ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
105 : 17

وَبِالْحَقِّ اَنْزَلْنٰهُ وَبِالْحَقِّ نَزَلَ ؕ— وَمَاۤ اَرْسَلْنٰكَ اِلَّا مُبَشِّرًا وَّنَذِیْرًا ۟ۘ

ನಾವು ಇದನ್ನು (ಕುರ್‌ಆನನ್ನು) ಸತ್ಯದೊಂದಿಗೇ ಅವತೀರ್ಣಗೊಳಿಸಿದ್ದೇವೆ ಮತ್ತು ಅದು ಸತ್ಯದೊಂದಿಗೇ ಅವತೀರ್ಣವಾಗಿದೆ. ನಾವು ನಿಮ್ಮನ್ನು ಸುವಾರ್ತೆ ತಿಳಿಸುವುದಕ್ಕಾಗಿ ಮತ್ತು ಮುನ್ನೆಚ್ಚರಿಕೆ ನೀಡುವುದಕ್ಕಾಗಿಯೇ ಹೊರತು ಕಳುಹಿಸಿಲ್ಲ. info
التفاسير:

external-link copy
106 : 17

وَقُرْاٰنًا فَرَقْنٰهُ لِتَقْرَاَهٗ عَلَی النَّاسِ عَلٰی مُكْثٍ وَّنَزَّلْنٰهُ تَنْزِیْلًا ۟

ನೀವು ಈ ಕುರ್‌ಆನನ್ನು ಜನರಿಗೆ ಸಾವಕಾಶವಾಗಿ ಓದಿಕೊಡುವುದಕ್ಕಾಗಿ ನಾವು ಇದನ್ನು ಸ್ವಲ್ಪ ಸ್ವಲ್ಪವಾಗಿ ಅವತೀರ್ಣಗೊಳಿಸಿದ್ದೇವೆ. ನಾವು ಅದನ್ನು ನಿಮಗೆ ಹಂತ ಹಂತವಾಗಿ ಅವತೀರ್ಣಗೊಳಿಸಿದ್ದೇವೆ. info
التفاسير:

external-link copy
107 : 17

قُلْ اٰمِنُوْا بِهٖۤ اَوْ لَا تُؤْمِنُوْا ؕ— اِنَّ الَّذِیْنَ اُوْتُوا الْعِلْمَ مِنْ قَبْلِهٖۤ اِذَا یُتْلٰی عَلَیْهِمْ یَخِرُّوْنَ لِلْاَذْقَانِ سُجَّدًا ۟ۙ

ಹೇಳಿರಿ “ನೀವು ಇದರಲ್ಲಿ (ಕುರ್‌ಆನ್‍ನಲ್ಲಿ) ವಿಶ್ವಾಸವಿಡಿ ಅಥವಾ ವಿಶ್ವಾಸವಿಡಬೇಡಿ. ನಿಶ್ಚಯವಾಗಿಯೂ ಇದಕ್ಕೆ ಮೊದಲು ಜ್ಞಾನ ನೀಡಲಾದವರು ಯಾರೋ—ಅವರಿಗೆ ಇದನ್ನು ಓದಿಕೊಟ್ಚರೆ ಅವರು ಸಾಷ್ಟಾಂಗ ಮಾಡುತ್ತಾ ಗಲ್ಲಗಳ ಮೇಲೆ ಬೀಳುತ್ತಾರೆ.” info
التفاسير:

external-link copy
108 : 17

وَّیَقُوْلُوْنَ سُبْحٰنَ رَبِّنَاۤ اِنْ كَانَ وَعْدُ رَبِّنَا لَمَفْعُوْلًا ۟

ಅವರು ಹೇಳುತ್ತಾರೆ: “ನಮ್ಮ ಪರಿಪಾಲಕನು (ಅಲ್ಲಾಹು) ಪರಿಶುದ್ಧನು! ನಮ್ಮ ಪರಿಪಾಲಕನ (ಅಲ್ಲಾಹನ) ವಾಗ್ದಾನವು ಖಂಡಿತ ಜಾರಿಯಾಗುತ್ತದೆ.” info
التفاسير:

external-link copy
109 : 17

وَیَخِرُّوْنَ لِلْاَذْقَانِ یَبْكُوْنَ وَیَزِیْدُهُمْ خُشُوْعًا ۟

ಅವರು ಅಳುತ್ತಾ ಗಲ್ಲಗಳ ಮೇಲೆ ಬೀಳುತ್ತಾರೆ. ಅದು ಅವರಿಗೆ ವಿನಮ್ರತೆಯನ್ನು ಹೆಚ್ಚಿಸುತ್ತದೆ. info
التفاسير:

external-link copy
110 : 17

قُلِ ادْعُوا اللّٰهَ اَوِ ادْعُوا الرَّحْمٰنَ ؕ— اَیًّا مَّا تَدْعُوْا فَلَهُ الْاَسْمَآءُ الْحُسْنٰی ۚ— وَلَا تَجْهَرْ بِصَلَاتِكَ وَلَا تُخَافِتْ بِهَا وَابْتَغِ بَیْنَ ذٰلِكَ سَبِیْلًا ۟

(ಪ್ರವಾದಿಯವರೇ) ಹೇಳಿರಿ: “ನೀವು ಅಲ್ಲಾಹು ಎಂದು ಕರೆಯಿರಿ ಅಥವಾ ರಹ್ಮಾನ್ ಎಂದು ಕರೆಯಿರಿ. ನೀವು ಯಾವ ಹೆಸರಲ್ಲಿ ಕರೆದರೂ ಅವನಿಗೆ ಅತ್ಯುತ್ತಮವಾದ ಹೆಸರುಗಳಿವೆ.” ನೀವು ನಮಾಝನ್ನು ಏರಿದ ಧ್ವನಿಯಲ್ಲಿ ನಿರ್ವಹಿಸಬೇಡಿ. ಸಂಪೂರ್ಣ ತಗ್ಗಿದ ಧ್ವನಿಯಲ್ಲೂ ನಿರ್ವಹಿಸಬೇಡಿ. ಬದಲಿಗೆ, ಅವುಗಳ ನಡುವಿನ ಮಾರ್ಗವನ್ನು ಹುಡುಕಿರಿ. info
التفاسير:

external-link copy
111 : 17

وَقُلِ الْحَمْدُ لِلّٰهِ الَّذِیْ لَمْ یَتَّخِذْ وَلَدًا وَّلَمْ یَكُنْ لَّهٗ شَرِیْكٌ فِی الْمُلْكِ وَلَمْ یَكُنْ لَّهٗ وَلِیٌّ مِّنَ الذُّلِّ وَكَبِّرْهُ تَكْبِیْرًا ۟۠

ಹೇಳಿರಿ: “ಸರ್ವಸ್ತುತಿಗಳು ಅಲ್ಲಾಹನಿಗೆ ಮೀಸಲು. ಅವನಿಗೆ ಯಾವುದೇ ಸಂತಾನವಿಲ್ಲ. ವಿಶ್ವದ ಆಧಿಪತ್ಯದಲ್ಲಿ ಅವನಿಗೆ ಯಾವುದೇ ಪಾಲುದಾರರಿಲ್ಲ. ಯಾವುದೇ ಸಂರಕ್ಷಕನನ್ನು ಇಟ್ಟುಕೊಳ್ಳುವಷ್ಟು ಅವನು ದುರ್ಬಲನೂ ಅಲ್ಲ. ಅವನ ಮಹತ್ವವನ್ನು ಪೂರ್ಣರೀತಿಯಲ್ಲಿ ಕೊಂಡಾಡಿರಿ.” info
التفاسير: