[1] ಅಂದರೆ ನೀವು ಆರ್ಥಿಕವಾಗಿ ದುರ್ಬಲರಾಗಿರುವ ಸಂದರ್ಭದಲ್ಲಿ—ಇಂತಹ ಸಂದರ್ಭಗಳಲ್ಲಿ ಎಲ್ಲರೂ ಅಲ್ಲಾಹನ ದಯೆಯನ್ನು ನಿರೀಕ್ಷಿಸುತ್ತಾರೆ—ಆಗ ನಿಮ್ಮ ಬಳಿಗೆ ಸಹಾಯ ಕೇಳಿ ಬರುವ ಸಂಬಂಧಿಕರು, ಬಡವರು ಮುಂತಾದವರಿಂದ ಮುಖ ತಿರುಗಿಸಬೇಕಾಗಿ ಬಂದರೆ, ಅಂದರೆ ಅವರಿಗೆ ನಿಮ್ಮ ಅಸಹಾಯಕತೆಯನ್ನು ತಿಳಿಸಬೇಕಾಗಿ ಬಂದರೆ, ಗಟ್ಟಿ ಸ್ವರದಲ್ಲಿ ಗದರಿಸುವ ರೀತಿಯಲ್ಲಿ ವರ್ತಿಸಬೇಡಿ. ಬದಲಿಗೆ, ಮೃದುವಾಗಿ ಮತ್ತು ಸೌಮ್ಯವಾಗಿ ಅವರಿಗೆ ನಿಮ್ಮ ಪರಿಸ್ಥಿತಿಯನ್ನು ತಿಳಿಸಿಕೊಡಿ.
[1] ಅಂದರೆ ನೀವು ಏನೂ ಖರ್ಚು ಮಾಡದೆ ಜಿಪುಣತನ ತೋರಬೇಡಿ. ಅದೇ ರೀತಿ ಅಮಿತವಾಗಿಯೂ ಖರ್ಚು ಮಾಡಬೇಡಿ.
[1] ಕೊಲೆಯಾದವರ ಕಡೆಯವರು ಪ್ರತೀಕಾರ ಪಡೆಯುವಾಗ ಎಲ್ಲೆ ಮೀರಬಾರದು. ಅಂದರೆ ಒಬ್ಬನ ಬದಲಿಗೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಕೊಲ್ಲುವುದು, ಕೊಂದ ನಂತರ ಅಂಗಾಂಗಗಳನ್ನು ಬೇರ್ಪಡಿಸುವುದು, ಕ್ರೂರವಾಗಿ ಮತ್ತು ಬರ್ಬರವಾಗಿ ಕೊಲ್ಲುವುದು ಇತ್ಯಾದಿ ಮಾಡಬಾರದು.