Përkthimi i kuptimeve të Kuranit Fisnik - Përkthimi kanadezisht - Hamza Betur

Numri i faqes:close

external-link copy
95 : 6

اِنَّ اللّٰهَ فَالِقُ الْحَبِّ وَالنَّوٰی ؕ— یُخْرِجُ الْحَیَّ مِنَ الْمَیِّتِ وَمُخْرِجُ الْمَیِّتِ مِنَ الْحَیِّ ؕ— ذٰلِكُمُ اللّٰهُ فَاَنّٰی تُؤْفَكُوْنَ ۟

ನಿಶ್ಚಯವಾಗಿಯೂ ಅಲ್ಲಾಹು ಧಾನ್ಯವನ್ನು ಮತ್ತು ಖರ್ಜೂರದ ಬೀಜವನ್ನು ಸೀಳುತ್ತಾನೆ. ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುತ್ತಾನೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುತ್ತಾನೆ. ಅವನೇ ಅಲ್ಲಾಹು. ಹೀಗಿದ್ದೂ ನೀವು ದಾರಿತಪ್ಪುತ್ತಿರುವುದು ಹೇಗೆ? info
التفاسير:

external-link copy
96 : 6

فَالِقُ الْاِصْبَاحِ ۚ— وَجَعَلَ الَّیْلَ سَكَنًا وَّالشَّمْسَ وَالْقَمَرَ حُسْبَانًا ؕ— ذٰلِكَ تَقْدِیْرُ الْعَزِیْزِ الْعَلِیْمِ ۟

ಅವನು ಪ್ರಭಾತವನ್ನು ಸೀಳುತ್ತಾನೆ. ಅವನು ರಾತ್ರಿಯನ್ನು ವಿಶ್ರಾಂತಿಯನ್ನಾಗಿ ಮಾಡಿದ್ದಾನೆ ಮತ್ತು ಸೂರ್ಯ-ಚಂದ್ರರನ್ನು ಕಾಲಗಣನೆಗೆ ಆಧಾರವಾಗಿ ಮಾಡಿದ್ದಾನೆ ಇದು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ನಿರ್ಣಯವಾಗಿದೆ. info
التفاسير:

external-link copy
97 : 6

وَهُوَ الَّذِیْ جَعَلَ لَكُمُ النُّجُوْمَ لِتَهْتَدُوْا بِهَا فِیْ ظُلُمٰتِ الْبَرِّ وَالْبَحْرِ ؕ— قَدْ فَصَّلْنَا الْاٰیٰتِ لِقَوْمٍ یَّعْلَمُوْنَ ۟

ನೆಲ ಮತ್ತು ಕಡಲಿನ ಗಾಢಾಂಧಕಾರದಲ್ಲಿ ನೀವು ದಾರಿಯನ್ನು ಕಾಣಲು ಅವನು ನಕ್ಷತ್ರಗಳನ್ನು ಉಂಟು ಮಾಡಿದನು. ತಿಳಿಯುವ ಜನರಿಗಾಗಿ ನಾವು ನಮ್ಮ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ. info
التفاسير:

external-link copy
98 : 6

وَهُوَ الَّذِیْۤ اَنْشَاَكُمْ مِّنْ نَّفْسٍ وَّاحِدَةٍ فَمُسْتَقَرٌّ وَّمُسْتَوْدَعٌ ؕ— قَدْ فَصَّلْنَا الْاٰیٰتِ لِقَوْمٍ یَّفْقَهُوْنَ ۟

ನಿಮ್ಮನ್ನು ಒಂದೇ ಆತ್ಮದಿಂದ ಸೃಷ್ಟಿಸಿದವನು ಅವನೇ. ನಂತರ ಅವನು ಒಂದು ವಾಸ್ತವ್ಯ ಮತ್ತು ಸಂಗ್ರಹ ಸ್ಥಳವನ್ನು[1] ಮಾಡಿದನು ಅರ್ಥಮಾಡಿಕೊಳ್ಳುವ ಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ. info

[1] ವಾಸ್ತವ್ಯ ಎಂದರೆ ಗರ್ಭಾಶಯ ಮತ್ತು ಸಂಗ್ರಹ ಸ್ಥಳವೆಂದರೆ ಪುರುಷರ ಬೆನ್ನೆಲುಬು.

التفاسير:

external-link copy
99 : 6

وَهُوَ الَّذِیْۤ اَنْزَلَ مِنَ السَّمَآءِ مَآءً ۚ— فَاَخْرَجْنَا بِهٖ نَبَاتَ كُلِّ شَیْءٍ فَاَخْرَجْنَا مِنْهُ خَضِرًا نُّخْرِجُ مِنْهُ حَبًّا مُّتَرَاكِبًا ۚ— وَمِنَ النَّخْلِ مِنْ طَلْعِهَا قِنْوَانٌ دَانِیَةٌ ۙ— وَّجَنّٰتٍ مِّنْ اَعْنَابٍ وَّالزَّیْتُوْنَ وَالرُّمَّانَ مُشْتَبِهًا وَّغَیْرَ مُتَشَابِهٍ ؕ— اُنْظُرُوْۤا اِلٰی ثَمَرِهٖۤ اِذَاۤ اَثْمَرَ وَیَنْعِهٖ ؕ— اِنَّ فِیْ ذٰلِكُمْ لَاٰیٰتٍ لِّقَوْمٍ یُّؤْمِنُوْنَ ۟

ಆಕಾಶದಿಂದ ಮಳೆ ಸುರಿಸುವವನು ಅವನೇ. ನಂತರ ನಾವು ಅದರಿಂದ ಎಲ್ಲಾ ರೀತಿಯ ಬೆಳೆಗಳನ್ನು ಉತ್ಪಾದಿಸಿದೆವು. ನಾವು ಅದರಿಂದ ಹಸಿರು ಸಸ್ಯಗಳನ್ನು ಉತ್ಪಾದಿಸಿದೆವು. ಆ ಸಸ್ಯಗಳಿಂದ ನಾವು ತುಂಬಿ ತುಳುಕುವ ಧಾನ್ಯಗಳನ್ನು ಉತ್ಪಾದಿಸುತ್ತೇವೆ. ಖರ್ಜೂರದ ಮರದಿಂದ ಅಥವಾ ಅದರ ಮೊಗ್ಗುಗಳಿಂದ ತೂಗು ಹಾಕಲಾದ ಗೊಂಚಲುಗಳು ಹೊರಹೊಮ್ಮುತ್ತವೆ. ನಾವು ದ್ರಾಕ್ಷಿ ತೋಟಗಳನ್ನು ಮತ್ತು ಪರಸ್ಪರ ಹೋಲಿಕೆಯಿದ್ದರೂ ವಿಭಿನ್ನವಾಗಿರುವ ಆಲಿವ್ ಮತ್ತು ದಾಳಿಂಬೆಯನ್ನು ಉತ್ಪಾದಿಸಿದೆವು. ಅವು ಕಾಯಿಬಿಡುವಾಗ ಮತ್ತು ಹಣ್ಣಾಗುವಾಗ ಅವುಗಳನ್ನು ನೋಡಿರಿ. ವಿಶ್ವಾಸವಿಡುವ ಜನರಿಗೆ ನಿಶ್ಚಯವಾಗಿಯೂ ಇದರಲ್ಲಿ ದೃಷ್ಟಾಂತಗಳಿವೆ. info
التفاسير:

external-link copy
100 : 6

وَجَعَلُوْا لِلّٰهِ شُرَكَآءَ الْجِنَّ وَخَلَقَهُمْ وَخَرَقُوْا لَهٗ بَنِیْنَ وَبَنٰتٍ بِغَیْرِ عِلْمٍ ؕ— سُبْحٰنَهٗ وَتَعٰلٰی عَمَّا یَصِفُوْنَ ۟۠

ಅವರು ಜಿನ್ನ್‌ಗಳನ್ನು ಅಲ್ಲಾಹನಿಗೆ ಸಹಭಾಗಿಗಳಾಗಿ ಮಾಡಿದರು. ಆದರೆ ವಾಸ್ತವವಾಗಿ ಅವರನ್ನು ಸೃಷ್ಟಿಸಿದ್ದು ಅವನೇ. ಅವರು ಯಾವುದೇ ಜ್ಞಾನವಿಲ್ಲದೆ ಅಲ್ಲಾಹನಿಗೆ ಗಂಡು ಮತ್ತು ಹೆಣ್ಣುಮಕ್ಕಳಿದ್ದಾರೆಂದು ಆರೋಪಿಸಿದರು. ಅವರ ಈ ವರ್ಣನೆಗಳಿಗಿಂತ ಅಲ್ಲಾಹು ಎಷ್ಟೋ ಪರಿಶುದ್ಧನು ಮತ್ತು ಉನ್ನತನಾಗಿದ್ದಾನೆ. info
التفاسير:

external-link copy
101 : 6

بَدِیْعُ السَّمٰوٰتِ وَالْاَرْضِ ؕ— اَنّٰی یَكُوْنُ لَهٗ وَلَدٌ وَّلَمْ تَكُنْ لَّهٗ صَاحِبَةٌ ؕ— وَخَلَقَ كُلَّ شَیْءٍ ۚ— وَهُوَ بِكُلِّ شَیْءٍ عَلِیْمٌ ۟

ಅವನು ಪೂರ್ವ ಮಾದರಿಯಿಲ್ಲದೆ ಭೂಮ್ಯಾಕಾಶಗಳನ್ನು ಸೃಷ್ಟಿಸಿದವನು. ಅವನಿಗೆ ಹೆಂಡತಿಯೇ ಇಲ್ಲದಿರುವಾಗ ಮಕ್ಕಳಿರುವುದು ಹೇಗೆ? ಅವನು ಎಲ್ಲಾ ವಸ್ತುಗಳನ್ನು ಸೃಷ್ಟಿಸಿದನು. ಅವನು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ. info
التفاسير: