[1] ಅಂದರೆ ನಾನು ನಿಮ್ಮಂತಹ ಒಬ್ಬ ಮನುಷ್ಯ. ನೀವು ಹೇಳುವ ಈ ಕಾರ್ಯಗಳನ್ನು ಮಾಡಲು ಮನುಷ್ಯನಿಗೆ ಸಾಧ್ಯವಿಲ್ಲ. ಆದ್ದರಿಂದ ಇವೆಲ್ಲವನ್ನೂ ಮಾಡಿ ತೋರಿಸಬೇಕೆಂದು ನೀವು ನನ್ನೊಡನೆ ಕೇಳುವುದರಲ್ಲಿ ಅರ್ಥವಿಲ್ಲ. ನಾನು ಅಲ್ಲಾಹನ ಸಂದೇಶವಾಹಕನಾಗಿದ್ದೇನೆ. ಅವನ ಸಂದೇಶಗಳನ್ನು ನಿಮಗೆ ತಲುಪಿಸಿಕೊಡುವುದು ಮಾತ್ರ ನನ್ನ ಕೆಲಸ. ನೀವು ಕೇಳುವಾಗಲೆಲ್ಲಾ ಪವಾಡಗಳನ್ನು ತೋರಿಸುವುದು ನನ್ನ ಕೆಲಸವಲ್ಲ. ಆದರೆ ಅಲ್ಲಾಹು ನನ್ನ ಮೂಲಕ ಪವಾಡ ತೋರಿಸಲು ಬಯಸಿದರೆ ನಾನು ಪವಾಡವನ್ನು ತೋರಿಸಬಲ್ಲೆ.