Përkthimi i kuptimeve të Kuranit Fisnik - Përkthimi kanadezisht - Hamza Betur

Numri i faqes:close

external-link copy
275 : 2

اَلَّذِیْنَ یَاْكُلُوْنَ الرِّبٰوا لَا یَقُوْمُوْنَ اِلَّا كَمَا یَقُوْمُ الَّذِیْ یَتَخَبَّطُهُ الشَّیْطٰنُ مِنَ الْمَسِّ ؕ— ذٰلِكَ بِاَنَّهُمْ قَالُوْۤا اِنَّمَا الْبَیْعُ مِثْلُ الرِّبٰوا ۘ— وَاَحَلَّ اللّٰهُ الْبَیْعَ وَحَرَّمَ الرِّبٰوا ؕ— فَمَنْ جَآءَهٗ مَوْعِظَةٌ مِّنْ رَّبِّهٖ فَانْتَهٰی فَلَهٗ مَا سَلَفَ ؕ— وَاَمْرُهٗۤ اِلَی اللّٰهِ ؕ— وَمَنْ عَادَ فَاُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟

ಬಡ್ಡಿ ತಿನ್ನುವವರು ಯಾರೋ ಅವರು ಶೈತಾನನ ಸ್ಪರ್ಶದಿಂದ ಹುಚ್ಚು ಹಿಡಿದವನು ಎದ್ದೇಳುವಂತೆಯೇ ವಿನಾ ಎದ್ದೇಳುವುದಿಲ್ಲ. ನಿಶ್ಚಯವಾಗಿಯೂ ವ್ಯಾಪಾರವು ಬಡ್ಡಿಯಂತೆ ಎಂದು ಅವರು ಹೇಳಿದ್ದೇ ಅದಕ್ಕೆ ಕಾರಣ. ಆದರೆ ಅಲ್ಲಾಹು ವ್ಯಾಪಾರವನ್ನು ಅನುಮತಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷೇಧಿಸಿದ್ದಾನೆ. ಆದ್ದರಿಂದ, ಯಾರು ಅಲ್ಲಾಹನ ಕಡೆಯಿಂದ ಬಂದ ಉಪದೇಶವನ್ನು ಕೇಳಿದ ನಂತರ ಬಡ್ಡಿ ವ್ಯವಹಾರವನ್ನು ನಿಲ್ಲಿಸುತ್ತಾನೋ ಅವನಿಗೆ ಹಿಂದೆ ಪಡೆದುದರಲ್ಲಿ ದೋಷವಿಲ್ಲ; ಅವನ ವಿಚಾರಣೆಯು ಅಲ್ಲಾಹನಿಗೆ ಬಿಟ್ಟದ್ದು. ಆದರೆ ಯಾರು ಪುನಃ ಬಡ್ಡಿ ವ್ಯವಹಾರಕ್ಕೆ ಮರಳುತ್ತಾರೋ ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. info
التفاسير:

external-link copy
276 : 2

یَمْحَقُ اللّٰهُ الرِّبٰوا وَیُرْبِی الصَّدَقٰتِ ؕ— وَاللّٰهُ لَا یُحِبُّ كُلَّ كَفَّارٍ اَثِیْمٍ ۟

ಅಲ್ಲಾಹು ಬಡ್ಡಿಯನ್ನು ಅಳಿಸುತ್ತಾನೆ ಮತ್ತು ದಾನ ಧರ್ಮಗಳನ್ನು ಪೋಷಿಸುತ್ತಾನೆ. ಕೃತಘ್ನ ಮತ್ತು ಪಾಪಿಯಾದ ಯಾರನ್ನೂ ಅಲ್ಲಾಹು ಇಷ್ಟಪಡುವುದಿಲ್ಲ. info
التفاسير:

external-link copy
277 : 2

اِنَّ الَّذِیْنَ اٰمَنُوْا وَعَمِلُوا الصّٰلِحٰتِ وَاَقَامُوا الصَّلٰوةَ وَاٰتَوُا الزَّكٰوةَ لَهُمْ اَجْرُهُمْ عِنْدَ رَبِّهِمْ ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟

ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗುವವರು, ನಮಾಝ್ ಸಂಸ್ಥಾಪಿಸುವವರು ಮತ್ತು ಝಕಾತ್ ನೀಡುವವರು ಯಾರೋ—ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಪ್ರತಿಫಲವಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ. info
التفاسير:

external-link copy
278 : 2

یٰۤاَیُّهَا الَّذِیْنَ اٰمَنُوا اتَّقُوا اللّٰهَ وَذَرُوْا مَا بَقِیَ مِنَ الرِّبٰۤوا اِنْ كُنْتُمْ مُّؤْمِنِیْنَ ۟

ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಬಡ್ಡಿಯಲ್ಲಿ ಬರಲು ಬಾಕಿಯಿರುವುದನ್ನು ಬಿಟ್ಟುಬಿಡಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ. info
التفاسير:

external-link copy
279 : 2

فَاِنْ لَّمْ تَفْعَلُوْا فَاْذَنُوْا بِحَرْبٍ مِّنَ اللّٰهِ وَرَسُوْلِهٖ ۚ— وَاِنْ تُبْتُمْ فَلَكُمْ رُءُوْسُ اَمْوَالِكُمْ ۚ— لَا تَظْلِمُوْنَ وَلَا تُظْلَمُوْنَ ۟

ನೀವು ಅದನ್ನು ಮಾಡದಿದ್ದರೆ, ಅಲ್ಲಾಹನೊಡನೆ ಮತ್ತು ಅವನ ಸಂದೇಶವಾಹಕರೊಡನೆ ಹೋರಾಡಲು ಸಿದ್ಧರಾಗಿರಿ. ನೀವು ಪಶ್ಚಾತ್ತಾಪಪಟ್ಟರೆ ನಿಮ್ಮ ಬಂಡವಾಳವನ್ನು ನೀವಿಟ್ಟುಕೊಳ್ಳಬಹುದು. ನೀವು ಅನ್ಯಾಯ ಮಾಡಬಾರದು ಮತ್ತು ನಿಮಗೂ ಅನ್ಯಾಯವಾಗಬಾರದು. info
التفاسير:

external-link copy
280 : 2

وَاِنْ كَانَ ذُوْ عُسْرَةٍ فَنَظِرَةٌ اِلٰی مَیْسَرَةٍ ؕ— وَاَنْ تَصَدَّقُوْا خَیْرٌ لَّكُمْ اِنْ كُنْتُمْ تَعْلَمُوْنَ ۟

(ಸಾಲ ಪಡೆದವನು) ಕಷ್ಟದಲ್ಲಿದ್ದರೆ (ಅವನಿಗೆ) ನಿರಾಳತೆ ದೊರಕುವ ತನಕ ಕಾಲಾವಕಾಶ ನೀಡಿ. ನೀವು ಅದನ್ನು ದಾನವಾಗಿ ಬಿಟ್ಟುಬಿಟ್ಟರೆ ಅದು ನಿಮಗೆ ಅತ್ಯುತ್ತಮವಾಗಿದೆ. ನೀವು ತಿಳಿದವರಾಗಿದ್ದರೆ. info
التفاسير:

external-link copy
281 : 2

وَاتَّقُوْا یَوْمًا تُرْجَعُوْنَ فِیْهِ اِلَی اللّٰهِ ۫— ثُمَّ تُوَفّٰی كُلُّ نَفْسٍ مَّا كَسَبَتْ وَهُمْ لَا یُظْلَمُوْنَ ۟۠

ನಿಮ್ಮನ್ನು ಅಲ್ಲಾಹನ ಬಳಿಗೆ ಮರಳಿಸಲಾಗುವ ಒಂದು ದಿನವನ್ನು ಭಯಪಡಿರಿ. ನಂತರ ಪ್ರತಿಯೊಬ್ಬರಿಗೂ ಅವರು ಮಾಡಿದ ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. info
التفاسير: