Përkthimi i kuptimeve të Kuranit Fisnik - Përkthimi kanadezisht - Hamza Betur

Numri i faqes:close

external-link copy
152 : 6

وَلَا تَقْرَبُوْا مَالَ الْیَتِیْمِ اِلَّا بِالَّتِیْ هِیَ اَحْسَنُ حَتّٰی یَبْلُغَ اَشُدَّهٗ ۚ— وَاَوْفُوا الْكَیْلَ وَالْمِیْزَانَ بِالْقِسْطِ ۚ— لَا نُكَلِّفُ نَفْسًا اِلَّا وُسْعَهَا ۚ— وَاِذَا قُلْتُمْ فَاعْدِلُوْا وَلَوْ كَانَ ذَا قُرْبٰی ۚ— وَبِعَهْدِ اللّٰهِ اَوْفُوْا ؕ— ذٰلِكُمْ وَصّٰىكُمْ بِهٖ لَعَلَّكُمْ تَذَكَّرُوْنَ ۟ۙ

ಒಳಿತು ಮಾಡುವ ಉದ್ದೇಶದಿಂದಲೇ ಹೊರತು ನೀವು ಅನಾಥರ ಆಸ್ತಿಯನ್ನು ಮುಟ್ಟಬೇಡಿ. ಅವರು ಪ್ರೌಢರಾಗುವ ತನಕ (ಅವರ ಸಂರಕ್ಷಣೆಯನ್ನು ವಹಿಸಿಕೊಳ್ಳಿ). ಅಳತೆ ಮತ್ತು ತೂಕ ಮಾಡುವಾಗ ಪೂರ್ಣವಾಗಿ ಮತ್ತು ನ್ಯಾಯಬದ್ಧವಾಗಿ ಮಾಡಿರಿ. ಒಬ್ಬ ವ್ಯಕ್ತಿಯ ಮೇಲೆ ಅವನ ಸಾಮರ್ಥ್ಯಕ್ಕಿಂತ ಮಿಗಿಲಾಗಿರುವುದನ್ನು ನಾವು ಹೊರಿಸುವುದಿಲ್ಲ. ಮಾತನಾಡುವಾಗ (ಸಾಕ್ಷಿ ನುಡಿಯುವಾಗ) ನ್ಯಾಯದಿಂದ ಮಾತನಾಡಿರಿ. ಅದು ನಿಕಟ ಸಂಬಂಧಿಕನಿಗೆ ಸಂಬಂಧಿಸಿದ ವಿಷಯವಾದರೂ ಸಹ. ಅಲ್ಲಾಹನ ಕರಾರನ್ನು ನೆರವೇರಿಸಿ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ನೆನಪಿಟ್ಟುಕೊಳ್ಳುವುದಕ್ಕಾಗಿ. info
التفاسير:

external-link copy
153 : 6

وَاَنَّ هٰذَا صِرَاطِیْ مُسْتَقِیْمًا فَاتَّبِعُوْهُ ۚ— وَلَا تَتَّبِعُوا السُّبُلَ فَتَفَرَّقَ بِكُمْ عَنْ سَبِیْلِهٖ ؕ— ذٰلِكُمْ وَصّٰىكُمْ بِهٖ لَعَلَّكُمْ تَتَّقُوْنَ ۟

ನಿಶ್ಚಯವಾಗಿಯೂ ಇದು ನನ್ನ ನೇರ ಮಾರ್ಗವಾಗಿದೆ. ಆದ್ದರಿಂದ ಈ ಮಾರ್ಗದಲ್ಲಿ ನಡೆಯಿರಿ. ಇತರ ಮಾರ್ಗಗಳಲ್ಲಿ ನಡೆಯಬೇಡಿ. ಅವು ನಿಮ್ಮನ್ನು ಅವನ ಮಾರ್ಗದಿಂದ ಬೇರ್ಪಡಿಸುತ್ತವೆ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ದೇವಭಯವುಳ್ಳವರಾಗುವುದಕ್ಕಾಗಿ. info
التفاسير:

external-link copy
154 : 6

ثُمَّ اٰتَیْنَا مُوْسَی الْكِتٰبَ تَمَامًا عَلَی الَّذِیْۤ اَحْسَنَ وَتَفْصِیْلًا لِّكُلِّ شَیْءٍ وَّهُدًی وَّرَحْمَةً لَّعَلَّهُمْ بِلِقَآءِ رَبِّهِمْ یُؤْمِنُوْنَ ۟۠

ಒಳಿತು ಮಾಡುವವರಿಗೆ ಅನುಗ್ರಹದ ಪೂರ್ತೀಕರಣವಾಗಿ, ಮತ್ತು ಎಲ್ಲಾ ವಿಷಯಗಳ ವಿವರಣೆಯಾಗಿ ನಾವು ಮೂಸಾರಿಗೆ ಗ್ರಂಥವನ್ನು ದಯಪಾಲಿಸಿದೆವು. ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವುದರಲ್ಲಿ ವಿಶ್ವಾಸವಿಡುವುದಕ್ಕಾಗಿ. info
التفاسير:

external-link copy
155 : 6

وَهٰذَا كِتٰبٌ اَنْزَلْنٰهُ مُبٰرَكٌ فَاتَّبِعُوْهُ وَاتَّقُوْا لَعَلَّكُمْ تُرْحَمُوْنَ ۟ۙ

ಇದು ನಾವು ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಗ್ರಂಥವಾಗಿದೆ. ಆದ್ದರಿಂದ ಇದನ್ನು ಅನುಸರಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಮಗೆ ದಯೆ ತೋರಲಾಗುವುದಕ್ಕಾಗಿ. info
التفاسير:

external-link copy
156 : 6

اَنْ تَقُوْلُوْۤا اِنَّمَاۤ اُنْزِلَ الْكِتٰبُ عَلٰی طَآىِٕفَتَیْنِ مِنْ قَبْلِنَا ۪— وَاِنْ كُنَّا عَنْ دِرَاسَتِهِمْ لَغٰفِلِیْنَ ۟ۙ

"ನಮಗಿಂತ ಮೊದಲಿನ ಎರಡು ಸಮುದಾಯಗಳಿಗೆ ಮಾತ್ರ ಗ್ರಂಥವು ಅವತೀರ್ಣವಾಗಿದೆ; ಅವರು ಮಾಡುತ್ತಿದ್ದ ಅಧ್ಯಯನದ ಬಗ್ಗೆ ನಮಗೇನೂ ತಿಳಿದಿರಲಿಲ್ಲ” ಎಂದು ನೀವು ಹೇಳಬಾರದೆಂದು (ಈ ಗ್ರಂಥವನ್ನು ಅವತೀರ್ಣಗೊಳಿಸಲಾಗಿದೆ). info
التفاسير:

external-link copy
157 : 6

اَوْ تَقُوْلُوْا لَوْ اَنَّاۤ اُنْزِلَ عَلَیْنَا الْكِتٰبُ لَكُنَّاۤ اَهْدٰی مِنْهُمْ ۚ— فَقَدْ جَآءَكُمْ بَیِّنَةٌ مِّنْ رَّبِّكُمْ وَهُدًی وَّرَحْمَةٌ ۚ— فَمَنْ اَظْلَمُ مِمَّنْ كَذَّبَ بِاٰیٰتِ اللّٰهِ وَصَدَفَ عَنْهَا ؕ— سَنَجْزِی الَّذِیْنَ یَصْدِفُوْنَ عَنْ اٰیٰتِنَا سُوْٓءَ الْعَذَابِ بِمَا كَانُوْا یَصْدِفُوْنَ ۟

ಅಥವಾ, “ನಮಗೊಂದು ಗ್ರಂಥವು ಅವತೀರ್ಣವಾಗುತ್ತಿದ್ದರೆ ನಾವು ಅವರಿಗಿಂತಲೂ ಹೆಚ್ಚು ಸನ್ಮಾರ್ಗ ಪಡೆಯುತ್ತಿದ್ದೆವು” ಎಂದು ನೀವು ಹೇಳಬಾರದೆಂದು (ಈ ಗ್ರಂಥವನ್ನು ಅವತೀರ್ಣಗೊಳಿಸಲಾಗಿದೆ). ಈಗ ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರ, ಮಾರ್ಗದರ್ಶನ ಮತ್ತು ದಯೆಯು ಬಂದಿದೆ. ಇದರ ಬಳಿಕವೂ ಅಲ್ಲಾಹನ ವಚನಗಳನ್ನು ನಿಷೇಧಿಸುವವನಿಗಿಂತ ಮತ್ತು ಅದರಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಯಾರು? ನಮ್ಮ ವಚನಗಳಿಂದ ವಿಮುಖರಾಗುವವರು ಯಾರೋ—ಅವರು ವಿಮುಖರಾದ ಕಾರಣ ನಾವು ಅವರಿಗೆ ಅತಿ ಹೀನ ಶಿಕ್ಷೆಯನ್ನು ನೀಡುವೆವು. info
التفاسير: