ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
93 : 17

اَوْ یَكُوْنَ لَكَ بَیْتٌ مِّنْ زُخْرُفٍ اَوْ تَرْقٰی فِی السَّمَآءِ ؕ— وَلَنْ نُّؤْمِنَ لِرُقِیِّكَ حَتّٰی تُنَزِّلَ عَلَیْنَا كِتٰبًا نَّقْرَؤُهٗ ؕ— قُلْ سُبْحَانَ رَبِّیْ هَلْ كُنْتُ اِلَّا بَشَرًا رَّسُوْلًا ۟۠

ಅಥವಾ ನಿನಗೆ ಬಂಗಾರದ ಮನೆಯುಂಟಾಗುವ ತನಕ, ಅಥವಾ ನೀನು ಆಕಾಶಕ್ಕೆ ಏರಿ ಹೋಗುವ ತನಕ. ನಮಗೆ ಓದಲಾಗುವ ಒಂದು ಪುಸ್ತಕವನ್ನು ನೀನು ನಮಗೆ ಇಳಿಸಿಕೊಡುವ ತನಕ ನೀನು ಏರಿ ಹೋಗಿದ್ದೀ ಎಂದು ನಾವು ಖಂಡಿತ ನಂಬುವುದಿಲ್ಲ.” (ಪ್ರವಾದಿಯವರೇ) ಹೇಳಿರಿ: “ನನ್ನ ಪರಿಪಾಲಕನು (ಅಲ್ಲಾಹು) ಪರಿಶುದ್ಧನು! ನಾನು ಒಬ್ಬ ಮನುಷ್ಯನಾದ ಸಂದೇಶವಾಹಕ ಮಾತ್ರವಾಗಿದ್ದೇನೆ.”[1] info

[1] ಅಂದರೆ ನಾನು ನಿಮ್ಮಂತಹ ಒಬ್ಬ ಮನುಷ್ಯ. ನೀವು ಹೇಳುವ ಈ ಕಾರ್ಯಗಳನ್ನು ಮಾಡಲು ಮನುಷ್ಯನಿಗೆ ಸಾಧ್ಯವಿಲ್ಲ. ಆದ್ದರಿಂದ ಇವೆಲ್ಲವನ್ನೂ ಮಾಡಿ ತೋರಿಸಬೇಕೆಂದು ನೀವು ನನ್ನೊಡನೆ ಕೇಳುವುದರಲ್ಲಿ ಅರ್ಥವಿಲ್ಲ. ನಾನು ಅಲ್ಲಾಹನ ಸಂದೇಶವಾಹಕನಾಗಿದ್ದೇನೆ. ಅವನ ಸಂದೇಶಗಳನ್ನು ನಿಮಗೆ ತಲುಪಿಸಿಕೊಡುವುದು ಮಾತ್ರ ನನ್ನ ಕೆಲಸ. ನೀವು ಕೇಳುವಾಗಲೆಲ್ಲಾ ಪವಾಡಗಳನ್ನು ತೋರಿಸುವುದು ನನ್ನ ಕೆಲಸವಲ್ಲ. ಆದರೆ ಅಲ್ಲಾಹು ನನ್ನ ಮೂಲಕ ಪವಾಡ ತೋರಿಸಲು ಬಯಸಿದರೆ ನಾನು ಪವಾಡವನ್ನು ತೋರಿಸಬಲ್ಲೆ.

التفاسير: