Përkthimi i kuptimeve të Kuranit Fisnik - Përkthimi kanadezisht - Hamza Betur

Numri i faqes:close

external-link copy
125 : 6

فَمَنْ یُّرِدِ اللّٰهُ اَنْ یَّهْدِیَهٗ یَشْرَحْ صَدْرَهٗ لِلْاِسْلَامِ ۚ— وَمَنْ یُّرِدْ اَنْ یُّضِلَّهٗ یَجْعَلْ صَدْرَهٗ ضَیِّقًا حَرَجًا كَاَنَّمَا یَصَّعَّدُ فِی السَّمَآءِ ؕ— كَذٰلِكَ یَجْعَلُ اللّٰهُ الرِّجْسَ عَلَی الَّذِیْنَ لَا یُؤْمِنُوْنَ ۟

ಯಾರಿಗೆ ಸನ್ಮಾರ್ಗ ತೋರಿಸಬೇಕೆಂದು ಅಲ್ಲಾಹು ಬಯಸುತ್ತಾನೋ ಅವನ ಹೃದಯವನ್ನು ಇಸ್ಲಾಮಿಗಾಗಿ ತೆರೆದುಕೊಡುತ್ತಾನೆ. ಯಾರನ್ನು ದಾರಿತಪ್ಪಿಸಬೇಕೆಂದು ಅಲ್ಲಾಹು ಬಯಸುತ್ತಾನೋ ಅವನ ಹೃದಯವನ್ನು ಬಿಗಿಯಾಗಿ ಮತ್ತು ಇಕ್ಕಟ್ಟಾಗಿ ಮಾಡುತ್ತಾನೆ. ಅವನು ಆಕಾಶಕ್ಕೆ ಏರಿ ಹೋಗುತ್ತಿದ್ದಾನೋ ಎಂಬಂತೆ! ಈ ರೀತಿ ಅಲ್ಲಾಹು ವಿಶ್ವಾಸವಿಡದವರ ಮೇಲೆ ಶಿಕ್ಷೆಯನ್ನು ಹಾಕುತ್ತಾನೆ. info
التفاسير:

external-link copy
126 : 6

وَهٰذَا صِرَاطُ رَبِّكَ مُسْتَقِیْمًا ؕ— قَدْ فَصَّلْنَا الْاٰیٰتِ لِقَوْمٍ یَّذَّكَّرُوْنَ ۟

ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ನೇರಮಾರ್ಗವಾಗಿದೆ. ಉಪದೇಶ ಸ್ವೀಕರಿಸುವ ಜನರಿಗೆ ನಾವು ಈಗಾಗಲೇ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ. info
التفاسير:

external-link copy
127 : 6

لَهُمْ دَارُ السَّلٰمِ عِنْدَ رَبِّهِمْ وَهُوَ وَلِیُّهُمْ بِمَا كَانُوْا یَعْمَلُوْنَ ۟

ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಶಾಂತಿಯ ಭವನವಿದೆ (ಸ್ವರ್ಗವಿದೆ). ಅವರು ಮಾಡುತ್ತಿರುವ ಕರ್ಮಗಳ ಕಾರಣದಿಂದ ಅವನು ಅವರ ಮಿತ್ರನಾಗಿದ್ದಾನೆ. info
التفاسير:

external-link copy
128 : 6

وَیَوْمَ یَحْشُرُهُمْ جَمِیْعًا ۚ— یٰمَعْشَرَ الْجِنِّ قَدِ اسْتَكْثَرْتُمْ مِّنَ الْاِنْسِ ۚ— وَقَالَ اَوْلِیٰٓؤُهُمْ مِّنَ الْاِنْسِ رَبَّنَا اسْتَمْتَعَ بَعْضُنَا بِبَعْضٍ وَّبَلَغْنَاۤ اَجَلَنَا الَّذِیْۤ اَجَّلْتَ لَنَا ؕ— قَالَ النَّارُ مَثْوٰىكُمْ خٰلِدِیْنَ فِیْهَاۤ اِلَّا مَا شَآءَ اللّٰهُ ؕ— اِنَّ رَبَّكَ حَكِیْمٌ عَلِیْمٌ ۟

ಅವನು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. (ಅವನು ಹೇಳುವನು): “ಓ ಜಿನ್ನ್‌ಗಳೇ! ನೀವು ಮನುಷ್ಯರಲ್ಲಿ ಬಹುಸಂಖ್ಯಾತರನ್ನು ದಾರಿ ತಪ್ಪಿಸಿದ್ದೀರಿ.” ಮನುಷ್ಯರಲ್ಲಿ ಸೇರಿದ ಅವರ ಆಪ್ತಮಿತ್ರರು ಹೇಳುವರು: “ಓ ನಮ್ಮ ಪರಿಪಾಲಕನೇ! ನಮ್ಮಲ್ಲಿ ಕೆಲವರು ಇತರ ಕೆಲವರಿಂದ ಪ್ರಯೋಜನ ಪಡೆದರು. ಹೀಗೆ ನೀನು ನಮಗೆ ನಿಶ್ಚಯಿಸಿದ ಜೀವಿತಾವಧಿಯನ್ನು ನಾವು ತಲುಪಿದೆವು.” ಅಲ್ಲಾಹು ಹೇಳುವನು: “ನರಕಾಗ್ನಿಯೇ ನಿಮ್ಮ ವಾಸಸ್ಥಳ! ನೀವು ಅದರಲ್ಲಿ ಶಾಶ್ವತವಾಗಿ ವಾಸಿಸುವಿರಿ. ಅಲ್ಲಾಹು ಏನು ಇಚ್ಛಿಸುತ್ತಾನೋ ಅದರ ಹೊರತು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.” info
التفاسير:

external-link copy
129 : 6

وَكَذٰلِكَ نُوَلِّیْ بَعْضَ الظّٰلِمِیْنَ بَعْضًا بِمَا كَانُوْا یَكْسِبُوْنَ ۟۠

ಈ ರೀತಿ ನಾವು ಅಕ್ರಮಿಗಳನ್ನು ಪರಸ್ಪರ ಆಪ್ತರನ್ನಾಗಿ ಮಾಡುವೆವು. ಅವರು ಮಾಡುತ್ತಿರುವ ದುಷ್ಕರ್ಮಗಳ ಕಾರಣದಿಂದ. info
التفاسير:

external-link copy
130 : 6

یٰمَعْشَرَ الْجِنِّ وَالْاِنْسِ اَلَمْ یَاْتِكُمْ رُسُلٌ مِّنْكُمْ یَقُصُّوْنَ عَلَیْكُمْ اٰیٰتِیْ وَیُنْذِرُوْنَكُمْ لِقَآءَ یَوْمِكُمْ هٰذَا ؕ— قَالُوْا شَهِدْنَا عَلٰۤی اَنْفُسِنَا وَغَرَّتْهُمُ الْحَیٰوةُ الدُّنْیَا وَشَهِدُوْا عَلٰۤی اَنْفُسِهِمْ اَنَّهُمْ كَانُوْا كٰفِرِیْنَ ۟

“ಓ ಜಿನ್ನ್ ಮತ್ತು ಮನುಷ್ಯರೇ! ನಿಮಗೆ ನನ್ನ ವಚನಗಳನ್ನು ವಿವರಿಸಿಕೊಡುವ ಮತ್ತು ನಿಮ್ಮ ಈ ದಿನದ ಭೇಟಿಯ ಬಗ್ಗೆ ನಿಮಗೆ ಎಚ್ಚರಿಕೆ ನೀಡುವ ಸಂದೇಶವಾಹಕರು ನಿಮ್ಮಿಂದಲೇ ನಿಮ್ಮ ಬಳಿಗೆ ಬಂದಿಲ್ಲವೇ?” ಅವರು ಉತ್ತರಿಸುವರು: “ನಾವು ನಮ್ಮ ವಿರುದ್ಧವೇ ಸಾಕ್ಷಿಗಳಾಗಿದ್ದೇವೆ.” ಇಹಲೋಕ ಜೀವನವು ಅವರನ್ನು ಮರುಳುಗೊಳಿಸಿದೆ. ಅವರು ಸತ್ಯನಿಷೇಧಿಗಳಾಗಿದ್ದರು ಎಂದು ಅವರೇ ಅವರ ವಿರುದ್ಧ ಸಾಕ್ಷಿ ಹೇಳಿದ್ದಾರೆ. info
التفاسير: