83 : 6

وَتِلْكَ حُجَّتُنَاۤ اٰتَیْنٰهَاۤ اِبْرٰهِیْمَ عَلٰی قَوْمِهٖ ؕ— نَرْفَعُ دَرَجٰتٍ مَّنْ نَّشَآءُ ؕ— اِنَّ رَبَّكَ حَكِیْمٌ عَلِیْمٌ ۟

ಇದು ನಾವು ಇಬ್ರಾಹೀಮರಿಗೆ ಅವರ ಜನತೆಗೆ ವಿರುದ್ಧವಾಗಿ ನೀಡಿದ (ಏಕದೇವತ್ವದ) ನಮ್ಮ ಪುರಾವೆಯಾಗಿದೆ. ನಾವು ಇಚ್ಛಿಸುವವರಿಗೆ ಪದವಿಗಳನ್ನು ಉನ್ನತಗೊಳಿಸುತ್ತೇವೆ. ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಯುಕ್ತಿವಂತನೂ, ಸರ್ವಜ್ಞಾನಿಯೂ ಆಗಿದ್ದಾನೆ. info
التفاسير:

external-link copy
84 : 6

وَوَهَبْنَا لَهٗۤ اِسْحٰقَ وَیَعْقُوْبَ ؕ— كُلًّا هَدَیْنَا ۚ— وَنُوْحًا هَدَیْنَا مِنْ قَبْلُ وَمِنْ ذُرِّیَّتِهٖ دَاوٗدَ وَسُلَیْمٰنَ وَاَیُّوْبَ وَیُوْسُفَ وَمُوْسٰی وَهٰرُوْنَ ؕ— وَكَذٰلِكَ نَجْزِی الْمُحْسِنِیْنَ ۟ۙ

ಮತ್ತು ನಾವು ಅವರಿಗೆ (ಇಬ್ರಾಹೀಮರಿಗೆ) ಇಸ್‌ಹಾಕ್ ಮತ್ತು ಯಾಕೂಬ್(ಪುತ್ರ)ರನ್ನು ನೀಡಿದೆವು. ಪ್ರತಿಯೊಬ್ಬರನ್ನು ಸನ್ಮಾರ್ಗಕ್ಕೆ ಸೇರಿಸಿದೆವು ಮತ್ತು ಅದಕ್ಕೆ ಮೊದಲು ನೂಹ್‌ರನ್ನು ನಾವು ಸನ್ಮಾರ್ಗಕ್ಕೆ ಸೇರಿಸಿದ್ದೆವು ಮತ್ತು ಅವರ ಸಂತತಿಗಳ ಪೈಕಿ ದಾವೂದ್, ಸುಲೈಮಾನ್, ಅಯ್ಯೂಬ್, ಯೂಸೂಫ್, ಮೂಸಾ ಮತ್ತು ಹಾರೂನ್‌ರನ್ನು (ಸನ್ಮಾರ್ಗಕ್ಕೆ ಸೇರಿಸಿದೆವು) ಮತ್ತು ಹೀಗೆ ಸತ್ಕರ್ಮಿಗಳಿಗೆ ನಾವು ಪ್ರತಿಫಲವನ್ನು ನೀಡುತ್ತೇವೆ. info
التفاسير:

external-link copy
85 : 6

وَزَكَرِیَّا وَیَحْیٰی وَعِیْسٰی وَاِلْیَاسَ ؕ— كُلٌّ مِّنَ الصّٰلِحِیْنَ ۟ۙ

ಮತ್ತು ಝಕರಿಯ್ಯ, ಯಹ್ಯಾ, ಈಸಾ, ಇಲ್ಯಾಸ್‌ರನ್ನೂ (ಸನ್ಮಾರ್ಗಕ್ಕೆ ಸೇರಿಸದೆವು) ಅವರೆಲ್ಲರೂ ಸಜ್ಜನರಲ್ಲಾಗಿದ್ದರು. info
التفاسير:

external-link copy
86 : 6

وَاِسْمٰعِیْلَ وَالْیَسَعَ وَیُوْنُسَ وَلُوْطًا ؕ— وَكُلًّا فَضَّلْنَا عَلَی الْعٰلَمِیْنَ ۟ۙ

ಮತ್ತು ಇಸ್ಮಾಯೀಲ್, ಇಸ್‌ಹಾಕ್, ಯೂನುಸ್, ಲೂತ್‌ರನ್ನೂ ಸಹ (ಸನ್ಮಾರ್ಗಕ್ಕೆ ಸೇರಿಸಿದೆವು) ಮತ್ತು ಅವರೆಲ್ಲರಿಗೂ ನಾವು ಸರ್ವಲೋಕದವರ ಮೇಲೆ ಶ್ರೇಷ್ಠತೆಯನ್ನು ನೀಡಿದೆವು. info
التفاسير:

external-link copy
87 : 6

وَمِنْ اٰبَآىِٕهِمْ وَذُرِّیّٰتِهِمْ وَاِخْوَانِهِمْ ۚ— وَاجْتَبَیْنٰهُمْ وَهَدَیْنٰهُمْ اِلٰی صِرَاطٍ مُّسْتَقِیْمٍ ۟

