ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
8 : 17

عَسٰی رَبُّكُمْ اَنْ یَّرْحَمَكُمْ ۚ— وَاِنْ عُدْتُّمْ عُدْنَا ۘ— وَجَعَلْنَا جَهَنَّمَ لِلْكٰفِرِیْنَ حَصِیْرًا ۟

ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ದಯೆ ತೋರಲೂಬಹುದು. ನೀವು ಅದನ್ನೇ ಪುನರಾವರ್ತಿಸಿದರೆ ನಾವು ಕೂಡ ಪುನರಾವರ್ತಿಸುವೆವು. ನಾವು ಸತ್ಯನಿಷೇಧಿಗಳಿಗೆ ನರಕಾಗ್ನಿಯನ್ನು ಕಾರಾಗೃಹವನ್ನಾಗಿ ಮಾಡಿದ್ದೇವೆ. info
التفاسير:

external-link copy
9 : 17

اِنَّ هٰذَا الْقُرْاٰنَ یَهْدِیْ لِلَّتِیْ هِیَ اَقْوَمُ وَیُبَشِّرُ الْمُؤْمِنِیْنَ الَّذِیْنَ یَعْمَلُوْنَ الصّٰلِحٰتِ اَنَّ لَهُمْ اَجْرًا كَبِیْرًا ۟ۙ

ನಿಶ್ಚಯವಾಗಿಯೂ, ಈ ಕುರ್‌ಆನ್ ಅತ್ಯಂತ ನೇರವಾದ ಮಾರ್ಗವನ್ನು ತೋರಿಸುತ್ತದೆ ಮತ್ತು ಸತ್ಕರ್ಮಗಳನ್ನು ಮಾಡುವ ಸತ್ಯವಿಶ್ವಾಸಿಗಳಿಗೆ ಮಹಾ ಪ್ರತಿಫಲವಿದೆಯೆಂಬ ಸುವಾರ್ತೆಯನ್ನು ನೀಡುತ್ತದೆ. info
التفاسير:

external-link copy
10 : 17

وَّاَنَّ الَّذِیْنَ لَا یُؤْمِنُوْنَ بِالْاٰخِرَةِ اَعْتَدْنَا لَهُمْ عَذَابًا اَلِیْمًا ۟۠

ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ—ಅವರಿಗೆ ನಾವು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ. info
التفاسير:

external-link copy
11 : 17

وَیَدْعُ الْاِنْسَانُ بِالشَّرِّ دُعَآءَهٗ بِالْخَیْرِ ؕ— وَكَانَ الْاِنْسَانُ عَجُوْلًا ۟

ಮಾನವನು ಒಳಿತಿಗಾಗಿ ಪ್ರಾರ್ಥಿಸುವಂತೆಯೇ ಕೆಡುಕಿಗಾಗಿಯೂ ಪ್ರಾರ್ಥಿಸುತ್ತಾನೆ. ಮಾನವನು ಬಹಳ ಆತುರ ಜೀವಿಯಾಗಿದ್ದಾನೆ. info
التفاسير:

external-link copy
12 : 17

وَجَعَلْنَا الَّیْلَ وَالنَّهَارَ اٰیَتَیْنِ فَمَحَوْنَاۤ اٰیَةَ الَّیْلِ وَجَعَلْنَاۤ اٰیَةَ النَّهَارِ مُبْصِرَةً لِّتَبْتَغُوْا فَضْلًا مِّنْ رَّبِّكُمْ وَلِتَعْلَمُوْا عَدَدَ السِّنِیْنَ وَالْحِسَابَ ؕ— وَكُلَّ شَیْءٍ فَصَّلْنٰهُ تَفْصِیْلًا ۟

ನಾವು ರಾತ್ರಿ ಮತ್ತು ಹಗಲನ್ನು ಎರಡು ದೃಷ್ಟಾಂತಗಳಾಗಿ ಮಾಡಿದೆವು. ನಾವು ರಾತ್ರಿಯ ದೃಷ್ಟಾಂತವನ್ನು ಮಬ್ಬಾಗಿ ಮತ್ತು ಹಗಲಿನ ದೃಷ್ಟಾಂತವನ್ನು ಪ್ರಕಾಶಮಾನವಾಗಿ ಮಾಡಿದೆವು. ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಔದಾರ್ಯವನ್ನು ಅರಸುವುದಕ್ಕಾಗಿ ಮತ್ತು ವರ್ಷಗಳ ಸಂಖ್ಯೆ ಹಾಗೂ ಲೆಕ್ಕವನ್ನು ತಿಳಿಯುವುದಕ್ಕಾಗಿ. ನಾವು ಎಲ್ಲಾ ವಿಷಯಗಳನ್ನೂ ಸ್ಪಷ್ಟವಾಗಿ ವಿವರಿಸಿದ್ದೇವೆ. info
التفاسير:

external-link copy
13 : 17

وَكُلَّ اِنْسَانٍ اَلْزَمْنٰهُ طٰٓىِٕرَهٗ فِیْ عُنُقِهٖ ؕ— وَنُخْرِجُ لَهٗ یَوْمَ الْقِیٰمَةِ كِتٰبًا یَّلْقٰىهُ مَنْشُوْرًا ۟

ನಾವು ಪ್ರತಿಯೊಬ್ಬ ವ್ಯಕ್ತಿಯ ಶುಭ-ಅಶುಭವನ್ನು ಅವನ ಕೊರಳಿನಲ್ಲಿಯೇ ಬಂಧಿಸಿದ್ದೇವೆ. ಪುನರುತ್ಥಾನ ದಿನದಂದು ನಾವು ಅವನ ಮುಂದೆ ಅವನ ಕರ್ಮಪುಸ್ತಕವನ್ನು ಹಾಜರುಪಡಿಸುವೆವು. ಅವನು ಅದನ್ನು ತೆರೆದಿಟ್ಟ ಸ್ಥಿತಿಯಲ್ಲಿ ಕಾಣುವನು. info
التفاسير:

external-link copy
14 : 17

اِقْرَاْ كِتٰبَكَ ؕ— كَفٰی بِنَفْسِكَ الْیَوْمَ عَلَیْكَ حَسِیْبًا ۟ؕ

“ತಗೋ! ನಿನ್ನ ಪುಸ್ತಕವನ್ನು ಓದು! ಇವತ್ತು ನಿನ್ನನ್ನು ವಿಚಾರಣೆ ಮಾಡಲು ನೀನೇ ಸಾಕು!” (ಎಂದು ಅವನೊಡನೆ ಹೇಳಲಾಗುವುದು). info
التفاسير:

external-link copy
15 : 17

مَنِ اهْتَدٰی فَاِنَّمَا یَهْتَدِیْ لِنَفْسِهٖ ۚ— وَمَنْ ضَلَّ فَاِنَّمَا یَضِلُّ عَلَیْهَا ؕ— وَلَا تَزِرُ وَازِرَةٌ وِّزْرَ اُخْرٰی ؕ— وَمَا كُنَّا مُعَذِّبِیْنَ حَتّٰی نَبْعَثَ رَسُوْلًا ۟

ಯಾರಾದರೂ ಸನ್ಮಾರ್ಗವನ್ನು ಸ್ವೀಕರಿಸಿದರೆ ಅವನು ಅವನ ಒಳಿತಿಗಾಗಿಯೇ ಅದನ್ನು ಸ್ವೀಕರಿಸುತ್ತಾನೆ. ಯಾರಾದರೂ ದುರ್ಮಾರ್ಗವನ್ನು ಆರಿಸಿದರೆ ಅವನು ಅವನ ಕೆಡುಕಿಗಾಗಿಯೇ ಅದನ್ನು ಆರಿಸುತ್ತಾನೆ. ಪಾಪಗಳ ಭಾರವನ್ನು ಹೊರುವವರು ಇತರರು ಮಾಡಿದ ಪಾಪಗಳ ಭಾರವನ್ನು ಹೊರುವುದಿಲ್ಲ. ಒಬ್ಬ ಸಂದೇಶವಾಹಕರನ್ನು ಕಳುಹಿಸುವ ತನಕ ನಾವು ಯಾರನ್ನೂ ಶಿಕ್ಷಿಸುವುದಿಲ್ಲ. info
التفاسير:

external-link copy
16 : 17

وَاِذَاۤ اَرَدْنَاۤ اَنْ نُّهْلِكَ قَرْیَةً اَمَرْنَا مُتْرَفِیْهَا فَفَسَقُوْا فِیْهَا فَحَقَّ عَلَیْهَا الْقَوْلُ فَدَمَّرْنٰهَا تَدْمِیْرًا ۟

ನಾವು ಒಂದು ಊರನ್ನು ನಾಶ ಮಾಡಲು ಬಯಸಿದರೆ, ಅಲ್ಲಿರುವ ಸಂಪನ್ನರಿಗೆ (ಕೆಲವು) ಆದೇಶಗಳನ್ನು ನೀಡುತ್ತೇವೆ. ಅವರು ಅಲ್ಲಿ ದುಷ್ಕೃತ್ಯಗಳನ್ನು ಮಾಡತೊಡಗುತ್ತಾರೆ. ಆಗ ಅವರ ವಿಷಯದಲ್ಲಿ ಶಿಕ್ಷೆಯ ಮಾತು ಸಾಬೀತಾಗುತ್ತದೆ. ನಂತರ ನಾವು ಅದನ್ನು ಸಂಪೂರ್ಣ ನಾಶ ಮಾಡಿ ಬಿಡುತ್ತೇವೆ. info
التفاسير:

external-link copy
17 : 17

وَكَمْ اَهْلَكْنَا مِنَ الْقُرُوْنِ مِنْ بَعْدِ نُوْحٍ ؕ— وَكَفٰی بِرَبِّكَ بِذُنُوْبِ عِبَادِهٖ خَبِیْرًا بَصِیْرًا ۟

ನೂಹರ ನಂತರ ನಾವು ಎಷ್ಟೋ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ನಿಮ್ಮ ಪರಿಪಾಲಕನು (ಅಲ್ಲಾಹು) ಅವನ ದಾಸರು ಮಾಡುವ ಪಾಪಗಳ ಬಗ್ಗೆ ಸಾಕಷ್ಟು ಜ್ಞಾನವುಳ್ಳವನಾಗಿದ್ದಾನೆ ಮತ್ತು ಸೂಕ್ಷ್ಮವಾಗಿ ಗಮನಿಸುವವನಾಗಿದ್ದಾನೆ. info
التفاسير: