ಮತ್ತು ಸಮುದ್ರದಲ್ಲಿ ಯಾವುದಾದರೂ ಸಂಕಷ್ಟವು ಬಾಧಿಸಿದ ಕೂಡಲೇ ನೀವು ಕರೆದು ಬೇಡುತ್ತಿರುವವರೆಲ್ಲ ಮಾಯವಾಗಿ ಬಿಡುತ್ತಾರೆ. ಕೇವಲ ಆ ಅಲ್ಲಾಹನ ಹೊರತು. ಅನಂತರ ಅವನು ನಿಮ್ಮನ್ನು ದಡ ತಲುಪಿಸಿದಾಗ ನೀವು ವಿಮುಖರಾಗಿ ಬಿಡುತ್ತೀರಿ ಮತ್ತು ಮನುಷ್ಯನು ಮಹಾ ಕೃತಘ್ನನಾಗಿದ್ದಾನೆ.
ಅವನು ನಿಮ್ಮನ್ನು ದಡಕ್ಕೆ ಕೊಂಡಯ್ದು ಹೂತು ಬಿಡುವುದರಿಂದ, ಅಥವಾ ನಿಮ್ಮ ಮೇಲೆ ಕಲ್ಲಿನ ಮಳೆಗೆರೆಯುವ ಚಂಡ ಮಾರುತವನ್ನು ಕಳುಹಿಸಿ ಬಿಡುವುದರಿಂದ ನಿರ್ಭಯರಾಗಿ ಬಿಟ್ಟಿರಾ? ಆಗ ನೀವು ಯಾರನ್ನೂ ಕಾರ್ಯ ಸಾಧಕನನ್ನಾಗಿ ಪಡೆಯಲಾರಿರಿ.
ಅಥವಾ ಪುನಃ ನಿಮ್ಮನ್ನು ಸಮುದ್ರ ಯಾತ್ರೆಗೆ ಮರಳಿಸಿ ನಿಮ್ಮ ಮೇಲೆ ಭೀಕರವಾಗಿರುವ ಬಿರುಗಾಳಿಯೊಂದನ್ನು ಕಳುಹಿಸುವುದರಿಂದ ಮತ್ತು ನಿಮ್ಮ ಸತ್ಯನಿಷೇಧದ ನಿಮಿತ್ತ ನಿಮ್ಮನ್ನು ಮುಳುಗಿಸುವುದರಿಂದ ನಿರ್ಭಯರಾಗಿಬಿಟ್ಟಿರಾ? ಆಗ ನೀವು ನಿಮಗೋಸ್ಕರ ನಮ್ಮ ವಿರುದ್ಧ ವಾದಿಸುವ ಯಾವೊಬ್ಬ ಸಹಾಯಕನನ್ನೂ ಪಡೆಯಲಾರಿರಿ.
ನಿಶ್ಚಯವಾಗಿಯೂ ನಾವು ಆದಮನ ಸಂತತಿಗೆ ಗೌರವವನ್ನು ನೀಡಿದ್ದೇವೆ ಮತ್ತು ಅವರಿಗೆ ನಾವು ನೆಲದಲ್ಲೂ, ಸಮುದ್ರದಲ್ಲೂ ಸಾರಿಗೆಗಳನ್ನು ನೀಡಿರುತ್ತೇವೆ ಮತ್ತು ಅವರಿಗೆ ಶುದ್ಧ ವಸ್ತುಗಳಿಂದ ಆಹಾರವನ್ನು ನೀಡಿರುವೆವು ಹಾಗೂ ನಾವು ನಮ್ಮ ಅನೇಕ ಸೃಷ್ಟಿಗಳಿಗಿಂತ ಅವರಿಗೆ ಶ್ರೇಷ್ಠತೆಯನ್ನು ದಯಪಾಲಿಸಿರುತ್ತೇವೆ.
ಅಂದು ನಾವು ಪ್ರತಿಯೊಂದು ಜನಕೂಟವನ್ನು ಅವರವರ ನಾಯಕರೊಂದಿಗೆ ಕರೆಯುವೆವು. ಅನಂತರ ಯಾರ ಕರ್ಮಪತ್ರವು ಬಲಗೈಯಲ್ಲಿ ನೀಡಲಾಗುತ್ತದೆಯೋ ಅವರು ತಮ್ಮ ಕರ್ಮಪತ್ರವನ್ನು ಆಸಕ್ತಿಯಿಂದ ಓದುವರು ಮತ್ತು ಅವರು ಕೂದಲೆಳೆಯಷ್ಟೂ ಅನ್ಯಾಯಕ್ಕೊಳಗಾಗಲಾರರು.
(ಏಕೆಂದರೆ) ನೀವು ನಮ್ಮ ಹೆಸರಲ್ಲಿ ಇದರ ಹೊರತು ಬೇರೊಂದನ್ನು ರಚಿಸಿ ತರಲೆಂದು. ನಾವು ನಿಮ್ಮೆಡೆಗೆ ಮಾಡಿರುವ ದಿವ್ಯವಾಣಿಯಿಂದ (ಈ ಸತ್ಯನಿಷೇಧಿಗಳು) ಅವರು ನಿಮ್ಮನ್ನು ಸರಿಸಿ ಬಿಡಲಿಚ್ಛಿಸುತ್ತಾರೆ. ಓ ಸಂದೇಶವಾಹಕರೇ ಆಗಂತು ಅವರು ನಿಮ್ಮನ್ನು ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದರು.
ಹಾಗೇನದರೂ ನೀವು ಮಾಡಿರುತ್ತಿದ್ದರೆ ನಾವು ನಿಮಗೆ ಇಹಲೋಕ ಜೀವನದ ಇಮ್ಮಡಿ ಶಿಕ್ಷೆಯನ್ನು ಹಾಗೂ ಮರಣದ ಇಮ್ಮಡಿ ಶಿಕ್ಷೆಯನ್ನು ನೀಡುತ್ತಿದ್ದೆವು. ಅನಂತರ ನೀವು ನಿಮಗಾಗಿ ನಮ್ಮ ವಿರುದ್ಧ ಯಾರನ್ನು ಸಹಾಯಕನನ್ನಾಗಿ ಪಡೆಯುತ್ತಿರಲಿಲ್ಲ.