ಅಥವಾ ನಿಮಗಾಗಿ ಚಿನ್ನದ ಮನೆಯೊಂದು ಉಂಟಾಗಲಿ. ಇಲ್ಲವೇ ನೀವು ಆಕಾಶಕ್ಕೆ ಏರಿ ಹೋಗಬೇಕು ಮತ್ತು ನೀವು ನಮ್ಮ ಮೇಲೆ ನಾವು ಓದುವಂತಹ ಒಂದು ಗ್ರಂಥವನ್ನು ಇಳಿಸಿ ತರುವವರೆಗೂ ನಾವು ನಿಮ್ಮ ಏರುವಿಕೆಯನ್ನು ಖಂಡಿತ ನಂಬಲಾರೆವು. ನೀವು ಹೇಳಿರಿ: ನನ್ನ ಪ್ರಭು ಅದೆಷ್ಟು ಪರಮ ಪಾವನನು! ನಾನು ಸಂದೇಶವಾಹಕನಾದ ಕೇವಲ ಒಬ್ಬ ಮನುಷ್ಯ ಮಾತ್ರ ಆಗಿದ್ದಾನೆ.
ಜನರ ಬಳಿ ಸನ್ಮಾರ್ಗವು ತಲುಪಿದಾಗ ಅದರ ಮೇಲೆ ವಿಶ್ವಾಸವಿರಿಸದಂತೆ ತಡೆಯುತ್ತಿದ್ದುದು “ಅಲ್ಲಾಹನು ಒಬ್ಬ ಮನುಷ್ಯನನ್ನು ಸಂದೇಶವಾಹಕನಾಗಿ ಕಳುಹಿಸಿದ್ದಾನೆ? ಎಂಬ ಅವರ ಮಾತು ಮಾತ್ರವಾಗಿತ್ತು.