ಮತ್ತು ಅವರ ಕೆಲವು ಪೂರ್ವಿಕರನ್ನೂ, ಕೆಲವು ಸಂತತಿಗಳನ್ನೂ ಹಾಗೂ ಕೆಲವು ಸಹೋದರರನ್ನೂ (ಸನ್ಮಾರ್ಗಕ್ಕೆ ಸೇರಿಸಿದೆವು) ಮತ್ತು ಅವರನ್ನು ನಾವು ಆರಿಸಿಕೊಂಡೆವು ಮತ್ತು ಸತ್ಯಮಾರ್ಗದೆಡೆಗೆ ಮಾರ್ಗದರ್ಶನ ನೀಡಿದೆವು. info
التفاسير:

external-link copy
88 : 6

ذٰلِكَ هُدَی اللّٰهِ یَهْدِیْ بِهٖ مَنْ یَّشَآءُ مِنْ عِبَادِهٖ ؕ— وَلَوْ اَشْرَكُوْا لَحَبِطَ عَنْهُمْ مَّا كَانُوْا یَعْمَلُوْنَ ۟

ಇದು ಅಲ್ಲಾಹನ ಮಾರ್ಗದರ್ಶನವಾಗಿದೆ. ತನ್ಮೂಲಕ ಅವನು ತನ್ನ ದಾಸರ ಪೈಕಿ ತಾನಿಚ್ಛಿಸುವವರನ್ನು ಸತ್ಯ ಮಾರ್ಗದೆಡೆಗೆ ಮುನ್ನಡೆಸುತ್ತಾನೆ. ಇನ್ನು ಅವರು (ಆ ಪೈಗಂಬರರು) ಅಲ್ಲಾಹನಿಗೆ ಸಹಭಾಗಿಗಳನ್ನು ನಿಶ್ಚಯಿಸಿರುತ್ತಿದ್ದರೆ ಅವರ ಕರ್ಮಗಳೆಲ್ಲವೂ ನಿಷ್ಫಲವಾಗಿ ಬಿಡುತ್ತಿದ್ದವು. info
التفاسير:

external-link copy
89 : 6

اُولٰٓىِٕكَ الَّذِیْنَ اٰتَیْنٰهُمُ الْكِتٰبَ وَالْحُكْمَ وَالنُّبُوَّةَ ۚ— فَاِنْ یَّكْفُرْ بِهَا هٰۤؤُلَآءِ فَقَدْ وَكَّلْنَا بِهَا قَوْمًا لَّیْسُوْا بِهَا بِكٰفِرِیْنَ ۟

ನಾವು (ಅಲ್ಲಾಹ್) ಗ್ರಂಥ, ಸುಜ್ಞಾನ ಮತ್ತು ಪ್ರವಾದಿತ್ವವನ್ನು ನೀಡಿದ್ದು ಇವರೇ ಆಗಿದ್ದಾರೆ. ಇನ್ನು ಇವರು (ಬಹುದೇವಾರಾಧಕರು) ಪ್ರವಾದಿತ್ವವನ್ನು ನಿಷೇಧಿಸಿದರೆ ನಾವು ಅದಕ್ಕಾಗಿ ಅವುಗಳನ್ನು ನಿಷೇಧಿಸದಂತಹ ಒಂದು ಜನತೆಯನ್ನು ನಿಶ್ಚಯಿಸಿದ್ದೇವೆ. info
التفاسير:

external-link copy
90 : 6

اُولٰٓىِٕكَ الَّذِیْنَ هَدَی اللّٰهُ فَبِهُدٰىهُمُ اقْتَدِهْ ؕ— قُلْ لَّاۤ اَسْـَٔلُكُمْ عَلَیْهِ اَجْرًا ؕ— اِنْ هُوَ اِلَّا ذِكْرٰی لِلْعٰلَمِیْنَ ۟۠

ಅಲ್ಲಾಹನು ಸನ್ಮಾರ್ಗದಲ್ಲಿ ಸೇರಿಸಿದ್ದು ಇವರನ್ನೇ ಆಗಿದೆ. ಆದ್ದರಿಂದ ನೀವೂ ಇವರ ಮಾರ್ಗವನ್ನೇ ಅನುಸರಿಸಿ. ಮತ್ತು ಹೇಳಿರಿ: ಈ ಸಂದೇಶ ತಲುಪಿಸುವುದಕ್ಕಾಗಿ ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬಯಸುವುದಿಲ್ಲ. ಇದು ಸರ್ವಲೋಕದವರೆಗೆ ಒಂದು ಉಪದೇಶವಾಗಿದೆ. info
التفاسير: